Author: Mahanthesha

ಬೆಂಗಳೂರು, ಜು.09: ಮನರಂಜನೆ — ಚಿತ್ರ ನಿರ್ಮಾಪಕ ಹಾಗೂ ಕಥೆಗಾರ ಲವ್ ಶರ್ಮಾ ಅವರಿಗೆ ಸಿನಿಮಾ ಎಂಬುದು ಕೇವಲ ಒಂದು ವೃತ್ತಿಯಷ್ಟೇ ಅಲ್ಲ, ವೈಯಕ್ತಿಕ ಜವಾಬ್ದಾರಿಯೂ ಆಗಿದೆ ಎಂದು ಅವರ ತಂಡ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚಿತ್ರರಂಗದ ಡೇಟಾಬೇಸ್ IMDb ನಲ್ಲಿ ಲವ್ ಶರ್ಮಾ ಅವರ ಹೆಸರು ನಿರ್ಮಾಪಕ ಹಾಗೂ ಕಥೆಗಾರರಾಗಿ ನೋಂದಾಯಿಸಲಾಗಿದೆ. ಅವರ ತಂಡದ ಮಾಹಿತಿಯ ಪ್ರಕಾರ, 2024ರಲ್ಲಿ ಬಿಡುಗಡೆಯಾದ ತೆಲುಗು–ಕನ್ನಡ ಭಾಷೆಯ “The 7 Deaths” ಚಿತ್ರಕ್ಕೆ ಅವರು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆ ಚಿತ್ರವನ್ನು ಅಜಯ್ ಕುಮಾರ್ ನಿರ್ದೇಶಿಸಿದ್ದಾರೆ ಎಂದು ಅವರ ತಂಡ ತಿಳಿಸಿದೆ. ಇನ್ನು ಸಿನಿಮಾ ಕುರಿತು ಲವ್ ಶರ್ಮಾ ಅವರು ಹೀಗೆ ಹೇಳಿದ್ದಾರೆ, “ನನ್ನ ದೃಷ್ಟಿಯಲ್ಲಿ ಸಿನಿಮಾ ಎನ್ನುವುದು ಕೇವಲ ಒಂದು ವೃತ್ತಿಯಲ್ಲ; ಅದು ನನ್ನ ದೃಷ್ಟಿಕೋನ, ನನ್ನ ವ್ಯಕ್ತಿತ್ವ ಮತ್ತು ಸಮಾಜದ ಮೇಲಿರುವ ನನ್ನ ಜವಾಬ್ದಾರಿಯ ಅಭಿವ್ಯಕ್ತಿ”ಯಾಗಿದೆ ಎಂದು ತಮ್ಮ ತಂಡ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿರ್ಮಾಪಕರಾಗಿ ಲವ್ ಶರ್ಮಾ ಅವರು…

Read More

ಬೆಂಗಳೂರು, ಜು.04: ನಟ ಕೋಮಲ್‌ ಕುಮಾರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾಕಷ್ಟು ವರ್ಷಗಳಿಂದ ಸಿನಿಮಾಗಳ ಮೂಲಕ ಜನರನ್ನ ರಂಜಿಸುತ್ತಾ ಬಂದಿರೋ ಕೋಮಲ್‌ ಈ ವರ್ಷದ ಹುಟ್ಟುಹಬ್ಬವನ್ನ ಸಖತ್‌ ಸಿಂಪಲ್‌ ಆಗಿ ಆಚರಣೆ ಮಾಡಿಕೊಂಡಿದ್ದಾರೆ. ತೆನಾಲಿ ಸಿನಿಮಾ ತಂಡದ ಜೊತೆಗೆ ಸಿಂಪಲ್‌ ಆಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಸದ್ಯ ಕೋಮಲ್‌ ಅವ್ರು ಅಭಿನಯ ಮಾಡುತ್ತಿರುವ ತೆನಾಲಿ ಸಿನಿಮಾ ತಂಡ ಕೋಮಲ್‌ ಅವರ ಮನೆಗೆ ಭೇಟಿಕೊಟ್ಟು ಕೇಕ್‌ ಕತ್ತರಿಸುವ ಮೂಲಕ ಕೋಮಲ್‌ ಕುಮಾರ್‌ ಅವರ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದಾರೆ. ನಿರ್ದೇಶಕ ಸಿದ್ವಿನ್‌ ದ್ರುವ್‌ ಕೋಮಲ್‌ ಅವರಿಗೆ ಹೂಗುಚ್ಚ ನೀಡಿ ಶುಭಾಶಯ ಕೋರುವುದರ ಜೊತೆಗೆ ಶೂಟಿಂಗ್‌ ಬಗ್ಗೆ ಅಪ್ಡೇಟ್‌ ಕೂಡ ಕೊಟ್ಟಿದ್ದಾರೆ. ತೆನಾಲಿ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು ಸಿನಿಮಾ ತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ದವಾಗಿದೆ. ತೆನಾಲಿ ಸಿನಿಮಾದಲ್ಲಿ ಕಾಜಲ್‌ ಕುಂದರ್‌ ಹಾಗೂ ಅಕ್ಷಿತಾ ಬೋಪಯ್ಯ ನಾಯಕಿಯರಾಗಿ ಕಾಣಿಸಿಕೊಳ್ತಿದ್ದಾರೆ ಚಿತ್ರಕ್ಕೆ ನಿರ್ದೇಶಕ ಸಿದ್ವಿನ್‌ ದ್ರುವ್‌ ಸಿದ್ದು ಸೇರಿದಂತೆ ಸಂತೋಷ್‌ ಮಾಯಪ್ಪ,…

