ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಡೆವಿಲ್‌ ಶೂಟಿಂಗ್‌ ವೇಳೆ ಏಕಾಏಕಿ ಅಡ್ಡಡ್ಡ ಮಲಗಿಬಿಟ್ಟಿದ್ದಾರೆ.. ದರ್ಶನ್‌ ತೀವ್ರ ನೋವಿನಿಂದ ನರಳಾಡುತ್ತಿದ್ದಾಗ ಅಲ್ಲಿದ್ದವರೆಲ್ಲಾ ಗಾಬರಿಗೊಂಡು ಹಾಸಿಗೆ ತಂದು ಕೊಟ್ಟಿದ್ದಾರೆ.. ಹಾಸಿಗೆ ತರುತ್ತಿದ್ದಂತೆ ದರ್ಶನ್‌ ದಿಢೀರ್‌ ಮಲಗಿ, ಒಂದಷ್ಟು ಸಮಯ ಹಾಗೆ ಕಾಲ ಕಳೆದಿದ್ದಾರೆ.. ಇದೀಗ ದರ್ಶನ್‌ ನೋವಿನಿಂದ ನರಳಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್‌ ಬೆನ್ನು ನೋವಿನ ಸಮಸ್ಯೆ ಕಾರಣ ಜಾಮೀನಿನ ಮೇಲೆ ಹೊರ ಬಂದಿದ್ರು.. ಆದ್ರೆ ಕೆಲವು ತಿಂಗಳ ಬಳಿಕ ಅವರ ಬೇಲ್‌ ರದ್ದಾಗಿ ದರ್ಶನ್‌ ಮತ್ತೆ ಜೈಲು ಸೇರಿದ್ದಾರೆ. ಸಾಕಷ್ಟು ಜನರು ಅವರಿಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ ಅಂತ ಟೀಕೆ ಕೂಡ ಮಾಡ್ತಿದ್ರು.. ಆದ್ರೆ ಇದರ ಬೆನ್ನಲ್ಲೇ ದರ್ಶನ್‌ ವಿಡಿಯೋ ವೈರಲ್‌ ಆಗಿದೆ.

ಡೆವಿಲ್‌ ಶೂಟಿಂಗ್‌ ಸಮಯದಲ್ಲಿ ದರ್ಶನ್‌ಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆ ಅಂತ ಹೇಳಲಾಗ್ತಿದೆ.. ಅದೇ ಬೆನ್ನು ನೋವಿನಲ್ಲೇ ಅವರು ಇಡೀ ಶೂಟಿಂಗ್‌ ಮುಗಿಸಿಕೊಟ್ಟಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.. ಎಷ್ಟೇ ನೋವಿದ್ದರು ಸಿನಿಮಾಗೆ ತೊಂದರೆ ಆಗಬಾರದೆಂದು ಅವರು ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ರಂತೆ.. ಆದ್ರೆ ಬೆನ್ನು ನೋವು ತೀವ್ರವಾಗಿ ಉಲ್ಬಣಗೊಂಡ ಕಾರಣ ಅವರು ನರಳಾಡಿದ್ದಾರೆ ಎನ್ನಲಾಗಿದೆ.. ಭೂಮಿಗೆ ಮಂಡಿಯೂರಿ ತನಗೆ ನೋವು ತಡಿಯಲು ಆಗ್ತಿಲ್ಲ ಅಂತ ದರ್ಶನ್‌ ಯಾತನೆ ಅನುಭವಿಸುತ್ತಿರುವ ವಿಡಿಯೋ ಈಗ ಫುಲ್‌ ವೈರಲ್‌ ಆಗ್ತಿದೆ.. ದರ್ಶನ್‌ ನೋವನ್ನ ಟೀಕಿಸುತ್ತಿದ್ದವರು ಈಗ ಏನು ಹೇಳುತ್ತೀರಿ ಅಂತ ದರ್ಶನ್‌ ಅಭಿಮಾನಿಗಳು ಕಮೆಂಟ್ಸ್‌ ಹಾಕ್ತಿದ್ದಾರೆ.. ಜೊತೆಗೆ ದರ್ಶನ್‌ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲೆಂದು ಬೇಡಿಕೊಳ್ಳುತ್ತಿದ್ದಾರೆ.. ಕೇವಲ ದರ್ಶನ್‌ ಫ್ಯಾನ್ಸ್‌ ಅಲ್ಲದೇ ಎಲ್ಲಾ ನಟರ ಫ್ಯಾನ್ಸ್‌ ಕೂಡ ದರ್ಶನ್‌ ವಿಡಿಯೋ ನೋಡಿ ಬೇಸರಗೊಂಡಿದ್ದಾರೆ..

Read Also : ರಾಜಕೀಯವಾಗಿ ಬದುಕಿದ್ದೇನೆ ಅಂತ ತೋರಿಸಿಕೊಳ್ಳುವ ಪ್ರಯತ್ನ : ಪ್ರತಾಪ್‌ ಸಿಂಹಗೆ ಡಿಕೆಶಿ ಪಂಚ್‌

Share.
Leave A Reply