ಹಾವೇರಿ: ಡಿಸೆಂಬರ್ ನಂತರ ಸಾವು-ನೋವು ಹೆಚ್ಚಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Shree)ಭವಿಷ್ಯ (prediction) ನುಡಿದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡಿಸೆಂಬರ್ ತಿಂಗಳ ನಂತರ ಸಾವು-ನೋವು ಜಾಸ್ತಿ ಆಗುತ್ತವೆ. ಅಂಬಲಿಯು ಹಳಸೀತು, ಕಂಬಳಿಯು ಹಾಸೀತು ಅಂತ ಹೇಳಿದ್ದೆ. ಕೈಲಾಸದಲ್ಲಿ ಕೈ ಪೂಜೆ ಮಾಡುತ್ತೆ ಅಂತಲೂ ಹೇಳಿದ್ದೆ. ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಉಳಿಸಿದರು. ಸಂಗೊಳ್ಳಿ ರಾಯಣ್ಣ ಕಿತ್ತೂರು ಸಾಮ್ರಾಜ್ಯ ಉಳಿಸಿದರು, ಈ ಕುರುಬ ಸಮಾಜದವರು ಪ್ರಕೃತಿಯಲ್ಲಿ ಭವಿಷ್ಯ ಕಂಡವರು. ಹಾಲುಮತ ಸಮಾಜ ದೈವಿ ಬಲ ಉಳ್ಳ ಪುರಾತನ ಮತ. ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳುವುದು ಕಷ್ಟ ಎಂದು ಹೇಳಿರುವ ಅವರು ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಬಜೆಟ್ ಆಗೋವರೆಗೆ ಸಿಎಂ ಖುರ್ಚಿಗೆ ಏನೂ ತೊಂದರೆ ಇಲ್ಲ. ಬಜೆಟ್ ಬಳಿಕ ಅವರಾಗೇ ಬಿಟ್ಟರೆ ಬೇರೆಯವರಿಗೆ ಸಿಎಂ ಆಗುವ ಯೋಗ ಇದೆ. ಶಿವನ ಮಲ್ಲಿಗೆಯ ಮುಡಿಯ ಹೂವು ಬಲಪಾದದಿಂದ ಬಿದ್ದಿದೆ, ಎರಡು ಹೂವು ಶಿವನ ಪಾದ ಸೇರುತ್ತವೆ. ಯುಗಾದಿ ಕಳೆಯಲಿ, ಸಾವು-ನೋವು ಇನ್ನೂ ಹೆಚ್ಚಾಗುತ್ತೆ. ಹಿಂದೆ ಅರಸರ ಅರಮನೆಗೆ ಕಾರ್ಮೋಡ ಕವಿದೀತು ಅಂತಲೂ ಹೇಳಿದ್ದೆ. ಚೀನಾದಲ್ಲಿ ಏನಾಯ್ತು? ಪ್ರಧಾನಿ ಉಳಿದಿದ್ದೇ ಪವಾಡ ಎಂದಿದ್ದಾರೆ.

Share.
Leave A Reply