Advertisement

ಅಂತೂ ಇಂತೂ ಹುಡುಗಿ ಜೊತೆ ಎಂಗೇಜ್‌ ಆದ ಚಿಕ್ಕಣ್ಣ.. ಕಾಮಿಡಿ ಕಿಂಗ್‌ ಚಿಕ್ಕಣ್ಣಗೆ ಕೂಡಿ ಬಂತು ಕಂಕಣ ಭಾಗ್ಯ! ಸೈಲೆಂಟ್ ಆಗಿ ಎಂಗೇಜ್ ಉಪಾಧ್ಯಕ್ಷನ ಕೈ ಹಿಡಿಯೋ ಹುಡುಗಿ ಯಾರು ಗೊತ್ತಾ? ಚಿಕ್ಕಣ್ಣ ಮದುವೆ ಲವ್‌- ಆರೆಂಜ್‌ ಅನ್ನೋದ್ರ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

ಕರುನಾಡಿನ ಹೆಮ್ಮೆಯ ಹಾಸ್ಯನಟನಾಗಿ ಮಿಂಚಿದ್ದ ಚಿಕ್ಕಣ್ಣನಿಗೆ ಎಲ್ಲಿ ಹೋದ್ರೂ ಮದುವೆ ಯಾವಾಗ ಅಂತ ಕೇಳಿದವರೇ ಜಾಸ್ತಿ.. 40 ವರ್ಷ ಆಗಿದ್ರು ಮೋಸ್ಟ್‌ ವಾಂಟೆಡ್‌ ಬ್ಯಾಚುಲರ್‌ ಆಗಿದ್ದ ಚಿಕ್ಕಣ್ಣ ಇದೀಗ ಕೊನೆಗೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮಂಡ್ಯದ ಹುಡುಗಿ ಜೊತೆ ನಟ ಚಿಕ್ಕಣ್ಣ ಸೈಲೆಂಟಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಎಂಬ ಹುಡುಗಿ ಜೊತೆ ನಟ ಚಿಕ್ಕಣ್ಣ ಮದುವೆ ನಿಶ್ಚಯವಾಗಿದೆ ಎನ್ನಲಾಗಿದೆ. ಈಗಾಗಲೇ ಚಿಕ್ಕಣ್ಣ ಮತ್ತು ಹುಡುಗಿ ಪಾವನಾ ಜೊತೆ ನಿಂತಿರುವ ಫೋಟೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2 ಮನೆಯವರು ಹೂ ಮುಡಿಸುವ ಶಾಸ್ತ್ರ ನೇರವೇರಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ಮುಂದಿನ ವಾರ ನಿಗದಿ ಮಾಡಲಿದ್ದಾರಂತೆ.

ಮಹದೇವಪುರ ಗ್ರಾಮದ ಸಾವಿತ್ರಮ್ಮ ಹಾಗೂ ನಗರಾಜು ದಂಪತಿಯ ಮಗಳಾಗಿರುವ ಪಾವನಾ ಉದ್ಯಮಿಯಾಘಿದ್ದಾರೆ. ಮೈಸೂರಿನಲ್ಲಿ ಪಿಯುಸಿ ಸೇರಿ ಉನ್ನತ ಶಿಕ್ಷಣ ಪೂರೈಸಿದ್ದಾರೆ. ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಮುಗಿಸಿರುವ ಪಾವನಾಗೆ, ಪ್ರಾಣಿಗಳು, ಪ್ರಕೃತಿ ಅಂದರೆ ಪಾವನಾಗೆ ತುಂಬ ಇಷ್ಟ. ಇನ್‌ಸ್ಟಾಗ್ರಾಮ್‌ನಲ್ಲಿ ಯಾರೋ ನನ್ನ ಹೃದಯ ಕದ್ದಿದ್ದಾರೆ ಎಂಬ ಟೈಟಲ್‌ ಅಡಿಯಲ್ಲಿ ಪಾವನಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಬಯೋ ಡಿ ಕಾಂಪೋಸಬಲ್‌ ಮೆಟೀರಿಯಲ್ ಡಿಸ್ಟ್ರಿಬ್ಯೂಟರ್ ಆಗಿ ಗುರ್ತಿಸಿಕೊಂಡಿದ್ದಾರೆ ಅಂತಾ ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ. ಸದ್ಯ ಚಿಕ್ಕಣ್ಣ ಅವರು ಪಾವನಾ ಕೈ ಹಿಡಿದುಕೊಂಡು ನಿಂತಿರುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದು, ಆಲ್‌ ಓವರ್‌ ಕರ್ನಾಟಕ ಸಖತ್‌ ಸೌಂಡ್‌ ಮಾಡ್ತಿದೆ.

ಅದೇನೆ ಆಗಲಿ… ಮೈಸೂರಿನ ಸಾಮಾನ್ಯ ಹಳ್ಳಿಹೈದ ಗಾರೆಕೆಲಸ ಮಾಡ್ಕೊಂಡು, ಕಾಮಿಡಿ ಶೋ ಹಾಗೂ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರದ ಮೂಲಕ ನಗೆಚಟಾಕಿ ಹಾರಿಸುವ ಚಿಕ್ಕಣ ಈಗ ಸ್ಯಾಂಡಲ್‌ವುಡ್‌ನ ಹೀರೋ ಆಗಿದ್ದಾರೆ. ಸದ್ಯ ಲಕ್ಷ್ಮಿ ಪುತ್ರ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅಕ್ಟೋಬರ್‌ನಲ್ಲಿ ಮತ್ತೊಂದು ಸಿನಿಮಾ ಶುರುವಾಗಲಿದೆ ಎಂದು ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ. ಇಷ್ಟು ದಿನ ಮನೆ ಜವಾಬ್ದಾರಿ ಸಿನಿಮಾ ಕೆಲಸ ಅಂತ ಓಡಾಡುತ್ತಿದ್ದ, ಉಪಾಧ್ಯಕ್ಷ ಕೊನೆಗೂ ಮದುವೆ ಆಗುತ್ತಿದ್ದು, ಫ್ಯಾನ್ಸ್‌ ಆಲ್‌ದಿಬೆಸ್ಟ್‌ ಅಂತಾ ವಿಶ್‌ ಮಾಡ್ತಿದ್ದಾರೆ.

Read Also :ಅನುಶ್ರೀ ಕಲ್ಯಾಣ ವೈಭೋಗ.. ಮದುವೆ ಸಂಭ್ರಮದಲ್ಲಿ ಅಪ್ಪುವನ್ನು ಮರೆತಿಲ್ಲ..!

Share.
Leave A Reply