Read More

ಬೆಂಗಳೂರು, ಜು.03: ʼಒರಟʼ, ʼಕೋರʼದಂತ ಸಿನಿಮಾಗಳ ಮೂಲಕ ಭಿನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಒರಟ ಶ್ರೀ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಶಬರಿ. ಇದೀಗ ಪತ್ರಿಕಾಗೋಷ್ಠಿಯ ಮೂಲಕ ಈ ಸಿನಿಮಾದ ಟೀಸರ್ ಅನ್ನು ಲಹರಿ ವೇಲು ಬಿಡುಗಡೆಗೊಳಿಸಿದ್ದಾರೆ. ಒರಟ ಶ್ರೀ ಸೇರಿದಂತೆ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿದ್ದು ಶಬರಿಯ ಬಗೆಗಿನ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಟೀಸರ್ ಬಿಡುಗಡೆಯ ವೇದಿಕೆಯಲ್ಲಿ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು, ರಾಷ್ಟ್ರ ಪ್ರಶಸ್ತಿ ವಿಜೇತ ತಲೆದಂಡ ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಮತ್ತು ಕಾಮನ್ ಮ್ಯಾನ್ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಬರಿಯ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಲಹರಿ ವೇಲು ಒರಟ ಶ್ರೀ ಅತೀವ ಸಿನಿಮಾ ಪ್ರೇಮ ಹೊಂದಿರುವ ನಿರ್ದೇಶಕ. ಅವರು ಈ ಚಿತ್ರವನ್ನು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳೂ ಕೂಡಾ ಚೆನ್ನಾಗಿರೋದರಿಂದಲೇ ಲಹರಿ ಸಂಸ್ಥೆ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಅನ್ನುತ್ತಲೇ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕ ಒರಟ…

Read More

ಬೆಂಗಳೂರು, ಜು.01: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಯರ ಜೀವನದ ಪವಿತ್ರ ಪಯಣವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಸುತ್ತಿರುವ ಈ ಕಥಾಹಂದರಕ್ಕೆ ಮನೆಮನೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ. ಕಳೆದ ವಾರದ ಕಥೆಯಲ್ಲಿ ಪೂರ್ವಾಶ್ರಮದ ಹೆಂಡತಿ ಸರಸ್ವತಿಗೆ ಸದ್ಗತಿ ಕೊಟ್ಟ ಸಂಚಿಕೆ ಮನದುಂಬಿ ಬಂತು. ಪ್ರೇಕ್ಷಕರನ್ನು ಅಲುಗಾಡದಂತೆ ಸರೆ ಹಿಡಿಯಿತು. ರಾಯರ ಪಾತ್ರದಲ್ಲಿ ಪರಿಕ್ಷೀತ್‌‌ರ ನಟನೆ ರಾಯರನ್ನೇ ನೋಡಿದಷ್ಟು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ರಾಯರು ದೀಕ್ಷೆ ಪಡೆದ ನಂತರ ಮೂಲರಾಮನ ಆಜ್ಞಾಪನೆಯಂತೆ ದಿವ್ಯ ಸಂಚಾರಕ್ಕೆ ಹೊರಟರು. ಭುವನಗಿರಿಯಲ್ಲಿ ಪಾದ ಪೂಜೆ ಮುಗಿಸಿಕೊಂಡು ಹೊರಟು ಕರಟಗಿರಿಯ ಹತ್ತಿರ ವನ ಭೋಜನಕ್ಕೆ ಕುಳಿತಾಗ ಅಲ್ಲಿಗೆ ಕರಟಗಿರಿಯ ದೇಸಾಯಿ ಅವರು ಬಂದು ತಮ್ಮ ಮನೆಯ ಪೂಜೆಗೆ ರಾಯರನ್ನು ಆಹ್ವಾನಿಸುತ್ತಾರೆ. ಅವರ ಒತ್ತಾಯಕ್ಕೆ ಮಣಿದು ಮನೆಗೆ ರಾಯರು ಬರುತ್ತಾರೆ. ರಾಯರ ಆಗಮನವನ್ನು ವಿಜೃಂಭಣೆಯಿಂದ ಆಚರಿಸಲು ದೇಸಾಯಿ ಅವರು ಬಕ್ಷಭೋಜನಗಳನ್ನು ತಯಾರಿಸಲು…

