Author: chandrakant

ಭಾರತದಾದ್ಯಂತ ಜನರೊಂದಿಗೆ ಭಾವನಾತ್ಮಕ ನಂಟು ಬೆಸೆಯುವಲ್ಲಿ ಕಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಟೆಲಿವಿಷನ್‌ನ ಕಾಲ್ಪನಿಕ ಧಾರಾವಾಹಿಗಳು ವೀಕ್ಷಕರ ದೈನಂದಿನ ಬದುಕಿನ ಭಾಗವಾಗಿದ್ದು, ಅವುಗಳಲ್ಲಿನ ಪಾತ್ರಗಳ ಕನಸುಗಳು, ಸವಾಲುಗಳು ಮತ್ತು ಜೀವನದ ಪಯಣಗಳು ವೀಕ್ಷಕರಿಗೆ ತಮ್ಮದೇ ಕಥೆಯಂತೆ ಭಾಸವಾಗುತ್ತವೆ. ವೀಕ್ಷಕರು ಮತ್ತು ಕಥೆಗಳ ನಡುವಿನ ಈ ವಿಶೇಷ ನಂಟನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ZEE ಮತ್ತು Google Search ಕೈಜೋಡಿಸಿದ್ದು, ಭಾರತದಲ್ಲಿ ಮೊದಲ ಬಾರಿಗೆ ಕಾಲ್ಪನಿಕ ಕಥೆಗಳ ಆಧಾರಿತ AI Search ಏಕೀಕರಣವನ್ನು ಪರಿಚಯಿಸಿವೆ. ಇದರ ಮೂಲಕ ZEE TVಯ ಜನಪ್ರಿಯ ಧಾರಾವಾಹಿಗಳಾದ ‘ತುಮ್ ಸೆ ತುಮ್ ತಕ್’ ಮತ್ತು ‘ಗಂಗಾ ಮಾಯಿ ಕಿ ಬೇಟಿಯಾನ್’ಗಳ ಕಥಾಲೋಕಕ್ಕೆ Google Searchನ AI Mode ಅನ್ನು ಪರಿಚಯಿಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಆರಂಭವಾಗುವ ಈ ಸಹಯೋಗವು ಸಾಂಪ್ರದಾಯಿಕ ಉತ್ಪನ್ನ ಪ್ರಚಾರಕ್ಕಿಂತ ಭಿನ್ನವಾಗಿ, Google Searchನ AI Mode ಅನ್ನು ಧಾರಾವಾಹಿಗಳ ಕಥೆಯೊಂದಿಗೆ ಸಹಜವಾಗಿ ಬೆಸೆಯುತ್ತದೆ. ದೈನಂದಿನ ಜೀವನದ ಸರಳ ಸನ್ನಿವೇಶಗಳ ಮೂಲಕ, AI Mode ಪ್ರಶ್ನೆಗಳಿಗೆ…

Read More

ಬೆಂಗಳೂರು, ಆಗಸ್ಟ್ 25, 2026: ಎಸ್ಸೆಲ್ ಗ್ರೂಪ್‌ 100 ವರುಷಗಳನ್ನು ಪೂರೈಸಿದ ಸಂಭ್ರಮದ ಅಂಗವಾಗಿ ಜೀ ಕನ್ನಡ ವತಿಯಿಂದ ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. . ಕನ್ನಡ ಸಿನಿಮಾ ಮತ್ತು ಕಿರುತೆರೆಯ ದಿಗ್ಗಜರು, ಬರಹಗಾರರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ಜೀ ಕನ್ನಡ ಕುಟುಂಬದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಜೊತೆ ಎಸ್ಸೆಲ್ ಗ್ರೂಪ್ ಹೊಂದಿರುವ ಸುದೀರ್ಘ ನಂಟು ಮತ್ತು ಅದರ 100 ವರ್ಷಗಳ ಅದ್ಭುತ ಪಯಣವನ್ನು ಈ ಸಂದರ್ಭದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್ಸೆಲ್ ಗ್ರೂಪ್ ಅಧ್ಯಕ್ಷರಾದ ಡಾ. ಸುಭಾಷ್ ಚಂದ್ರ ಹಾಗೂ ಕನ್ನಡ ಚಿತ್ರರಂಗದ ಪ್ರಮುಖರಾದ ಡಾ. ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಮಾಳವಿಕಾ ಅವಿನಾಶ್, ಸಿಹಿ ಕಹಿ ಚಂದ್ರು, ಜಗ್ಗೇಶ್, ರಾಜೇಶ್ ಕೃಷ್ಣನ್, ಡಾಲಿ ಧನಂಜಯ್, ವಿಜಯ ರಾಘವೇಂದ್ರ, ನಿಶ್ವಿಕಾ ನಾಯ್ಡು, ತಾರಾ ಅನುರಾಧಾ, ಛಾಯಾ ಸಿಂಗ್, ರಾಜೇಶ್ ನಟರಂಗ, ತರುಣ್ ಸುಧೀರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು.…

