ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ನಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡಗೆ ಸುಪ್ರಿಂಕೋರ್ಟ್ ಶಾಕ್ ನೀಡಿದೆ. ಮತ್ತೆ ಜೈಲು ಸೇರುವ ಭೀತಿ, ನಟ ದರ್ಶನ್ ಹಾಗೂ ಪವಿತ್ರಾ ಗೌಡರನ್ನು ಕಾಡ್ತಿರೋ ಹೊತ್ತಲ್ಲೆ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್ನ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿ ಆದೇಶಿಸಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಪವಿತ್ರಾಗೌಡ, ದರ್ಶನ್ ಸೇರಿದಂತೆ 7 ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಂಡಿದೆ.
ಈ ಹಿನ್ನಲೆಯಲ್ಲಿ ನಟಿ ರಮ್ಯಾ ಮತ್ತೆ ದರ್ಶನ್ ಕೇಸ್ ಬಗ್ಗೆ ಸೋಷಿಯಲ್ ಒಂದು ಫೋಸ್ಟ್ ಹಂಚಿಕೊಂಡಿದ್ದು, ಬಾರಿ ಸದ್ದು ಮಾಡುತ್ತಿದೆ.. ಚಿತ್ರದುರ್ಗದ ರೇಣುಕಾಸ್ವಾಮಿಗೆ ಸಂಬಂಧಿಸಿದಂತೆ ರಮ್ಯಾ ಹಾಗೂ ಡಿಬಾಸ್ ಫ್ಯಾನ್ಸ್ ನಡುವಿನ ಸಂಘರ್ಷ ಎಲ್ಲರಿಗೂ ಗೊತ್ತು. ಇದೀಗ ಎ1 ಪವಿತ್ರಾ ಗೌಡ, ಎ2 ದರ್ಶನ್ ಸೇರಿ 7 ಜನರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ನ್ಯಾ. ಮಹದೇವನ್ ತೀರ್ಪು ಪ್ರಕಟಿಸಿದ್ದು, ತಕ್ಷಣ ಬಂಧಿಸುವಂತೆ ಆದೇಶಿಸಿದೆ.
ಇದರ ಬಗ್ಗೆ ರಮ್ಯಾ ಫೋಸ್ಟ್ ಮಾಡಿದ್ದು, ನ್ಯಾಯಾ ಎಲ್ಲರಿಗೂ ಒಂದೇ. ನ್ಯಾಯದ ಮೇಲೆ ನಂಬಿಕೆ ಇಡಬೇಕು. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ.. ಈ ಮೂಲಕ ರೇಣುಕಾಸ್ವಾಮಿ ಕೇಸ್ನ ತೀರ್ಪು ಸಮಾಜಕ್ಕೆ ಸ್ಟ್ರಾಂಗ್ ಸಂದೇಶ ನೀಡಿದೆ.. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಡಿ. ಯಾಕಂದ್ರೆ, ನ್ಯಾಯ ಸಿಗಲು ದೀರ್ಘಾವದಿ ಬೇಕಾಗಬಹುದು.. ಆದ್ರೆ, ತುಂಬಾ ಬಲವಾಗಿರುತ್ತದೆ.. ಸುರಂಗದ ಕೊನೆಯಲ್ಲಿ ದೀಪದ ಬೆಳಕು ಇದ್ದೇ ಇರುತ್ತದೆ ಅಂತಾ ಬರೆದುಕೊಂಡಿದ್ದಾರೆ. ಅಲ್ಲದೇ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನ್ಯಾಯ ತನ್ನ ಕೆಲಸ ಮಾಡುತ್ತದೆ ಅಂತಾ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದು, ದರ್ಶನ್ ಫ್ಯಾನ್ಸ್ಗೆ ಶಾಕ್ ನೀಡಿದೆ..
