ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್‌ ಈಗ ಪರಪ್ಪನ ಅಗ್ರಹಾರದಲ್ಲಿ ವಿಲ ವಿಲ ಒದ್ದಾಡುವಂತಾಗಿದೆ. ಇದರ ನಡುವೆ ಆರೋಪಿ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ಬಗ್ಗೆ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದಿದ್ದು, ಈ ಮಧ್ಯೆ ಒಂದು ಶಾಕಿಂಗ್‌ ವಿಚಾರ ಬಯಲಾಗಿದೆ.

ಮತ್ತೆ ಜೈಲು ಪಾಲಾಗಿರೋ ನಟ ದರ್ಶನ್‌ ಜಡ್ಜ್‌ ಮುಂದೆ ತಮ್ಮ ರೋಧನೆ ಹೇಳಿಕೊಂಡಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಡ್ಜ್‌ ಮುಂದೆ ವಿಚಾರಣೆಗೆ ಹಾಜರಾಗಿದ್ದ ದರ್ಶನ್‌ ಶಾಕಿಂಗ್‌ ಬೇಡಿಕೆ ಇಟ್ಟಿದ್ದು, ಸ್ವತಃ ನ್ಯಾಯಾಧೀಶರೇ ಶಾಕ್‌ ಆಗಿದ್ದಾರೆ. ಕೋರ್ಟ್‌ ವಿಚಾರಣೆ ವೇಳೆ ದರ್ಶನ್‌, ನಾನು ಬಿಸಿಲು ನೋಡಿ ಒಂದು ತಿಂಗಳಾಯ್ತು. ಮಾನಸಿಕವಾಗಿ ಹಿಂಸೆ ಆಗ್ತಿದೆ. ಕೈಯಲ್ಲಿ ಫಂಗಸ್‌ ಆಗಿದೆ. ಇಲ್ಲಿ ಯಾವ ವ್ಯವಸ್ಥೆಯು ಸರಿ ಇಲ್ಲಿ. ದಯವಿಟ್ಟು ಇಲ್ಲಿನ ಜೈಲರ್‌ಗೆ ಹೇಳಿ ನನಗೆ ಸ್ವಲ್ಪ ವಿಷ ಕೊಡಿ ಅಂತಾ ದಚ್ಚು ಕೇಳಿಕೊಂಡಿದ್ದಾರೆ. ಈ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಹಾಗೆಲ್ಲ ನೀವು ಕೇಳುವಂತಿಲ್ಲ ಎಂದು ಜಡ್ಜ್ ಬುದ್ದಿವಾದ ಹೇಳಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುವ ಸಂಬಂಧ ಕೋರ್ಟ್‌ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ ಸದ್ಯ ಕಠಿಣ ನಿಯಮಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಾರಿ ಜೈಲಿನಲ್ಲಿ ಅವರಿಗೆ ಯಾವುದೇ ಸವಲತ್ತು ಸಿಗುತ್ತಿಲ್ಲ.

Read Also : ನಟಿ ಭಾವನ ರಾಮಣ್ಣಗೆ ಹೆಣ್ಣು ಮಗು ಜನನ, ಒಂದು ಮಗು ನಿಧನ!

Share.
Leave A Reply