Read More

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ವೀಕ್ಷಕರಿಗೆ ಮತ್ತೊಂದು ಸುವರ್ಣಾವಕಾಶವನ್ನು ನೀಡುತ್ತಿದೆ. ಹೌದು, ಬಿಗ್ ಬಾಸ್ ಮನೆಯೊಳಗೆ ಒಮ್ಮೆಯಾದರೂ ಹೋಗಬೇಕು ಎಂದು ಕನಸು ಕಾಣುತ್ತಿರುವರಿಗೆ ಕಲರ್ಸ್ ಕನ್ನಡ ವಾಹಿನಿ ಒಂದು ಭರ್ಜರಿ ಅವಕಾಶ ಕಲ್ಪಿಸಿದೆ.‌ ನೀವು ಬಿಗ್ ಬಾಸ್ ಮನೆಯೊಳಗೆ ಹೋಗಬೇಕಾ? ಹಾಗಾದರೆ JioHotstarನಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯನ್ನು ವೀಕ್ಷಿಸಿ ಅತಿ ಹೆಚ್ಚು ವಾಚ್‌ ಟೈಮ್ ದಾಖಲಿಸಿ ಪಾಯಿಂಟ್ಸ್ ಗಳಿಸಿ ಅತಿಥಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿ. ಅಧಿಕ ವಾಚ್ ಟೈಮ್ ದಾಖಲಿಸಿ, ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿ ಟಾಪ್ ಪಟ್ಟಿ ಸೇರುವ 40 ಮಂದಿಗೆ Bigg Boss ಮನೆಯೊಳಗೆ ಅತಿಥಿಯಾಗಿ ಪ್ರವೇಶಿಸುವ ಸುವರ್ಣಾವಕಾಶ ನಿಮಗೆ ದೊರೆಯಲಿದೆ. ಮನರಂಜನೆ ಜೊತೆ ಜೊತೆಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅಪರೂಪದ ಅವಕಾಶವನ್ನು ಗೆಲ್ಲಲು ತಪ್ಪದೇ ಬಿಗ್ ಬಾಸ್ ಅಗ್ನಿಪರೀಕ್ಷೆಯನ್ನು ವೀಕ್ಷಿಸಿ, ನಿಮ್ಮ ಕನಸು ನನಸಾಗಿಸಿಕೊಳ್ಳಿ. ಮಿಸ್ ಮಾಡದೆ JioHotstarನಲ್ಲಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’…

