ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. `K47′ (ಕಿಚ್ಚ 47) ಹೆಸರಿನಲ್ಲಿ ಚಿತ್ರೀಕರಣವಾಗುತ್ತಿರುವ ಕಿಚ್ಚನ ಹೊಸ ಸಿನಿಮಾದ ಟೈಟಲ್‌ ಕೂಡ ರಿಲೀಸ್‌ ಆಗಿದ್ದು, ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ.

ಇಂದು ಕಿಚ್ಚ ಸುದೀಪ್‌ ಅವರ ಮತ್ತೊಂದು ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ರಿಲೀಸ್‌ ಆಗಿದ್ದು, ಮಾರ್ಕ್‌ ಅಂತಾ ಹೆಸರಿಡಲಾಗಿದೆ. ಇಂದು ಸುದೀಪ್‌ ಅವರ 52ನೇ ವರ್ಷದ ಹಟ್ಟುಹಬ್ಬ ಹಿನ್ನಲೆ ಹೊಸ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟ್‌ರ್‌ ಅನ್ನ ಚಿತ್ರತಂಡ ರಿಲೀಸ್‌ ಮಾಡಿ, ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಅಷ್ಟೇಅಲ್ಲದೇ ಮಧ್ಯರಾತ್ರಿಯಿಂದ ಸುದೀಪ್‌ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇನ್ನು ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ಸ್ಟಾರ್ ಸಿನಿಮಾಗಳಿಗೆ ಕಿಚ್ಚ ಸುದೀಪ್ ಟಕ್ಕರ್ ಕೊಡುತ್ತಾರೆ ಅಂತ ಹೇಳಲಾಗಿತ್ತು. ಅದೀಗ ನಿಜವಾಗಿದೆ. ಕಿಚ್ಚ ಸುದೀಪ್ ಈ ವರ್ಷ ತಾವು ಅಂದುಕೊಂಡಂತೆ ಒಂದು ಸಿನಿಮಾವನ್ನ ತಮ್ಮ ಅಭಿಮಾನಿಗಳಿಗೆ ದರ್ಶನ ಮಾಡಿಸಲು ಶಪಥ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 25ರಂದು ತೆರೆಕಂಡ ಮ್ಯಾಕ್ಸ್ ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು.

Read Also : ಕೆಜಿಎಫ್‌ ದಾಖಲೆ ಉಡೀಸ್ ಮಾಡಿದ ಡೆವಿಲ್‌.. ಸೋಷಿಯಲ್‌ ಮೀಡಿಯಾದಲ್ಲಿ ರೀಲ್‌ ವೈರಲ್‌..!

Share.
Leave A Reply