ಡೆವಿಲ್‌ ಅಬ್ಬರಕ್ಕೆ ದಾಖಲೆಗಳು ಪುಡಿ ಪುಡಿ!, ಇದ್ರೆ ನೆಮ್ಮದಿಯಾಗ್ ಇರ್ಬೇಕು, ಡಿ ಬಾಸ್‌ ಫ್ಯಾನ್ಸ್‌ ಹಬ್ಬ ಮಾಡ್ಬೇಕು. ಅಬ್ಬಬ್ಬಾ.. ಡೆವಿಲ್ ಸಾಂಗ್ ಕ್ರೇಜ್, ಒಂದೇ ದಿನಕ್ಕೆ ಕೋಟಿ ಕೋಟಿ ವ್ಯೂವ್ಸ್.. ಸಾರಥಿ ಹಿಸ್ಟರಿ ರಿಪೀಟ್ ಆಗಿದ್ದು, ಡಿ ಅಭಿಮಾನಿಗಳ ಸಡಗರದಲ್ಲಿದ್ದಾರೆ.

ಡೆವಿಲ್‌… ಡೆವಿಲ್‌… ಡೆವಿಲ್‌ ಕರ್ನಾಟಕದ ಗಲ್ಲಿ ಗಲ್ಲಿಯಲ್ಲಿ ಯಾರನ್ನೇ ಕೇಳಿದ್ರೂ ಹೇಳೋದು ಇದೊಂದೇ ಉತ್ತರ, ದರ್ಶನ್‌ ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಆದ್ರೆ ಅವರ ಅಭಿಮಾನಿಗಳು ಮಾತ್ರ ದರ್ಶನ್‌ ಕೈ ಬಿಟ್ಟಿಲ್ಲ. ಬಹುನಿರೀಕ್ಷೆಯ ದರ್ಶನ್ ನಟನೆಯ ಡೆವಿಲ್ ಮೂವಿಯ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಹಾಡು ಅದ್ಭುತವಾಗಿದ್ದು, ದರ್ಶನ್​ ಕೂಡ ಮಸ್ತ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಗ್ಲಾಮರ್‌ ಲುಕ್‌ನಲ್ಲಿ ದರ್ಶನ್‌

ಅಭಿಮಾನಿಗಳಿಗೆ ಇಷ್ಟವಾಗುವ ರೀತಿ ಸ್ಟೈಲೀಶ್​ ಆಗಿ, ಗ್ಲಾಮರ್​ ಲುಕ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ದೀಪಕ್ ಬಾಲು ಅವರು ಹಾಡಿದ್ದು ಅಜನೀಶ್ ಲೋಕನಾಥ್ ಅವರ ಸಂಗೀತ ಮನಮೋಹಕವಾಗಿದೆ. ಅನಿರುದ್ಧ ಶಾಸ್ತ್ರಿ ಲಿರಿಕಲ್ ಕೇಳುಗರಿಗೆ ವ್ಹಾವ್​ ಎನಿಸುತ್ತದೆ. ಸಂತು ಮಾಸ್ಟರ್ ಅವರ ಕೋರಿಗ್ರಾಫ್​ ಕಣ್ಣಿಗೆ ಕುಕ್ಕುವಂತೆ ಸೊಗಸಾಗಿ ಇದೆ. ಎಲ್ಲದಕ್ಕಿಂತ ದರ್ಶನ್ ಮತ್ತೊಮ್ಮೆ ಸಿನಿ ರಂಗದಲ್ಲಿ ಗೆಲ್ಲುವುದು ಪಕ್ಕಾ ಎನ್ನಬಹುದು.