Read More

ರಂಗಿ ತರಂಗ ಖ್ಯಾತಿಯ ನಿರೂಪ್ ಭಂಡಾರಿ ಹಾಗೂ ಸ್ವಾತಿಷ್ಟ ಕೃಷ್ಣನ್ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ‘ಅತಿಕಾಯ’ ತಂಡಕ್ಕೆ ಖ್ಯಾತ ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಸೇರಿಕೊಂಡಿದ್ದಾರೆ. ಪೊಲೀಸ್ ಕಮಿಷನರ್ ಪಾತ್ರ ನಿರ್ವಹಿಸುತ್ತಿರುವ ಅವರು, ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಖಾಕಿ ಖದರ್‌ನಲ್ಲಿ ಹಲವಾರು ಬಾರಿ ಮಿಂಚಿರುವ ರಾಕ್‌ಲೈನ್ ವೆಂಕಟೇಶ್, ಈ ಬಾರಿ ತುಸು ಹೆಚ್ಚೇ ಖಡಕ್ ಪಾತ್ರ ನಿಭಾಯಿಸುತ್ತಿದ್ದಾರೆ. ‘ನೈಜ ಘಟನೆಗಳು ಹಾಗೂ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಲಾಗಿದೆ. ನಮ್ಮ ಸಿನಿಮಾದಲ್ಲಿನ ಪೊಲೀಸ್ ಕಮಿಷನರ್ ರಿಯಲ್ ಲೈಫ್‌ನಲ್ಲೂ ಇದ್ದರೆ ಚೆನ್ನಾಗಿರುತ್ತದೆ ಎನಿಸುವಷ್ಟು ನೈಜವಾಗಿ ಮೂಡಿಬಂದಿದೆ. ರಾಕ್‌ಲೈನ್ ವೆಂಕಟೇಶ್ ಅವರ ಸಪೋರ್ಟ್ ತುಂಬಾ ಇತ್ತು’ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ. ಈ ಹಿಂದೆ ಪದೇ ಪದೇ, ನಮಕ್‌ಹರಾಮ್ ಮೊದಲಾದ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಇದೀಗ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಹೊಸ ರೀತಿಯ ಕಥೆ ಸಿದ್ಧಪಡಿಸಿಕೊಂಡು ಅಖಾಡಕ್ಕಿಳಿದಿರುವ ನಾಗರಾಜ್, ಸದ್ಯ ಕೊನೆಯ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. ಈವರೆಗೂ…

Read More

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ . ಮಕ್ಕಳಿಂದ, ಸೆಲೆಬ್ರಿಟಿ ಗಳ ವರೆಗೆ ಎಲ್ಲರೂ ಈ ಶೋನಲ್ಲಿ ಭಾಗವಹಿಸಿ ಜನರನ್ನು ಮನರಂಜಿಸಿದ್ದಾರೆ. ಈಗ ಕರ್ನಾಟಕದ ಅಮ್ಮಂದಿರ ಸರಣಿ. ಕನ್ನಡಿಗರನ್ನು ಕುಣಿಸಿ, ಮನರಂಜಿಸಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಅತೀ ಶೀಘ್ರದಲ್ಲಿ ಶುರುವಾಗಲಿದ್ದು ಇದರ ಆಡಿಷನ್ ಇದೇ ತಿಂಗಳ 2 ರಂದು ನಡೆಯಲಿದೆ. ಮನೆ, ಆಫೀಸ್, ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಸದಾ ಪರರಿಗೋಸ್ಕರ ದುಡಿಯುವ ಅಮ್ಮಂದಿರಿಗೆ ಇದೊಂದು ಉತ್ತಮ ಅವಕಾಶ, ಡ್ಯಾನ್ಸ್ ಬಗ್ಗೆ ಆಸಕ್ತಿ ಇರುವ, ಚೆನ್ನಾಗಿ ಹೆಜ್ಜೆ ಹಾಕಬಲ್ಲ ಅಮ್ಮಂದಿರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜೆರಾಕ್ಸ್ ಕಡ್ಡಾಯ. ದಿನಾಂಕ 2 ಆಗಸ್ಟ್ 2026 ಭಾನುವಾರದಂದು ಬೆಳಗ್ಗೆ 9 ಗಂಟೆಗೆ,ಮಧು ಆರ್ಟ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ), ನಾಯ್ಡು…