Read More

ಬೆಂಗಳೂರು, ಜೂ.23: ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಾಯಕನಾಗಿ ತೆರೆಮೇಲೆ ಮಿಂಚಲು ರೆಡಿಯಾಗಿರುವ ಎರಡನೇ ಸಿನಿಮಾ ಲಕ್ಷ್ಮೀಪುತ್ರ. ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ AMB ಕಪಾಲಿಯಲ್ಲಿ ‘ಇನ್ಮೇಲೆ’ ಎಂಬ ಮೆಲೋಡಿ ಗೀತೆಯನ್ನು ಚಿತ್ರರಂಗದ ಎಂಟು ನಟಿಮಣಿಯರಿಂದ ಅನಾವರಣ ಮಾಡಿಸಲಾಯಿತು. ಈ ಸಂದರ್ಭದಲ್ಲಿ ನಿರ್ಮಾಪಕ ಎಪಿ ಅರ್ಜುನ್ ಮಾತನಾಡಿ, ಯಾವಾಗಲೂ ಮಾತನಾಡುವ ಪದದಿಂದ ಹಾಡು ಶುರುವಾಗಬೇಕು. ಹಾಡು ಎಲ್ಲರ ಬಾಯಲ್ಲಿ ಇರಬೇಕು ಅನ್ನೋದು ನನ್ನ ತಲೆಯಲ್ಲಿ ಇತ್ತು‌. ಲವರ್ಸ್ಸ್ ಮಾತನಾಡುವಾಗ ಇನ್ಮೇಲೆ, ಆಮೇಲೆ ಅಂತಾರೆ ಮಾತನಾಡುತ್ತಾರೆ. ಅದನ್ನು ಇಟ್ಕೊಂಡು ಮಾಡಿದ ಹಾಡು ಇದು. ಇದನ್ನು ಕರ್ನಾಟಕ ಜನತೆಗೆ ಅರ್ಪಿಸಿದ್ದೇವೆ. ಅಪ್ಪಟ ಕನ್ನಡ ಹಾಡು. ಮಂಡ್ಯ ಸೊಗಡು ಇರುವ ಗೀತೆ. ಇದನ್ನು ಹಾಡಿರುವವರು ದರ್ಶನ್, ಸರಿಗಮಪ ರನ್ನರ್ ಅಪ್. ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಅವರ ಮೊದಲ ಹಾಡು ಇದಾಗಿದೆ. ಇನ್ನು ಅವರ ಜೊತೆ ಪೃಥ್ವಿ ಭಟ್ ಹಾಡಿದ್ದಾರೆ. ಎಲ್ಲರಿಗೂ…

