ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್‌ ಅವರಿಗಿಂದು ಹುಟ್ಟುಹಬ್ಬದ ದಿನ. ಅವರ ಈ ವಿಶೇಷ ದಿನವನ್ನು ಫ್ಯಾನ್ಸ್ ಹಬ್ಬವಾಗಿ ಆಚರಿಸ್ತಾರೆ. 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಿವ ರಾಜ್‌ಕುಮಾರ್‌ ಅವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಸ್ನೇಹಿತರು, ಗಣ್ಯರು ವಿಶ್ ಮಾಡುತ್ತಿದ್ದಾರೆ.

ಇತ್ತ ಚಿತ್ರರಂಗದಲ್ಲಿ ಅವರ ಮುಂದಿನ ಸಿನಿಮಾದ ಪೋಸ್ಟರ್‌ಗಳನ್ನು ರಿಲೀಸ್ ಮಾಡಿ ಫ್ಯಾನ್ಸ್ ಗೆ ಶಿವಣ್ಣ ಗಿಫ್ಟ್ ನೀಡಿದ್ದಾರೆ. ಶಿವ ರಾಜ್‌ಕುಮಾರ್‌ ಅವರು ಕನ್ನಡ ಮಾತ್ರವಲ್ಲದೆ, ಇತರೆ ಭಾಷೆಯಲ್ಲೂ ಸ್ಟಾರ್ ಆಗಿ ಮಿಂಚಿದ್ದಾರೆ. ಕಾಲಿವುಡ್ ನಂತ್ರ ಟಾಲಿವುಡ್‌ನಲ್ಲೂ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.

ಹೊಸ ಸಿನಿಮಾದ ಪೋಸ್ಟರ್‌ ರಿಲೀಸ್‌

ಟಾಲಿವುಡ್ ನಟ ರಾಮ್ ಚರಣ್ ಅವರ ‘ಪೆಡ್ಡಿ’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಆ ಮೂಲಕ ತೆಲುಗಿನಲ್ಲೂ ಹ್ಯಾಟ್ರಿಕ್ ಹೀರೋ ಮಿಂಚಲಿದ್ದಾರೆ. ಹುಟ್ಟುಹಬ್ಬದ ದಿನದಂದು ‘ಪೆಡ್ಡಿ’ ಚಿತ್ರ ತಂಡ ಶಿವ ರಾಜ್‌ಕುಮಾರ್‌ ಅವರ ಫಸ್ಟ್ ಲುಕ್ ರಿವೀಲ್ ಮಾಡಿದೆ. ಶಿವ ರಾಜ್‌ಕುಮಾರ್‌ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ನಟ ರಾಮ್‌ ಚರಣ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಶಿವ ರಾಜ್‌ಕುಮಾರ್‌ ಬರ್ತ್‌ಡೇ ವಿಶ್‌ ಮಾಡಿದ್ದಾರೆ.

ಶಿವಣ್ಣ ‘ಗೌರ್ ನಾಯ್ಡು’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೀಸೆ ಬಿಟ್ಟುಕೊಂಡಿರುವ ಮನೆಯ ಹಿರಿಯ ಯಜಮಾನನಂತೆ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಗಂಭೀರ ಲುಕ್‌ನಲ್ಲಿ ಶಿವ ರಾಜ್‌ಕುಮಾರ್‌ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ಸಖತ್ ಕ್ರೇಜ್ ಹುಟ್ಟಿಸಿದೆ.
‘ಗೇಮ್ ಚೇಂಜ‌ರ್’ ಬಳಿಕ ರಾಮ್‌ ಚರಣ್ ಬುಚ್ಚಿ ಬಾಬು ಸನಾ ಅವರ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬೆಡಗಿ ಜಾನ್ವಿ ಕಪೂರ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಆರ್ ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿದೆ.

Share.
Leave A Reply