Read More

ಸ್ಪೇನ್, ಅರ್ಜೆಂಟೀನಾ, ಯುರೋಪ್, ಮಧ್ಯಪ್ರಾಚ್ಯ ಸೇರಿದಂತೆ ಇತರೆ ಪ್ರದೇಶಗಳಿಗೂ ವಿಸ್ತರಿಸಿರುವ ಪಾಡೆಲ್, ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಒಂದಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಇದರ ಸೇರ್ಪಡೆಯು ಕೇವಲ ಪದಕಗಳ ದೃಷ್ಟಿಯಿಂದ ಮಾತ್ರವಲ್ಲದೆ, ಏಷ್ಯಾದಾದ್ಯಂತ ಕ್ರೀಡೆಯನ್ನು ವೀಕ್ಷಿಸುವ ಮತ್ತು ಬೆಂಬಲಿಸುವ ರೀತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ. ವರ್ಲ್ಡ್ ಪಾಡೆಲ್ ಲೀಗ್‌ನ ಸಹ-ಸ್ಥಾಪಕ ಮಹೇಶ್ ಭೂಪತಿ ಅವರ ಪ್ರಕಾರ, “ಪದಕಗಳು ಕಥೆಯ ಒಂದು ಭಾಗ ಮಾತ್ರ. ಏಷ್ಯನ್ ಗೇಮ್ಸ್‌ನಂತಹ ವೇದಿಕೆಗಳಿಂದ ಪಾಡೆಲ್ ಕ್ರೀಡೆಗೆ ಸರ್ಕಾರದ ಗಮನ, ಉತ್ತಮ ಹೂಡಿಕೆ ಹಾಗೂ ಪೋಷಕರ ಬೆಂಬಲ ಸಿಗುತ್ತದೆ. ವಿಶ್ವದ ಶ್ರೇಷ್ಠ ಆಟಗಾರರನ್ನು ಭಾರತಕ್ಕೆ ಕರೆತರುವ ಕೆಲಸವನ್ನು ವರ್ಲ್ಡ್ ಪಾಡೆಲ್ ಲೀಗ್ ಮಾಡುತ್ತಿದ್ದು, ಏಷ್ಯನ್ ಗೇಮ್ಸ್‌ನ ಈ ಪಯಣ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ” ಎಂದಿದ್ದಾರೆ. ಸ್ಪೇನ್ ಮತ್ತು ಅರ್ಜೆಂಟೀನಾದಂತಹ ದೇಶಗಳು ಬಲವಾದ ಪಾಡೆಲ್ ಸಂಸ್ಕೃತಿಯನ್ನು ನಿರ್ಮಿಸಲು ವರ್ಷಗಳನ್ನು ಕಳೆದಿದ್ದು, ವರ್ಲ್ಡ್ ಪಾಡೆಲ್ ಲೀಗ್ ಮೂಲಕ ಈ ದೇಶಗಳ ಪ್ರಮುಖ ಆಟಗಾರರನ್ನು ಭಾರತಕ್ಕೆ ಕರೆತರುವ ಅವಕಾಶ ನಮಗೆ ಸಿಕ್ಕಿದೆ.…