Read More

ಬೆಂಗಳೂರು, ಜೂ.19: ಪ್ರತಿ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ, ಮನಸ್ಸಿಗೆ ಹತ್ತಿರವಾಗುವ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ, ತನ್ನ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸುತ್ತಿದೆ. ಕನ್ನಡದ ಸೂಪರ್‌ಹಿಟ್ ಲವ್ ಮಾಕ್‌ಟೇಲ್ ಸೀರಿಸ್‌ನ ಬಹು ನಿರೀಕ್ಷಿತ ಕೊನೆಯ ಭಾಗವಾದ ಲವ್ ಮಾಕ್‌ಟೇಲ್ 3 ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ ಅನ್ನು ಜೂನ್ 21 ರಂದು, ಸಂಜೆ 4:30 ಕ್ಕೆ ನಿಮ್ಮ ಮುಂದೆ ತರಲು ಸಿದ್ಧವಾಗಿದೆ. ಲವ್ ಮಾಕ್‌ಟೇಲ್ 2 ಚಿತ್ರದ ನಂತರ ಹಲವು ವರ್ಷಗಳ ಬಳಿಕ ತೆರೆಕಂಡ ಲವ್ ಮಾಕ್‌ಟೇಲ್ 3 ಚಿತ್ರದಲ್ಲಿ ತಂದೆಯ ಪ್ರೀತಿ, ಕುಟುಂಬದ ಒಡನಾಟ, ಜವಾಬ್ದಾರಿ ಮತ್ತು ಎಂತಹ ಪರಿಸ್ಥಿತಿಯಲ್ಲೂ ಜೊತೆಗೆ ನಡೆದು ಸಾಗುವ ಕೌಟುಂಬಿಕ ಮೌಲ್ಯಗಳನ್ನು ತುಂಬಾ ಸುಂದರವಾಗಿ ತೋರಿಸಿದ್ದಾರೆ. ರಕ್ತ ಸಂಬಂಧಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂಬುದೇ ಈ ಚಿತ್ರದ ಮತ್ತೊಂದು ಹೈಲೈಟ್. ಭಾವನೆಗಳ ಹಲವು ಪದರಗಳನ್ನು ಒಳಗೊಂಡಿರುವ ಈ ಕಥೆ, ಪ್ರೀತಿ, ನೋವು ಮತ್ತು ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸಂಬಂಧಗಳನ್ನು ಹೇಗೆ…

Read More

ಬೆಂಗಳೂರು, ಜೂ.17: ಇದೇ ಜುಲೈ 03ರಂದು ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಬಿಡುಗಡೆಗಾಗಿ ತಯಾರಾಗುತ್ತಿರುವ ಚಿತ್ರತಂಡವೀಗ ಬಿಡುಗಡೆಗೊಂಡಿರುವ ಮೂರು ಹಾಡುಗಳಿಗೆ ಕೇಳುಗರ ಕಡೆಯಿಂದ ಸಿಗುತ್ತಿರೋ ಭರಪೂರ ಪ್ರತಿಕ್ರಿಯೆ ಕಂಡು ಖುಷಿಗೊಂಡಿದೆ. ಈ ಸಂಬಂಧವಾಗಿ ಪತ್ರಿಕಾಗೋಷ್ಠಿಯ ಮೂಲಕ ಹಾಡುಗಳ ಗೆಲುವಿನ ಸಿಹಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರು ಹಾಗೂ ಸಾಹಿತ್ಯ ಬರೆದವರ ಮೂಲಕವೇ ಈ ಗೆಲುವನ್ನು ಚಿತ್ರತಂಡ ಸಂಭ್ರಮಿಸಿದೆ. ಈ ಪ್ರತಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಎನ್.ಆರ್ ಮಂಜುನಾಥ್ (ನೀಲೇರಿ), ನಿರ್ದೇಶಕ ಕೃತ್ವಿಕ್, ಹಿರಿಯ ಗೀತಸಾಹಿತಿ ಕೆ.ಕಲ್ಯಾಣ್, ಸಂಗೀತ ನಿರ್ದೇಶಕ ವೀರ್ ಸಮರ್ಥ್, ಗೀತ ರಚನೆಕಾರರಾದ ಪ್ರಮೋದ್ ಮರವಂತೆ, ಸಾಯಿ ಸರ್ವೇಶ್, ನಾಯಕ ಮುಕುಂದ ರಾಮಸ್ವಾಮಿ, ನಾಯಕಿಯರು ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ, ಗಾಯಕಿ ಪ್ರಜ್ಞಾ ಮರಾಠೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಕೆ. ಕಲ್ಯಾಣ್ ಹಾಡುಗಳು ಯಾವತ್ತಿಗೂ ಚಿತ್ರವೊಂದರ ಆಮಂತ್ರಣವಾಗಿರುತ್ತೆ. ಹಿಂದೆಲ್ಲ ಆಡಿಯೋ ರಿಲೀಸ್ ಮಾಡುವ ಮೂಲಕವೇ ಚಿತ್ರವೊಂದನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತಿತ್ತು. ಆದರೆ, ಇಂದು ಟ್ರೆಂಡ್ ಬದಲಾಗಿದೆ. ಅದೆಲ್ಲದರ…

