ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ.. ಅಂತ ಹಾಡು ಹಾಡಿ ಸೋಷಿಯಲ್ ಮಿಡಿಯಾದಲ್ಲಿ ಧೂಳೆಬ್ಬಿಸಿದ್ದ ವೈರಲ್ ಹುಡುಗಿ ಯಾರು ಎಂಬ ಮಾಹಿತಿ ಹೊರಬಿದ್ದಿದೆ. ಎಲ್ಲೆ ನೋಡಿದರು ಹೂವಿನ ಬಾಣದಂತೆ ಹಾಡು ಕೇಳಿಬರುತ್ತಿತ್ತು. ಅನೇಕರನ್ನ ನಕ್ಕು ನಲಿಸಿದ ಆ ವೈರಲ್ ಹಾಡುಗಾರ್ತಿ ಯಾರು ಗೊತ್ತಾ..?. ಕನ್ನಡದ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಮುಗ್ಧ ಹುಡುಗಿ ತಾನು ಯಾರು..? ಯಾವ ಊರು..? ಏನು ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ.

Read Also : RBI ಟಫ್ ರೂಲ್ಸ್ : EMI ಕಟ್ಟದಿದ್ರೆ ಫೋನ್ ಲಾಕ್..!
ಅಂದಹಾಗೆ ಹೂವಿನ ಬಾಣದಂತೆ ಹಾಡು ಹಾಡಿ ವೈರಲ್ ಆದ ಈ ಹುಡುಗಿಯ ಹೆಸರು ನಿತ್ಯಶ್ರೀ, ಊರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದಲ್ಲಿ ಜನಿಸಿದವಾರಗಿದ್ದು, ಪದವಿ ಶಿಕ್ಷಣ ಪಡೆಯಲು ಮೈಸೂರಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಹಾಡಿನ ಬಗ್ಗೆ ಮಾತನಾಡಿರುವ ನಿತ್ಯಶ್ರೀ ನಾನು ಸ್ನೇಹಿತರ ಜೊತೆಗೆ ತಮಾಷೆಗಾಗಿ ಹಾಡಿದ್ದು, ನನ್ನ ವಿಡಿಯೋ ಇಷ್ಟೊಂದು ವೈರಲ್ ಆಗುತ್ತದೆ ಎಂದುಕೊಂಡಿರಲಿಲ್ಲ. ತುಂಬಾ ಖುಷಿ ಆಗುತ್ತಿದೆ ಎಂದು ಹೇಳಿದ್ದಾರೆ. ನನ್ನ ಗುರುಗಳು ಕೃಷ್ಣಮೂರ್ತಿ ಸರ್ ಹಾಡನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದು, ರಾತ್ರೋ ರಾತ್ರಿ ವಿಡಿಯೋ ವೈರಲ್ ಆಗಿದೆ. ಈಗ ಜನರೆಲ್ಲರು ನನ್ನನ್ನು ಗುರುತಿಸುತ್ತಿದ್ದಾರೆ. ನನಗೆ ನಟಿ ಆಗಬೇಕು ಎಂಬ ಆಸೆ ಇದೆ, ಅವಕಾಶ ಸಿಕ್ಕರೆ ಖಂಡಿತವಾಗಿ ನಟಿಸುತ್ತೇನೆ ಎಂದಿದ್ದಾರೆ. ಯಶ್ ಜೊತೆ ನಟಿಸುವ ಆಸೆ ಇದೆ, ಅವರ ಜೊತೆ ಒಂದು ಸೈಡ್ ರೋಲ್ ಮಾಡಬೇಕು ಎಂದಿದ್ದಾರೆ.
