ಮಂಡ್ಯ: ಜನಜಾನುವಾರುಗಳ ಮೇಲೆ ದಾಳಿ ಮಾಡಿ ಜನರ ನಿದ್ದೆಗೆಡಿಸಿದ್ದ ಚಿರತೆ (Leopard) ಕೊನೆಗೂ ಸೆರೆ ಸಿಕ್ಕಿದೆ.

ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಜಾನುಪಾರಗಳ ಮೇಲೆ ದಾಳಿ ನಡೆಸುತ್ತಿತ್ತು. ಹೀಗಾಗಿ ಜನ ಬೆಚ್ಚಿ ಬಿದ್ದಿದ್ದರು. ಮನೆಯಿಂದ ಹೊರಗೆ ಹೋಗಲು ಕೂಡ ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈಗ ಚಿರತೆ ಬೋನಿಗೆ ಬಿದ್ದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

ಚಿರತೆಯು ಈ ಭಾಗದ ಹಲವಾರು ನಾಯಿಗಳನ್ನ ಎಳೆದೊಯ್ದು ತಿಂದಿದ್ದನ್ನ ನೋಡಿದ್ದ ಗ್ರಾಮಸ್ಥಱು ನಾಗಮಂಗಲ ತಾಲೂಕು ಅರಣ್ಯ ಇಲಾಖೆಯವರಿಗೆ ದೂರು ಸಲ್ಲಿಸಿದ್ದರು. ಅರಣ್ಯ ಇಲಾಖೆಯವರು ಬೊಮ್ಮನಹಳ್ಳಿ ಗ್ರಾಮದ ಹತ್ತಿರ ಬೋನು ಇಟ್ಟಿದ್ದರು. ಅರಣ್ಯ ಇಲಾಖೆಯವರ ಕಾರ್ಯಕ್ಕೆ ಜನರು ಖುಷಿ ಪಡುತ್ತಿದ್ದಾರೆ.

Share.
Leave A Reply