Read More

ಐಮ್ಯಾಕ್ಸ್ ಸಿನಿಮಾ ‘ದಿ ಒಡಿಸ್ಸಿ ಅತ್ಯಾಧುನಿಕ ಐಮ್ಯಾಕ್ಸ್ (IMAX) ಫಿಲ್ಮ್ ತಂತ್ರಜ್ಞಾನವನ್ನು ಬಳಸಿ ಜಗತ್ತಿನಾದ್ಯಂತ ಚಿತ್ರೀಕರಿಸಲಾದ ‘ದಿ ಒಡಿಸ್ಸಿ’ ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ಇತಿಹಾಸದ ಮೊದಲ ಚಲನಚಿತ್ರವಾಗಿದೆ. ಈ ಚಿತ್ರವು ಜುಲೈ 17, 2026 ರಂದು ಭಾರತ ಮತ್ತು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೋಮರ್ ಅವರ ಪ್ರಸಿದ್ಧ ಕಥೆಯನ್ನು ಅವರು ಹಿಂದೆಂದೂ ಯಾರೂ ಮಾಡದ ರೀತಿಯಲ್ಲಿ ತೆರೆ ಮೇಲೆ ತರುತ್ತಿದ್ದಾರೆ. ಟ್ರಾಯ್ ಯುದ್ಧ ಮುಗಿದ ನಂತರ ಇಥಾಕಾದ ರಾಜ ಒಡಿಸ್ಸಿಯಸ್ ತನ್ನ ಮನೆಗೆ ಮರಳುವ ಅಪಾಯಕಾರಿ ಪ್ರಯಾಣವೇ ಈ ಚಿತ್ರದ ಕಥೆ. ಇದರಲ್ಲಿ ಮ್ಯಾಟ್ ಡಾಮನ್ (ಒಡಿಸ್ಸಿಯಸ್ ಆಗಿ), ಟಾಮ್ ಹಾಲೆಂಡ್ (ಟೆಲಿಮ್ಯಾಕಸ್ ಆಗಿ) ಮತ್ತು ಆನ್ ಹ್ಯಾಥ್‌ವೇ (ಪೆನೆಲೋಪ್ ಆಗಿ) ನಟಿಸಿದ್ದಾರೆ. ಇವರ ಜೊತೆಗೆ ಝೆಂಡಾಯಾ, ರಾಬರ್ಟ್ ಪ್ಯಾಟಿನ್ಸನ್ ಮತ್ತು ಚಾರ್ಲಿಜ್ ಥೆರಾನ್ ಅವರಂತಹ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಭಾರತದಲ್ಲಿ ‘ದಿ ಒಡಿಸ್ಸಿ’ ಚಿತ್ರದ…

Read More

ಮುಂಬೈ, ಜೂ.5: ಭಾರತದ ಪ್ರಮುಖ ಮನರಂಜನೆ ಹಾಗೂ ತಂತ್ರಜ್ಞಾನ ಸಂಸ್ಥೆ ‘ಜೀ’ ದೇಶದ ಮೊದಲ ಬಹುಭಾಷಾ ಕಿರುಚಿತ್ರ ಸ್ಪರ್ಧೆ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ನ ಗ್ರಾಂಡ್ ಫಿನಾಲೆಗೆ ಸಿದ್ಧತೆ ಮಾಡಿಕೊಂಡಿದೆ. ನವ ಪೀಳಿಗೆಯ ಕಥೆಗಾರರನ್ನು ಗುರುತಿಸುವ ನಿಟ್ಟಿನಲ್ಲಿ 2026ರ ಆರಂಭದಲ್ಲಿ ಘೋಷಿಸಲಾದ ಈ ಸ್ಪರ್ಧೆ, ದೇಶಾದ್ಯಂತ ಉದಯೋನ್ಮುಖ ಪ್ರತಿಭೆಗಳು ತಮ್ಮ ಸ್ಮಾರ್ಟ್‌ಪೋನ್‌ಗಳಲ್ಲೇ ಚಿತ್ರೀಕರಿಸಿದ ವಿಶಿಷ್ಟ ಕಿರುಚಿತ್ರಗಳಿಗೆ ವೇದಿಕೆಯಾಗಿದೆ. ಒಟ್ಟು ಎಂಟು ಭಾರತೀಯ ಭಾಷೆಗಳಲ್ಲಿ ನಡೆದ ಈ ಸ್ಪರ್ಧೆಯ ಮುಖ್ಯ ಉದ್ದೇಶ ಸಿನಿಮಾ ನಿರ್ಮಾಣ ಕೇವಲ ಕೆಲವರಿಗಷ್ಟೇ ಸೀಮಿತವಾಗದೆ, ದೇಶದ ಮೂಲೆ ಮೂಲೆಯ ವಿಭಿನ್ನ ಸಂಸ್ಕೃತಿ ಮತ್ತು ಕಥೆಗಳಿಗೆ ಸೂಕ್ತ ಮನ್ನಣೆ ಸಿಗುವಂತೆ ಮಾಡುವುದಾಗಿದೆ. ಸ್ಪರ್ಧೆಯು ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕರನ್ನೊಳಗೊಂಡ ಜ್ಯೂರಿ ಸಮಿತಿಯು ವಿಜೇತರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಪ್ರತಿಷ್ಠಿತ ಸಮಿತಿಯಲ್ಲಿ ಅನುರಾಗ್ ಕಶ್ಯಪ್ (ಹಿಂದಿ), ರವಿ ಜಾಧವ್ (ಮರಾಠಿ), ನಾಗ್ ಅಶ್ವಿನ್ (ತೆಲುಗು), ಸೃಜಿತ್ ಮುಖರ್ಜಿ (ಬೆಂಗಾಲಿ), ಪಿ. ಸಮುದ್ರಖಣಿ (ತಮಿಳು),…