Read More

ಬೆಂಗಳೂರು, ಜು.10: ಸದಭಿರುಚಿಯ ಹಾಗೂ ವಿನೂತನ ಕಾರ್ಯಕ್ರಮಗಳನ್ನ ನೀಡುವ ಮನರಂಜನೆಯ ರಾಯಭಾರಿಯ ವಾಹಿನಿ ಜೀ ಕನ್ನಡ, ದಾಂಪತ್ಯದ ಮೂಲಕ ಹೊಸ ದಾಖಲೆ ಬರೆದ ಅದ್ವೀತೀಯ ರಿಯಾಲಿಟಿ ಶೋ “ಜೋಡಿ ನಂ.1”. 14 ವಾರಗಳು, ವಿನೂತನ ಟಾಸ್ಕ್‌ಗಳು, ಭರಪೂರ ಮನರಂಜನೆ, ಭಾವುಕತೆಯ ಕ್ಷಣಗಳ ಮೂಲಕ ಕನ್ನಡಿಗರ ಮನೆಮನಗಳನ್ನ ಗೆದ್ದ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ 1. ಗ್ರ್ಯಾಂಡ್‌ ಓಪನಿಂಗ್‌ ಮೂಲಕ ದಾಖಲೆ ಬರೆಯಲು ಸಜ್ಜಾದ ಕಾರ್ಯಕ್ರಮ ಯಶಸ್ವಿ ಸಂಚಿಕೆಗಳನ್ನ ಪೂರೈಸಿ ಇದೀಗ ಗ್ರ್ಯಾಂಡ್ ಫಿನಾಲೆ‌ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ.ಇದೇ ಜುಲೈ 11 ಮತ್ತು 12ರಂದು ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಇದರ ಅಮೂಲ್ಯ ಕ್ಷಣಗಳನ್ನ ಪ್ರೇಕ್ಷಕ ಪ್ರಭುಗಳು ಕಣ್ತುಂಬಿಕೊಳ್ಳಲು ಕಾತುರದಿಂದ ಎದಿರು ನೋಡುತಿದ್ದಾರೆ. 14 ವಾರಗಳು, 105 ದಿನಗಳು, ಹತ್ತು ಸೆಲೆಬ್ರಿಟಿ ಜೋಡಿಗಳು, ಒಂದು ಚಾಂಪಿಯನ್ ಪಟ್ಟ, ಯಾರ ಮುಡಿಗೆ ಸೇರುತ್ತೆ ಎನ್ನುವ ನೂರಾರು ಪ್ರಶ್ನೆಗಳಿಗೆ ಉತ್ತರ ನೀಡಲಿದೆ ‘ಜೋಡಿ ನಂ.1’…

Read More

ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಧಾರಾವಾಹಿ ‘ನಂದಗೋಕುಲ’. ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುವ ಈ ಸೀರಿಯಲ್‌ನಲ್ಲಿ, ಇದೀಗ ಕೇಶವ ಮತ್ತು ವಲ್ಲಭನ ‘ಸಹೋದರರ ಸವಾಲ್’ ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ. ಅಷ್ಟೇ ಅಲ್ಲ ಕೇಶವ ಮತ್ತು ಮೀನಾ ಪ್ರೀತಿಸಿ ಮದುವೆಯಾದವರು. ಆದರೆ ಈ ಮದುವೆ ಮೀನಾ ತಂದೆಗೆ ಎಳ್ಳಷ್ಟೂ ಇಷ್ಟವಿಲ್ಲ. ದೇವಸ್ಥಾನದಲ್ಲಿ ಇವರನ್ನು ನೋಡಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ ಎಂದು ಮೀನಾ ತಂದೆ ಅವಮಾನ ಮಾಡಿದ್ದು, ಕೇಶವನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ. ತಾನು ಸರ್ಕಾರಿ ಕೆಲಸ ಮಾಡ್ತಿಲ್ಲ ಅನ್ನೋ ಬೇಸರದಲ್ಲಿ ಕೇಶವ, ತನ್ನ ತಮ್ಮ ವಲ್ಲಭನ ಮುಂದೆ ಹೋಗಿ ಈ ನೋವನ್ನು ಹಂಚಿಕೊಳ್ಳುತ್ತಾನೆ. ನಾನು ಹೇಗಾದರೂ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದು ಶಪಥ ಮಾಡುತ್ತಾನೆ. ಇತ್ತ ವಲ್ಲಭ ಕೂಡ ತಾನು ಡ್ರೈವಿಂಗ್ ಕೆಲಸಕ್ಕೆ ಹೋಗಿ ಅಷ್ಟೋ ಇಷ್ಟು ಕಾಸು ಮಾಡಬೇಕು ಎಂಬ ತನ್ನ ಮನದ ಆಸೆಯನ್ನು ಅಣ್ಣನ ಮುಂದೆ…

