ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಪಾನ್ ಶಾಪ್ ವೊಂದರ ಮೇಲೆ ಪುಂಡರು ದಾಳಿ ಮಾಡಿ ಹಲ್ಲೆ ಮಾಡಿ ವಸ್ತುಗಳನ್ನು ಹಾಳು ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ (Bengaluru) ಕತ್ರಿಗುಪ್ಪೆಯಲ್ಲಿ (Kathriguppe) ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪುಡಿ ರೌಡಿಗಳು ಪಾನ್ ಶಾಪ್ (Pan Shop) ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಬಷಿರ್ ಎಂಬುವರ ಮನೆಗೆ ನುಗ್ಗಿ 10ಕ್ಕೂ ಹೆಚ್ಚು ಪುಡಿ ರೌಡಿಗಳು ಹಲ್ಲೆ ನಡೆಸಿ ದಾಂಧಲೆ ಮಾಡಿದ್ದಾರೆ. ಪಾನ್ ಶಾಪ್‌ನಲ್ಲಿದ್ದ ಬಾಟಲ್‌ಗಳನ್ನ ಒಡೆದು ಹಾಕಿ ಪರಾರಿಯಾಗಿದ್ದಾರೆ.

ಲಾಂಗು, ಮಚ್ಚು ಹಿಡಿದು ದಾಳಿ ಮಾಡಿದ್ದನ್ನು ಕಂಡು ಆ ಆರಿಯಾದಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share.
Leave A Reply