ಭಾರತ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಟಿ20 ಹಾಗೂ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳೋದು ತೀರಾ ವಿರಳವಾಗಿದೆ.. ಫ್ಯಾನ್ಸ್‌ ಕೂಡ ಅವರ ಕಮ್‌ಬ್ಯಾಕ್‌ಗೆ ಕಾತುರದಿಂದ ಕಾಯ್ತಿದ್ದಾರೆ.. ಏಷ್ಯಾಕಪ್‌ ಮುಗಿಯುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಈ ದಿಗ್ಗಜರು ವಾಪಸ್‌ ಆಗಲಿದ್ದಾರೆ..

ಆದ್ರೆ ಇದರ ಮಧ್ಯೆ ರೋಹಿತ್‌ ