ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 17 ವರ್ಷಗಳು ಪೂರ್ಣಗೊಂಡಿವೆ. 18, 2008 ರಂದು ಚೊಚ್ಚಲ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಂದ್ಯವನ್ನು ಆಡಿದ್ದ ಕಿಂಗ್ ಕೊಹ್ಲಿ ಇಂದು ವಿಶ್ವದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ಈ ಸ್ಪೆಷಲ್ ಡೇಯಂದೇ ವಿರಾಟ್, ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದಾರೆ.
2008 ಆಗಸ್ಟ್ 18ರಂದು ವಿರಾಟ್, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ದಿನ. ಅಂದಿನಿಂದ ಇದುವರೆಗೆ ವಿರಾಟ್, ವೃತ್ತಿ ಜೀವನದಲ್ಲಿ ಸೋಲು ಗೆಲುವನ್ನ ಕಂಡಿದ್ದಾರೆ. ಬ್ಯಾಟಿಂಗ್ನಲ್ಲಿ ವೈಫಲ್ಯದ ದಿನಗಳನ್ನು ಕಂಡಿದ್ದಿದೆ. ಟೀಕೆ ಎದುರಿಸಿದ್ದಿದೆ. ಅಪಮಾನಕ್ಕೆ ಗುರಿಯಾಗಿದ್ದಿದೆ. ಇದೆಲ್ಲದರ ನಡುವೆ ಕ್ರಿಕೆಟ್ ಲೋಕದ ಕಿಂಗ್ ಆಗಿ ಮರೆಯುತ್ತಿರುವ ವಿರಾಟ್, ಶೀಘ್ರವೇ ಏಕದಿನ ಕ್ರಿಕೆಟ್ನಿಂದ ದೂರವಾಗ್ತಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಅಷ್ಟೇ ಅಲ್ಲ, ಬಿಸಿಸಿಐ ಕೊಹ್ಲಿಯನ್ನು ಸೈಡ್ ಲೈನ್ ಮಾಡ್ತಿದೆ ಎಂಬ ಟಾಕ್ಗಳು ನಡೀತಿವೆ. ಇದೆಲ್ಲದರ ನಡುವೆ ವಿರಾಟ್, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸದ್ಯ ಲಂಡನ್ನಲ್ಲಿ ವಿಶ್ರಾಂತಿಯ ಸಮಯ ಕಳೆಯುತ್ತಿರುವ ವಿರಾಟ್, ಆಸ್ಟ್ರೇಲಿಯಾ ಸರಣಿ ಆಡ್ತಾರಾ ಇಲ್ವಾ ಎಂಬ ಗೊಂದಲ ಇದೆ. ಇದೇ ವೇಳೆ ವಿರಾಟ್, ಫ್ಯಾನ್ಸ್ ಪೇಜ್ವೊಂದರ ಫೋಸ್ಟ್ಗೆ ಲೈಕ್ ಮಾಡಿದ್ದಾರೆ. ಅದ್ಯಾವುದೋ ಪೋಸ್ಟ್ಗೆ ಲೈಕ್ ಮಾಡಿದ್ರೆ, ಇಷ್ಟು ಸುದ್ದಿಯಾಗ್ತಿರಲಿಲ್ಲ. ಆದ್ರೆ, ವಿರಾಟ್ ಲೈಕ್ ಮಾಡಿರುವ ಪೋಸ್ಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಕೊಹ್ಲಿ ಅಭ್ಯಾಸ ನಡೆಸ್ತಿದ್ದಾರೆ ಎಂಬುವುದಾಗಿದೆ. ಈ ಲೈಕ್ ಮೂಲಕ ವಿರಾಟ್ ಆಸ್ಟ್ರೇಲಿಯಾ ಸರಣಿಯನ್ನಾಡುವ ಹಿಂಟ್ ನೀಡಿದ್ರು ಅನ್ನೋದು ಫ್ಯಾನ್ಸ್ ಮಾತಾಗಿದೆ.
ಈಗಾಗಲೇ ಟಿ20, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ 36 ವರ್ಷದ ಕೊಹ್ಲಿ, 2027ರ ವೇಳೆಗೆ 38 ವರ್ಷ ವಯಸ್ಸಾಗಿರುತ್ತೆ. 40ರ ಅಸುಪಾಸಿನಲ್ಲಿರುವ ಆಟಗಾರರಿಗೆ ಕೊಕ್ ನೀಡುವ ಉದ್ದೇಶ ಹೊಂದಿರುವ ಬಿಸಿಸಿಐ, ಸೈಡ್ ಲೈನ್ ಮಾಡುವ ಕೆಲಸ ಮಾಡ್ತಿದೆ. ಆದ್ರೆ, ಟೀಮ್ ಇಂಡಿಯಾದ ಯಶಸ್ಸಿಗಾಗಿ ಅಪರಿಮಿತವಾಗಿ ಶ್ರಮಿಸಿರುವ ವಿರಾಟ್ ಕೊಹ್ಲಿಗೆ, ಕೊನೆಯದಾಗಿ 2027ರ ವಿಶ್ವಕಪ್ ಆಡುವ ಭಾಗ್ಯ ಸಿಗಲಿ ಅನ್ನೋದೆ ಕೋಟ್ಯಾಂತರ ಅಭಿಮಾನಿಗಳ ಆಶಯ.
Read Also : ಏಷ್ಯಾ ಕಪ್‌ಗೆ ಟೀಂ ಇಂಡಿಯಾ ರೆಡಿ.. ರಾಹುಲ್, ಶ್ರೇಯಸ್‌ಗೆ ಶಾಕ್!
