ಮಂಗಳೂರು: ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 (Kantara: A Legend Chapter-1) ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಮಧ್ಯೆ ರಿಷಬ್ ಗೆ ದೈವ ಮತ್ತೊಮ್ಮೆ ಆಶೀರ್ವದಿಸಿದೆ.

ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ ಎಂದು ಪಂಜುರ್ಲಿ (Panjurli) ದೈವ ಅಭಯ ನೀಡಿದ್ದು, ರಿಷಬ್ ಸಂತಸ ಇಮ್ಮಡಿಯಾಗಿದೆ. ಕಾಂತಾರಾರ ಚಾಪ್ಟರ್ 1 ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರ ತಂಡ(Hombale Films)ದಿಂದ ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆಯಿತು. ವತಿಯಿಂದ ಹರಕೆ ನೇಮೋತ್ಸವ ಆಯೋಜನೆಗೊಂಡಿತ್ತು.

ಈ ವೇಳೆ ರಿಷಬ್ ಶೆಟ್ಟಿ ಕಣ್ಣೀರು ಸುರಿಸಿದರು. ಆಗ ಅವರನ್ನು ಅಪ್ಪಿ ಅಲಂಗಿಸಿದ ಪಂಜುರ್ಲಿ ದೈವ ನಿನ್ನ ಹಿಂದೆ ನಾನಿದ್ದೇನೆ ಎಂದು ಕೈ ಭಾಷೆಯಲ್ಲಿ ಸನ್ನೆ ಮಾಡುವ ಮೂಲಕ ಅಭಯ ನೀಡಿತು. ವೀಳ್ಯ ಶಕುನದ ಮೂಲಕ ನಾನು ಸಂತುಷ್ಟನಾಗಿದ್ದೇನೆ ಎಂದು ದೈವ ಹೇಳಿತು. ಆಗ ಚಿತ್ರ ತಂಡ ಹರ್ಷೋದ್ಘಾರ ವ್ಯಕ್ತಪಡಿಸಿತು.

ಸೇವೆಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್, ರಿಷಭ್‌ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಹಲವರು ಇದ್ದರು. ಕಾಂತಾರ ಚಾಪ್ಟರ್ 1 ಸಿನಿಮಾದ ಯಶಸ್ಸಿನ ನಂತರ ರಿಷಬ್ ಹರಕೆ ತೀರಿಸಿದ್ದು, ಕಾಂತಾರ ಚಿತ್ರ ಗೆದ್ದಾಗಲೂ ಹರಕೆ ತೀರಿಸಿದ್ದರು. ದೈವ ಆಶೀರ್ವಾದ ಮಾಡಿರುವ ಸುದ್ದಿ ಕೇಳಿ ರಿಷಬ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Share.
Leave A Reply