ಶಿವಮೊಗ್ಗ:ಮಗಳಿಗೆ ಕಾಟ ಕೊಟ್ಟ ಅಳಿಯನನ್ನೇ ಮಾವ ಮುಗಿಸಿರುವ ಘಟನೆ ನಡೆದಿದೆ.

ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಈ ಘಟನೆ ನಡೆದಿದೆ. ಅರುಣ ಸಾವನ್ನಪ್ಪಿರುವ ವ್ಯಕ್ತಿ. ಅರುಣ್ ವೈನ್ ಶಾಪ್ ಮುಂದೆ ನಿಂತಾಗ ಇಬ್ಬರು ವ್ಯಕ್ತಿಗಳು ಆತನ ಮೇಲೆ ದಾಳಿ ನಡೆಸಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಪರಿಣಾ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅರುಣ್ ಮೇಲೆ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಹೆಂಡತಿಯ ಸೋದರ ಮಾವ ಲೋಕೇಶ್ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಾಡ್ ನಿಂದ ಅರುಣ್ ತಲೆಗೆ ಬಲವಾಗಿ ಹೊಡೆದಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಯಾವುದೇ ಸಾಕ್ಷಿಗಳು ಕೂಡ ಸಿಕ್ಕಿಲ್ಲ. ಅರುಣ್, ಯಶಸ್ವಿನಿ ಎಂಬುವರನ್ನು ಮದುವೆಯಾಗಿದ್ದರು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಯಶಸ್ವಿನಿ ಇತ್ತೀಚೆಗೆ ತವರು ಮನೆ ಸೇರಿದ್ದಾರೆ. ಮಗಳಿಗೆ ಅಳಿಯ ಹಿಂಸೆ ಕೊಡುತ್ತಿದ್ದಾನೆ ಎಂದುಕೊಂಡು ಹೆಣ್ಣು ಕೊಟ್ಟ ಮಾವ ಮತ್ತು ಯಶಸ್ವಿನಿ ಸೋದರ ಮಾವ ಇಬ್ಬರು ಸೇರಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಯಶಸ್ವಿನಿ ಹಾಗೂ ಅರುಣ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಈ ದಂಪತಿಗೆ ಒಂದು ಮಗು ಕೂಡ ಇದೆ. ಅರುಣ್ ಕೂಲಿ ಕೆಲಸ ಮಾಡುತ್ತಿದ್ದ. ಆತನಿಗೆ ಗಾಂಜಾ ಸೇವನೆಯ ಚಟ ಕೂಡ ಇತ್ತು. ಪದೇ ಪದೇ ಪತ್ನಿಗೆ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ.

Share.
Leave A Reply