ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಭರದಿಂದ ಸಾಗುತ್ತಿದ್ದು, ತಾರಾಗಣವೇ ಈ ಸಿನಿಮಾದಲ್ಲಿ ನಟಿಸುತ್ತಿದೆ. ಈಗ ಈ ಸಿನಿಮಾದಲ್ಲಿ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಕೈಜೊಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದು ಬೇರೆ ಯಾರೂ ಅಲ್ಲ ಕನ್ನಡದ ಬಾದ್‌ಷಾ ಕಿಚ್ಚ ಸುದೀಪ್. ಇದಕ್ಕೆ ಸಾಕ್ಷಿ ಎಂಬಂತೆ ಸಿನಿಮಾ ಸೆಟ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಾದ್‌ಷಾ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಧ್ರುವ ಸರ್ಜಾ ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಭರ್ಜರಿ ಆಕ್ಷನ್ ಹೊಂದಿರುವ ಈ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಜನರು ತುಂಬಾ ಇಷ್ಟಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಅನೇಕ ದೊಡ್ಡ ಸ್ಟಾರ್‌ಗಳು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ಇದೀಗ ಕಿಚ್ಚಾ ಸುದೀಪ್ ಸಹ ಕೈಜೋಡಿಸಿದಂತಿದೆ. ರಾಮೋಜಿಯಲ್ಲಿ ಕೆಡಿ ಸಿನಿಮಾ ಚಿತ್ರೀಕರಣಕ್ಕಾಗಿ ದೊಡ್ಡ ರೈಲಿನ ಸೆಟ್ ಹಾಕಿ ಆಕ್ಷನ್ ದೃಶ್ಯದ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಸಿನಿಮಾ ಸೆಟ್ಗೆ ಕಿಚ್ಚ ಸುದೀಪ್ ಭೇಟಿ ನೀಡಿದ ಫೋಟೋ ವೈರಲ್ ಆಗುತ್ತಿದೆ..

Read Also EPS-95 ಪಿಂಚಣಿದಾರರಿಗೆ ಗುಡ್ ನ್ಯೂಸ್ : ಕನಿಷ್ಠ ಪಿಂಚಣಿ 7 ಪಟ್ಟು ಹೆಚ್ಚಳ
ಕಿಚ್ಚ ಈ ಹಿಂದೆ ಪ್ರೇಮ್ ನಿರ್ದೇಶನ್ ದಿ ವಿಲನ್ ಸಿನಿಮಾದಲ್ಲಿ ನಟಿಸಿದ್ದು, ಕೆಡಿ ಸಿನಿಮಾಗಾಗಿ ಸುದೀಪ್‌ರನ್ನ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ. ಕೆಡಿ ಸಿನಿಮಾ 80ರ ದಶಕದ ರೌಡಿಸಂ ಕತೆಯಾಗಿದ್ದು ಇದರಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್ ಹಾಗೂ ಅಭಿಜಿತ್ ರಂತಹ ಸ್ಟಾರ್ ನಟರು ಅಭಿನಯಿಸುತ್ತಿದ್ದು, ಈ ಪಟ್ಟಿಗೆ ಸುದೀಪ್ ಸಹ ಸೇರಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಎಲ್ಲಾ ತಾರಾಗಣದಿಂದ ಕೆಡಿ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.
