ವಿಜಯಪುರ: ದೇಶದಲ್ಲಿ ಬಾಂಗ್ಲಾ ವಲಸಿಗರು, ರೊಹಿಂಗ್ಯಾಗಳಿದ್ದಾರೆ. ಅವರೆನ್ನೆಲ್ಲ ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಕೆಲಸ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಎಸ್‌ ಐಆರ್ ಜಾರಿ ಮಾಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ ಐಆರ್ ಜಾರಿಗೆ ಬಂದ ನಂತರವೇ ವಲಸಿಗರು ಹಾಗೂ ರೊಹಿಂಗ್ಯಾಗಳಿಗೆ ಸಾಕಷ್ಟು ತೊಂದರೆಯಾಗಿದೆ. ಇದರೊಂದಿಗೆ ಅವರಿಗೆಲ್ಲ ಸಹಾಯ ಮಾಡುವವರನ್ನು ಕೂಡ ಹೊರಗೆ ಹಾಕಬೇಕು. ನಮ್ಮ ರಾಜ್ಯದಲ್ಲೂ ಇಂತಹವರು ಅನೇಕರಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಎಸ್‌ಐಆರ್ ಜಾರಿ ಮಾಡಬೇಕು ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಇಂತಹ ಜನರಿದ್ದಾರೆ. ಈ ನಕಲಿ ಮತದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ.

Share.
Leave A Reply