ಒಳ್ಳೆ ಹುಡುಗ ಪ್ರಥಮ್ ವಿರುದ್ಧ ತಿರುಗಿ ಬಿದ್ದ ಡಿ ಫ್ಯಾನ್ಸ್.. ಎಣ್ಣೆ ಪಾರ್ಟಿ ಜಗಳದಲ್ಲಿ ಪ್ರಥಮ್ ಚಳಿಬಿಡಿಸಿದ್ದ ಅಭಿಮಾನಿಗಳು.. ಅಷ್ಟಕ್ಕೂ ಪ್ರಥಮ್ ಕೇಸ್ ಉಲ್ಟಾ ಹೊಡೀತಾ? ಇಲ್ಲ ಪ್ರಥಮ್ ಬೇಕು ಅಂತ ಸುಳ್ಳು ಹೇಳಿದ್ರಾ?
ದರ್ಶನ್.. ದರ್ಶನ್… ದರ್ಶನ್… ಇದು ಬರೀ ಹೆಸರಲ್ಲ ಅಭಿಮಾನಿಗಳ ಶಕ್ತಿ.. ಇಡೀ ಕರ್ನಾಟಕದಲ್ಲಿ ಅಲ್‌ಟೈಮ್ ಟ್ರೆಂಡ್‌ನಲ್ಲಿ ಇರುವ ಡಿ ಬಾಸ್. ಸದ್ಯ ಸರಣಿ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಅದರಲ್ಲೂ ಪ್ರಥಮ್ ಮತ್ತು ಡಿ ಫ್ಯಾನ್ಸ್ ಜಗಳ ಎಲ್ಲರಿಗೂ ಗೊತ್ತಿರೋದೇ. ಆದ್ರೆ ಈಗ ಹೊಸದಾಗಿ ನಟ ದರ್ಶನ್ ಅಭಿಮಾನಿಗಳು ಮತ್ತು ಪ್ರಥಮ್ ನಡುವಿನ ವಿವಾದವು ಕನ್ನಡ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ನಟ ಪ್ರಥಮ್ ಅವರ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನಿಸಲಾಯ್ತು ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ದರ್ಶನ್ ಅಭಿಮಾನಿಗಳ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಿರುಗೇಟು ನೀಡಲಾಗಿದೆ. ಪ್ರಥಮ್‌ಗೆ ಕೆಲವು ಪ್ರಶ್ನೆಗಳನ್ನು ದರ್ಶನ್ ಅಭಿಮಾನಿಗಳು ಕೇಳಿದ್ದಾರೆ.. ಪ್ರಥಮ್ ಮೇಲೆ ಹಲ್ಲೆ ಪ್ರಕರಣದ ಸತ್ಯ ಹೊರ ಬಂದಿದೆ. ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ ಖಾರ ಬನ್ ತಿಂದ ಪ್ರಕರಣವಿದು ಎಂದು ದರ್ಶನ್ ಫ್ಯಾನ್ಸ್ ಬರೆದುಕೊಂಡಿದ್ದು, ಪ್ರಥಮ್ ಕೇಸ್‌ಗೆ ಬಿಗ್‌ಟ್ವಿಸ್ಟ್ ಕೊಟ್ಟಿದ್ದಾರೆ.
