ಚಾಮರಾಜನಗರ: ಹೃದಯಾಘಾತಕ್ಕೆ ಎಎಸ್ ಐ ಬಲಿಯಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಚಾಮರಾಜನಗರದಲ್ಲಿ(Chamarajanagar) ನಡೆದಿದೆ. ರಾತ್ರಿ ಕರ್ತವ್ಯ ಮುಗಿಸಿ ಬೆಳಗ್ಗೆ ಮನೆಗೆ ಮರಳಿದ್ದ ಎಎಸ್ಐ (ASI) ನಾಗನಾಯಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ.
ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ನಾಗನಾಯಕ ಹೃದಯಾಘಾತಕ್ಕೆ ಬಲಿಯಾದವರು. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತು. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರು ಪೊಲೀಸ್ ಗೃಹದಲ್ಲಿ ವಾಸವಿದ್ದರು ಎನ್ನಲಾಗಿದೆ.
