ಮುಂಬರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಹೈವೋಲ್ಟೇಜ್ ಪಂದ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಪಾಕಿಸ್ತಾನ ಟೀಂ ಸೆಲೆಕ್ಟರ್ ಆಕಿಬ್ ಜಾವೇದ್ ಹೇಳಿರುವ ಹೇಳಿಕೆಯೊಂದು ಸಧ್ಯ ಎಲ್ಲಾ ಕಡೆ ವೈರಲ್ ಆಗಿದೆ.
ಈ ಬಾರಿ ಟೂರ್ನಿಯಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಸೋಲಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಭಾರತ ತಂಡವನ್ನು ಸೋಲಿಸುವುದು ಪಾಕ್‌ಗೆ ಅಷ್ಟೊಂದು ಸುಲಭವಲ್ಲ. ಏಕೆಂದರೆ ಮುಖಾಮುಖಿ ದಾಖಲೆಯಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಎದುರು ಪಾಕಿಸ್ತಾನದ ಮುಖಾಮುಖಿ ಅಂಕಿ-ಅಂಶ ಉತ್ತಮವಾಗಿಲ್ಲ. ಇಲ್ಲಿಯ ತನಕ ಆಡಿದ 13 ಪಂದ್ಯಗಳಲ್ಲಿ ಈ ಎರಡೂ ತಂಡಗಳು ಕಾದಾಟ ನಡೆಸಿವೆ. ಇದರಲ್ಲಿ ಭಾರತ ತಂಡ 9ರಲ್ಲಿ ಗೆಲುವು ಪಡೆದಿದ್ದರೆ, ಪಾಕಿಸ್ತಾನ ತಂಡ ಕೇವಲ ಮೂರು ಪಂದ್ಯಗಳಲ್ಲಿ ಜಯಿಸಿದೆ ಅಷ್ಟೆ. ಇನ್ನುಳಿದ ಒಂದು ಪಂದ್ಯ ಟೈ ಆಗಿದೆ.
ಪಾಕಿಸ್ತಾನ ಟಿ20 ತಂಡ ಭಾರತವನ್ನು ಸೋಲಿಸಬಹುದು. ಭಾರತದ ವಿರುದ್ಧ ಪಾಕಿಸ್ತಾನ ಪಂದ್ಯಗಳು ಯಾವಾಗಲೂ ದೊಡ್ಡದಾಗಿರುತ್ತವೆ. ಈ 17 ಸದಸ್ಯರ ಪಾಕ್ ತಂಡ ಯಾವುದೇ ತಂಡವನ್ನು ಸೋಲಿಸಬಹುದು. ನಾವು ಅವರ ಮೇಲೆ ಒತ್ತಡ ಹೇರಬಾರದು, ಆದರೆ ಈ ತಂಡದ ಬಗ್ಗೆ ನನಗೆ ಹೆಚ್ಚಿನ ಭರವಸೆ ಇದೆ ಎಂದು ಜಾವೇದ್ ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಗುಂಪು ಹಂತದ ಪಂದ್ಯ ಸೆಪ್ಟಂಬರ್ 14 ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Read Also : ಏಷ್ಯಾಕಪ್ ಕ್ರೇಜ್ ಶುರು.. ಭಾರತದ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ..!