ನಟ ದರ್ಶನ್ ಹೆಸರಿನ ಡಿ-ಕಂಪನಿ ಫ್ಯಾನ್‌ಪೇಜ್ ಪೋಸ್ಟ್ ವೈರಲ್ ಆಗಿದೆ.. ನಮ್ಮ ಪ್ರಶ್ನೆ, ದರ್ಶನ್ ಅವರು ಜೈಲಲ್ಲಿ ಇದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ಹೇಳಿಕೆ ನೀಡಿ ಕಾಮೆಂಟ್ ಮಾಡಿದವರ ವಿರುದ್ಧ ಸಾಲು ಸಾಲು ದೂರು ದಾಖಲಿಸಿದ ಕುತಂತ್ರಿಗೆ ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಅಂತಾ ಪ್ರಶ್ನಿಸಿದ್ದಾರೆ. ಅಲ್ಲದೇ, ಕಾರಣ ಇಷ್ಟೇ, ಅಂದು ಪೊಲೀಸ್ ದೂರು ನೀಡಲು ವೈದ್ಯರ ವರದಿ ಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು ಬೆಳಕಿಗೆ ಬರುತ್ತದೆ. ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ. ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ. ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ. ಹೇಗಿದ್ರೂ ನೀವು ನಿರ್ದೇಶಕರು ಅಲ್ಲವೇ ಸ್ವಾಮಿ. ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ ಎಂದಿದ್ದಾರೆ ದಚ್ಚು ಫ್ಯಾನ್ಸ್ ಡಿಚ್ಚಿ ಕೊಟ್ಟಿದ್ದಾರೆ.
ಇನ್ನು ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೆ ಏನು ಕೆಲಸ? ನೀವು ಸಭ್ಯರು ತಾನೆ? ರೌಡಿಗಳು ಅಂತ ತಿಳಿದ ಕೂಡಲೇ ಕಾರು ಹತ್ತಿ ಹೋಗಬೇಕಿತ್ತು. ಅವರ ಜೊತೆ ಸಮಯ ಕಳೆದು ಮತ್ತಿನಲ್ಲಿ ಮಾಡಿಕೊಂಡ ಎಡವಟ್ಟಿಗೆ ಬಾಸ್ ಹೆಸರು ತಳುಕು ಯಾಕೆ? ದರ್ಶನ್ ಅವರ ಅಧಿಕೃತ ಸಂಘಟನೆಗಳು ನೂರಾರಿವೆ. ರಿಜಿಸ್ಟರ್ ಪಟ್ಟಿ ನಮ್ಮತ್ರ ಇದೆ. ನಮ್ಮ ಸಂಘದ ಸದಸ್ಯರು, ಪದಾಧಿಕಾರಿಗಳು ಯಾರಾದ್ರೂ ಬೆದರಿಕೆ ಹಾಕಿದರೆ ಹೇಳಿ ಸ್ವಾಮಿ. ಪ್ರೈವೇಟ್ ತೋಟದಲ್ಲಿ ಅಮಲಿನಲ್ಲಿ ನಡೆದ ಜಗಳಕ್ಕೆ ನಮ್ಮ ನಟ ಆಗಲಿ, ನಮ್ಮ ಅಭಿಮಾನಿಗಳು ಆಗಲಿ ಹೊಣೆ ಯಾಕೆ ಸ್ವಾಮಿ? ಗೂಂಡಾಗಳನ್ನು ಸಾಕಬೇಡಿ ಮನೆಯಲ್ಲಿ ನಾಯಿ ಸಾಕಿ ಅಂದ ನಟನಿಗೆ ಸಿನಿಮಾ ಪ್ರಚಾರಕ್ಕೆ ದುಡ್ಡಿಲ್ಲ ಅಂದರೆ ಹೇಳಿ. ದರ್ಶನ್ ಅಣ್ಣ ಪ್ಲೀಸ್ ನಿಮ್ಮ ಮನೆ ನಾಯಿಗೆ ಹಾಕುವ ಊಟದಲ್ಲಿ ಚೂರು ಹಾಕಿ ಎಂದು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಖಡಕ್ ಪೋಸ್ಟ್ ಮಾಡಿದ್ದು, ಪ್ರಥಮ್ ಕೇಸ್‌ಗೆ ಬಿಗ್‌ಟ್ವಿಸ್ಟ್ ಕೊಟ್ಟಿದ್ದಾರೆ.
ಆದೇನೆ ಆಗಲಿ…. ಡಿ ಬಾಸ್‌ಫ್ಯಾನ್ಸ್ ಪ್ರಥಮ್‌ಗೆ ತಿರುಗೇಟು ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಏನ್‌ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.