ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final) ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕಪ್‌ಗಾಗಿ ಭಾರಿ ಸೆಣಸಾಟ ನಡೆಸುತ್ತಿದ್ದು, ಕಪ್ ಯಾರ ಪಾಲಾಗುತ್ತದೆ ಅಂತಾ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ವಿಶೇಷ ಎಂದರೆ ಆಸ್ಟ್ರೇಲಿಯಾ ನಾಯಕನಾಗಿರುವ ಪ್ಯಾಟ್ ಕಮ್ಮಿನ್ಸ್ ಈವರೆಗೆ ಆಡಿದ ಎಲ್ಲಾ ಅಂತಾರಾಷ್ಟ್ರೀಯ ಫೈನಲ್ ಪಂದ್ಯದಲ್ಲೂ ಗೆಲುವು ಸಾಧಿಸಿದ್ದಾರೆ.. ಹಾಗೆಯೇ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬಾವುಮಾ ಟೆಸ್ಟ್ ನಾಯಕತ್ವದಲ್ಲಿ ಆಡಿದ ಒಂಬತ್ತು ಪಂದ್ಯದಲ್ಲಿ 8 ಗೆಲುವನ್ನು ಸಾಧಿಸಿದ್ದಾರೆ.
ಹೀಗಾಗಿ, ಈ ಇಬ್ಬರಲ್ಲಿ ಯಾರು ಕಪ್ ಗೆಲ್ಲಬಹುದು ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.. ಮತ್ತೊಂದೆಡೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು 101 ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಇದರಲ್ಲಿ ಆಸ್ಟ್ರೇಲಿಯಾ 54 ಪಂದ್ಯ ಗೆದ್ದಿದ್ದು, ದಕ್ಷಿಣ ಆಫ್ರಿಕಾ ಕೇವಲ 26 ಪಂದ್ಯದಲ್ಲಿ ಜಯಸಾಧಿಸಿದೆ.
21 ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಅಂಕಿ ಅಂಶಗಳ ಪ್ರಕಾರ ಆಸ್ಟ್ರೇಲಿಯಾ ಬಲಿಷ್ಠ ತಂಡವಾಗಿ ಕಾಣುತ್ತಿದೆ. ಯಾರು ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಆಗ್ತಾರೆ ಕಾದು ನೋಡಬೇಕಾಗಿದೆ..