10 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್

ಇನ್ನೂ ಡೆವಿಲ್ ಚಿತ್ರದ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ರಿಲೀಸ್ ಆದ ಒಂದೇ ದಿನಕ್ಕೆ 10 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್ ಬಂದಿದೆ. ಅಷ್ಟೊಂದು ಕ್ರೇಜ್ ಕ್ರಿಯೇಟ್ ಮಾಡಿರೋ ಈ ಹಾಡಿಗೆ ರೀಲ್ಸ್‌ ಕೂಡ ಕ್ರಿಯೇಟ್ ಆಗಿವೆ. ವಿಶೇಷವೆಂದ್ರೆ ಹಾಡು ರಿಲೀಸ್ ಆದ ದಿನವೇ ಈ ಹಾಡಿಗೆ ರೀಲ್ಸ್‌ ಕ್ರಿಯೇಟ್ ಆಗಿವೆ. ಮಕ್ಕಳು ಮತ್ತು ಯುವಕರು-ಯುವತಿಯರು ರೀಲ್ಸ್ ಮೇಲೆ ರೀಲ್ಸ್ ಮಾಡ್ತಾನೇ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಅನ್ನುವ ಹಾಗೆ ಸೀರಿಯಲ್ ಮತ್ತು ಸಿನಿಮಾದವ್ರು ರೀಲ್ಸ್ ಮಾಡಿದ್ದಾರೆ. ಸದ್ಯ ದಚ್ಚು ಜೈಲಿನಲ್ಲಿ ಇದ್ರು ಅವರ ಫ್ಯಾನ್ಸ್‌ ಮಾತ್ರ ಡೆವಿಲ್‌ ಸಿನಿಮಾ ಪ್ರಚಾರಕ್ಕೆ ದೊಡ್ಡ ಮಟ್ಟದ ಸಾಥ್‌ ಕೊಟ್ಟಿದ್ದು, ಸಾರಥಿ ದಿನಗಳ ಹಿಸ್ಟರಿ ರಿಪೀಟ್‌ ಆಗೋದು ಪಕ್ಕಾ ಅಂತ ಗಾಂಧಿನಗರ ಪಂಡಿತರು ಭವಿಷ್ಯ ನುಡಿದ್ದಾರೆ.

ಕೆಜಿಎಫ್‌ ದಾಖಲೆ ಉಡೀಸ್‌

ಕೆಜಿಎಫ್‌ನ ಸಲಾಂ ರಾಕಿಬಾಯ್‌ ಹಾಡು ಕೂಡ ಭಾರಿ ಸೆನ್ಸೇಷನ್‌ ಸೃಷ್ಟಿಸಿತ್ತು.. ರಿಲೀಸ್‌ ಆದ ಒಂದೇ ದಿನಕ್ಕೆ 9 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್‌ ಪಡೆದು ದಾಖಲೆ ಬರೆದಿತ್ತು. ಆದ್ರೀಗ ದಾಸನ ಡೆವಿಲ್‌ ಸಿನಿಮಾದ ಹಾಡು ಕೆಜಿಎಫ್‌ ಸಾಂಗ್‌ನ ಹಾಡಿನ ದಾಖಲೆ ಮುರಿದಿದೆ. ಕೆಜಿಎಫ್‌ ಹಾಡು ರಿಲೀಸ್‌ ಆದ ಒಂದೇ ದಿನಕ್ಕೆ 9 ಮಿಲಿಯನ್‌ ವ್ಯೂವ್ಸ್‌ ಪಡೆದಿದ್ರೆ, ಈಗ ಡೆವಿಲ್‌ ಸಿನಿಮಾದ ಸಾಂಗ್‌ ರಿಲೀಸ್‌ ಆದ ಒಂದೇ ದಿನಕ್ಕೆ 10 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್‌ ಪಡೆದು ಹೊಸ ಚರಿತ್ರೆ ಸೃಷ್ಟಿಸಿದೆ.

ಡೆವಿಲ್‌ಗೆ ಮೂಹುರ್ತ ಫಿಕ್ಸ್‌..

ಆದೇನ್‌ ಆಗಲಿ… ದರ್ಶನ್‌ ಜೈಲಿನಲ್ಲಿದ್ರೂ, ಹೊರಗಿದ್ರೂ ಅವರ ಅಭಿಮಾನಿಗಳು ಮಾತ್ರ ಅವರನ್ನ ಬಿಟ್ಟುಕೊಡಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಸದ್ಯ ಬಿಡುಗಡೆ ಆಗಿರುವ ಒಂದು ಹಾಡಿಗೆ ದಾಖಲೆ ಬರೆದಿರುವ ಡೆವಿಲ್‌, ಡಿಸೆಂಬರ್‌ 12ಕ್ಕೆ ತೆರೆ ಮೇಲೆ ಬರ್ತಿದೆ. ಈ ಬಾರಿ ಬಾಕ್ಸ್‌ಆಫೀಸ್‌ ಚಿಂದಿಯಾಗೋದು ಗ್ಯಾರಂಟಿ ಅಂತಾ ಫ್ಯಾನ್ಸ್‌ ಫುಲ್‌ ಜೋಶ್‌ನಲ್ಲಿ ಇರೋದಂತೂ ಸತ್ಯ.

Read Also : ಯೂಟ್ಯೂಬ್‌ಗೆ ಗುಡ್‌ಬೈ ಹೇಳಿದ್ರಾ ಡಾಕ್ಟರ್‌ ಬ್ರೋ..? ಈ ಸಲ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ?

Share.
Leave A Reply