ಹೋದಲ್ಲಿ ಬಂದಲ್ಲಿ ಆಂಕರ್ ಅನುಶ್ರೀಯವ್ರಿಗೆ ಒಂದೇ ಪ್ರಶ್ನೆ ಎದುರಾಗ್ತಾ ಇತ್ತು. ನಿಮ್ ಮದ್ವೆ ಯಾವಾಗ ಅಂತಾ. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇಂದು ಉದ್ಯಮಿ ರೋಷನ್‌ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಆಪ್ತ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆದಿದೆ. ಪಟಪಟ ಅಂತಾ ಮಾತಾಡೋ ಮಾತಿನ ಮಲ್ಲಿ ಅನುಶ್ರೀ ಮದುವೆ ಆಮಂತ್ರಣ ಪತ್ರ ಕೂಡ ಎಲ್ಲೆಡೆ ವೈರಲ್ ಆಗಿತ್ತು.
ಮದುವೆ ಮುನ್ನ ನಡೆಯುವ ಶಾಸ್ತ್ರಗಳಲ್ಲಿ ಅನುಶ್ರೀ ಹಾಗೂ ರೋಷನ್ ಮಿಂದೆದ್ದಿದ್ದಾರೆ. ಹಳದಿ ಶಾಸ್ತ್ರದ ಈ ಜೋಡಿಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೊಗಳನ್ನು ನೋಡಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ನವ ಜೋಡಿಗೆ ಶುಭವನ್ನು ಹಾರೈಸುತ್ತಿದ್ದಾರೆ. ಶುಭ ವಾರ ರಾಯರ ದಿನವೇ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಹಾಗೂ ರೋಷನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿರುವ ಒಂದು ಖಾಸಗಿ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ನೆರವೇರಿದೆ. ಕೊಡಗಿನ ಮೂಲದ ಉದ್ಯಮಿ ರೋಷನ್ ಅನುಶ್ರಿ ಜೊತೆ ಸಪ್ತಪತಿ ತುಳಿದಿದ್ದಾರೆ.
ಇನ್ನು ಈ ಜೋಡಿಯ ಕಲ್ಯಾಣಕ್ಕೆ ಇಡೀ ಸ್ಯಾಂಡಲ್‌ವುಡ್ ಚಿತ್ರರಂಗವೇ ಹಾರೈಸಿದೆ. ಇನ್ನು ಅನು ರೋಷನ್ ಕಲ್ಯಾಣಕ್ಕೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೇ ಅಣ್ಣಾವ್ರ ಕುಟುಂಬದಿಂದ ಶಿವಣ್ಣ, ಯುವ ರಾಜ್‌ಕುಮಾರ್, ಶರಣ್, ವಿನಯ್ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಬಹುತೇಕ ಇಡೀ ಸ್ಯಾಂಡಲ್‌ವುಡ್ ಮದುವೆಯ ಮೆರಗನ್ನ ಇಮ್ಮಡಿಗೊಳಿಸಿದೆ. .
Read Also : ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಪರಿಣಿತಿ ಚೋಪ್ರಾ