ದಾವಣಗೆರೆ: ರೈತರೊಬ್ಬರು ಬೆಳೆ ಉಳಿಸಿಕೊಳ್ಳಲು ಹೋಗಿ ಸಜೀವವಾಗಿ ದಹನವಾಗಿರುವ ಘಟನೆಯೊಂದು ನಡೆದಿದೆ.
ದಾವಣಗೆರೆಯಲ್ಲಿ (Davanagere) ಅಗ್ನಿ ದುರಂತ ಸಂಭವಿಸಿದ್ದು, ತಾನು ಬೆಳೆದಿದ್ದ ತಾಳೆ ಬೆಳೆಯನ್ನು ರಕ್ಷಣೆ ಮಾಡಲು ಹೋಗಿ ರೈತ ಸಜೀವ ದಹನವಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ (Chitradruga) ಜಿಲ್ಲೆ ಹಿರಿಯೂರಿನ ಗೊರ್ಲತ್ತು ಕ್ರಾಸ್ಬಳಿ ಬಸ್ ಅಗ್ನಿ ದುರಂತದಲ್ಲಿ 6 ಜನ ಸಜೀವವಾಗಿ ದಹನಗೊಂಡು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ.
ಈಗ ರೈತ ಬೆಳೆ ಉಳಿಸಿಕೊಳ್ಳಲು ಹೋಗಿ ಸಜೀವವಾಗಿ ದಹನಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಈಶ್ವರಪ್ಪ (75) ಸಜೀವ ದಹನವಾದ ರೈತ. ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಾಳೆ ಮರ ಬೆಳೆಯಲಾಗಿತ್ತು. ಆದರೆ ತಾಳೆ ಮರಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ತಾನೇ ಬೆಳೆದ ಬೆಳೆ ಕಾಪಾಡಲು ಹೋಗಿ ಈಶ್ವರಪ್ಪ ಸಜೀವವಾಗಿ ದಹನಗೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
