ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.. ಜಮೀರ್ ಕೇಸ್‌ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೂಡ ಕೇಳಿ ಬಂದಿದೆ.. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಜಮೀರ್‌ಗೆ ಸಂಬಂಧಪಟ್ಟ ಹಲವರ ವಿಚಾರಣೆ ನಡೆಸಲಾಗ್ತಿದೆ.. ಇದರ ಬೆನ್ನಲ್ಲೇ ರಾಧಿಕಾ ಕುಮಾರಸ್ವಾಮಿಯವರ ವಿಚಾರಣೆಯನ್ನು ಲೋಕಾಯುಕ್ತ ನಡೆಸಿರೋದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಜಮೀರ್ ಹಾಗೂ ರಾಧಿಕಾ ನಡುವೆ ನಡೆದಿರುವ ವ್ಯವಹಾರದ ಶಾಕಿಂಗ್ ವಿಚಾರಗಳು ಸ್ಫೋಟಗೊಂಡಿವೆ..
2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು.. ಇದೇ ಕಂಪನಿ ಜೊತೆ ನಂಟು ಹೊಂದಿದ್ದ ಆರೋಪದಡಿ ಸಚಿವ ಜಮೀರ್ ನಿವಾಸ ಹಾಗೂ ಕಚೇರಿಗಳ ಮೇಲೆ ಇ.ಡಿ ದಾಳಿ ನಡೆಸಿತ್ತು.. ಭ್ರಷ್ಟಾಚಾರ ನಿಗ್ರಹ ದಳವು ದಾಖಲಿಸಿಕೊಂಡಿದ್ದ ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು.. ಬಳಿಕ ಲೋಕಾಯುಕ್ತ ಈ ಪ್ರಕರಣದ ತನಿಖೆ ನಡೆಸುವಾಗ ಹಲವರ ವಿಚಾರಣೆ ನಡೆಸಿತ್ತು.. ಜಮೀರ್ ಕೂಡ ತನಗೆ ಸಾಲ ನೀಡಿದವರ ಬಗ್ಗೆ ಲಿಖಿತ ಪಟ್ಟಿ ನೀಡಿದ್ರು.. ಇದೇ ವೇಳೆ ಅದ್ರಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಕೂಡ ಕಂಡು ಬಂದಿದೆ..
ಇನ್ನೂ ಇದೇ ವಿಚಾರವಾಗಿ ಲೋಕಾಯುಕ್ತ ರಾಧಿಕಾ ಕುಮಾರಸ್ವಾಮಿಯ ವಿಚಾರಣೆ ನಡೆಸಿದ್ದು, ಹಲವು ವಿಚಾರಗಳನ್ನು ಬಯಲು ಮಾಡಿದೆ.. ರಾಧಿಕಾ ತಾವೇ ಜಮೀರ್‌ಗೆ ಸಾಲ ನೀಡಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ.. 2012ರಲ್ಲಿ ಯಶ್ ಹಾಗೂ ರಮ್ಯಾ ನಟನೆಯ ಲಕ್ಕಿ ಸಿನಿಮಾವನ್ನು ಶಮಿಕಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿತ್ತು.. ಈ ಸಿನಿಮಾ ಭಾರೀ ಯಶಸ್ಸು ಕಂಡಿತ್ತು.. ಹೀಗಾಗಿ ಇದ್ರಿಂದ ಬಂದ ಲಾಭದಲ್ಲಿ 2.5 ಕೋಟಿ ರೂ ಹಣವನ್ನು ಸಚಿವ ಜಮೀರ್‌ಗೆ ಸಾಲದ ರೂಪದಲ್ಲಿ ನೀಡಿದ್ದೆ ಅಂತ ರಾಧಿಕಾ ಹೇಳಿಕೆ ನೀಡಿದ್ದಾರೆ.. ಇನ್ನೂ ಲೋಕಾಯುಕ್ತ ಕೂಡ ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದೆ..
ಕೇವಲ ರಾಧಿಕಾ ಕುಮಾರಸ್ವಾಮಿ ಮಾತ್ರವಲ್ಲದೇ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಸೇರಿದಂತೆ ಹಲವರಿಂದ ಜಮೀರ್ ಸಾಲ ಪಡೆದಿದ್ರು ಅನ್ನೋ ಮಾಹಿತಿಗಳು ಹೊರಬೀಳ್ತಿವೆ.. ಇದೇ ನಿಟ್ಟಿನಲ್ಲಿ ಲೋಕಾಯುಕ್ತ ತನಿಖೆಯನ್ನು ಚುರುಕುಗೊಳಿಸಿದೆ.. ಮುಂದೆ ಯಾರ ಯಾರ ಹೆಸರು ಕೇಳಿ ಬರುತ್ತೋ ಕಾದು ನೋಡಬೇಕಿದೆ..
Read Also : ಜಿಬಿಎ ಐದು ಪಾಲಿಕೆಗಳ ಆಯುಕ್ತರನ್ನಾಗಿ ಹಿರಿಯ ಅಧಿಕಾರಿಗಳ ನೇಮಕ: ಡಿಸಿಎಂ ಡಿ.ಕೆ. ಶಿವಕುಮಾರ್