Read More

ಎಲ್ಲರಿಗೂ ನಮಸ್ಕಾರ! ನಾನು ಧ್ರುವ ಸರ್ಜಾ. ನಾನು ಇಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವುದಕ್ಕೆ ಕಾರಣ, 2 ವರ್ಷದ ಮಗು ಸಾಯಿ ಚಿರಾಗ್ SMA ಎಂಬ ಅಪರೂಪದ ಅನುವಂಶಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾನೆ – ಇದು ಮಗುವಿನ ಚಲಿಸುವ ಮತ್ತು ಉಸಿರಾಡುವ ಸಾಮರ್ಥ್ಯವನ್ನು ಕಸಿದುಕೊಳ್ಳುವ ಕಾಯಿಲೆಯಾಗಿದೆ.ಭಾರತದಲ್ಲಿ ಇದರ ಚಿಕಿತ್ಸೆಗೆ 16 ಕೋಟಿ ರೂಪಾಯಿ ವೆಚ್ಚವಾಗುತ್ತದೆ.ವಿದೇಶದಲ್ಲಿ, ಇದೇ ಚಿಕಿತ್ಸೆಗೆ ಕೇವಲ 2 ಕೋಟಿ ರೂಪಾಯಿ ಖರ್ಚಾಗುತ್ತದೆ.ಆತನ ಕುಟುಂಬವು ತಮ್ಮ ಬಳಿ ಇದ್ದದ್ದನ್ನೆಲ್ಲಾ ಖರ್ಚು ಮಾಡಿದೆ. ಆದರೂ ಅವರಿಗೆ ಇನ್ನೂ ಸಹಾಯದ ಅಗತ್ಯವಿದೆ. ದಯವಿಟ್ಟು ಈಗಲೇ ನಿಮ್ಮ ಸ್ಕ್ರೀನ್ ಮೇಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ದೇಣಿಗೆ ನೀಡಿ. ನಿಮ್ಮ 100 ರೂಪಾಯಿ ಕೂಡ ದೊಡ್ಡ ಬದಲಾವಣೆ ತರಬಹುದು ಮತ್ತು ನಿಮಗೆ ದೇಣಿಗೆ ನೀಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ. ನಿಮ್ಮ ಸ್ಟೋರಿ, ವಾಟ್ಸಾಪ್ ಗ್ರೂಪ್‌ಗಳು ಮತ್ತು ಎಲ್ಲೆಡೆ ಹಂಚಿಕೊಳ್ಳಿ. ನೀವು ಮಾಡುವ ಒಂದು ಶೇರ್ ಈ ಮಗುವಿನ ಜೀವ ಉಳಿಸಬಹುದು…

Read More

ಇಸ್ರೇಲ್‌, ಅಮೆರಿಕ-ಇರಾನ್‌ ಯುದ್ಧದಿಂದಾಗಿ ಇಂಧನ ದರ ಏರಿಕೆ ಭೀತಿಯ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ತಲಾ 10 ರೂಪಾಯಿ ಇಳಿಕೆ ಮಾಡಿ ಕೇಂದ್ರ ಸರ್ಕಾರಿ ಆದೇಶಿಸಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿ ಬಂದ್‌ ಆದ ನಂತರ ಜಾಗತಿಕ ಕಚ್ಚಾ ತೈಲ ಬೆಲೆ ಹೆಚ್ಚಾಗುತ್ತಿದೆ. ಕಳೆದ ತಿಂಗಳು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಸುಮಾರು 70US ಡಾಲರ್‌ ನಿಂದ ಸುಮಾರು 122US ಡಾಲರ್‌ವರೆಗೆ ಏರಿಕೆಯಾಗಿತ್ತು. ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಟೆಹ್ರಾನ್‌ನ ಹಾರ್ಮುಜ್ ಜಲ ಮಾರ್ಗವು ಬಂದ್‌ಆದ ಕಾರಣ ಪಶ್ಚಿಮ ಏಷ್ಯಾ ಪ್ರದೇಶದಿಂದ ತೈಲ ಮತ್ತು ಅನಿಲ ರಫ್ತಿಗೆ ತೀವ್ರ ಅಡ್ಡಿಪಡಿಸಿದೆ. ಈ ಜಾಗತಿಕ ಕಚ್ಚಾ ತೈಲ ಪೂರೈಕೆ ಬಿಕ್ಕಟ್ಟಿನ ನಡುವೆ, ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಾಥ್‌ ನೀಡಿದೆ.…

Read More