Read More

ಬೆಂಗಳೂರು, ಮೇ.22: ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ವಿನೂತನ ರೀತಿಯ ಮನಮುಟ್ಟುವ ಧಾರಾವಾಹಿಗಳನ್ನು ನೀಡುತ್ತಲೇ ಬರುತ್ತಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಚ್ಚ ಹೊಸ ಕಥೆ “ಮರ್ಯಾದೆ ರಾಮಣ್ಣ”. ಅಖಾಡಕ್ಕೆ ಇಳಿದ್ರೆ ಯಾರಿಗೂ ಜಗ್ಗದ ಮಲ್ಲಿಗೆಪುರದ ಪೈಲ್ವಾನ ನಮ್ ಕಥಾನಾಯಕ ರಾಮಣ್ಣ. ಮಾತೃವಾಕ್ಯ ಪರಿಪಾಲಕನಾಗಿರೋ ಈತ ಆಕಾಶವೇ ತಲೆ ಮೇಲೆ ಬಿದ್ರೂ ಅಮ್ಮನ ಮಾತು ಮೀರೋದಿಲ್ಲ ಅನ್ನೋ ಹಳ್ಳಿ ಹೈದ. ತೊಡೆ ತಟ್ಟಿ ಕುಸ್ತಿ ಗೆಲ್ಲೊ ಇವನು ಅಮ್ಮ ಜಯಮ್ಮನ ಮಾತಿಗೆ ಕಟ್ಟು ಬಿದ್ದು ಬ್ರಹ್ಮಚಾರಿಯಾಗಿ ಉಳಿದಿದ್ದಾನೆ. ಜಯಮ್ಮನ ಮರ್ಯಾದೆಗೆ ಕಿಂಚಿತ್ತೂ ಕುತ್ತು ಬರದಂತೆ ಕಾಯೋ ಮುದ್ದಿನ ಮಗ ಈ ಮರ್ಯಾದೆ ರಾಮಣ್ಣ. ಇನ್ನು ಶ್ರೀಮಂತಿಕೆಯಲ್ಲಿ ಬೆಳೆದಿರೋ ಅಪ್ಸರೆಯಂಥಾ ಹುಡ್ಗಿ ನಮ್ ಕಥಾನಾಯಕಿ ಐಶ್ವರ್ಯ. ತನ್ನ ಮಾತನ್ನೇ ಎಲ್ರೂ ಕೇಳುವಂತೆ ಮಾಡೋ ಅಪ್ಪನ ಮುದ್ದಿನ ಮಗಳು. ತಾನು ಸ್ವಂತ ಕಾಲಿನ ಮೇಲೆ ನಿಂತು, ಫಾರಿನ್ನಿಗೆ ಹೋಗಿ ಸೆಟ್ಲು ಆಗೋದನ್ನೇ ಲೈಫು ಅನ್ಕೊಂಡಿರೋ ಪ್ಯಾಟೆ ಹುಡ್ಗಿ. ಈಕೆ ನೋಡೋಕೆ ಮುದ್ದು, ಆದರೆ…

Read More