ಕಾಂತಾರಾ ಅ ಲೆಜೆಂಡ್‌ ಚ್ಯಾಪ್ಟರ್-1‌ ಶೀರ್ಷಿಕೆಯಡಿ ಕಾಂತಾರ ಪ್ರಿಕ್ವೆಲ್‌ನ ಟ್ರೈಲರ್‌ ರಿಲೀಸ್‌ ಆಗಿದ್ದು, ಜಗತ್ತಿನಾದ್ಯಂತ ಭಾರಿ ಸೆನ್ಸೇಷನ್‌ ಸೃಷ್ಟಿಸಿದೆ. ರಿಷಭ್‌ ಶೆಟ್ಟಿ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದೈವಿಕತೆಯ ಜೊತೆ ಭಯ, ಭಕ್ತಿ ಎಲ್ಲವನ್ನೂ ಶೆಟ್ರು ಈ ಸಿನಿಮಾದಲ್ಲಿ ತೋರಿಸಿದ್ದಾರೆ ಅನ್ನೋದು ಟ್ರೈಲರ್‌ ನೋಡಿಯೇ ಗೊತ್ತಾಗ್ತಾ ಇದೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೈಲರ್‌ ರಿಲೀಸ್‌ ಆಗಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ಜನರು ಟ್ರೇಲರ್‌ ವೀಕ್ಷಿಸಿದ್ದಾರೆ.

ಇನ್ನು, ರಿಷಬ್‌ ಶೆಟ್ಟಿ ಅಭಿಯನದ ಕಾಂತಾರ 2022ರಲ್ಲಿ ತೆರೆ ಕಂಡಿತ್ತು. ಲೋ ಬಜೆಟ್‌ನಲ್ಲಿ ತಯಾರಾಗಿದ್ದ ಕಾಂತಾರ ನೂರಾರು ಕೋಟಿ ಕೊಳ್ಳೆ ಹೊಡೆದು ದೇಶಾದ್ಯಂತ ರಿಲೀಸ್‌ ಆಗಿ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿತ್ತು. ಕಾಂತಾರ ಸೀಕ್ವೆಲ್‌ನಲ್ಲಿ ಸಪ್ತಮಿಗೌಡ ನಾಯಕಿಯಾಗಿ ಮಿಂಚಿದ್ರು.. ಇದೀಗ ಅಕ್ಟೋಬರ್‌ 2ರಂದು ಕಾಂತಾರ ಚ್ಯಾಪ್ಟರ್‌ 1 ರಿಲೀಸ್‌ ಆಗ್ತಾ ಇದ್ದು, ಮತ್ತೆ ರೆಕಾರ್ಡ್‌ ಕ್ರಿಯೇಟ್‌ ಮಾಡೋ ಎಲ್ಲಾ ಸಾಧ್ಯತೆಗಳೂ ಇವೆ. ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವ ಕಾಂತಾರ ಪ್ರೀಕ್ವೆಲ್‌, 5 ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಇನ್ನು, ನಟಿ ರುಕ್ಮಿಣಿ ವಸಂತ್‌, ಯುವರಾಣಿ ಕನಕವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

Share.
Leave A Reply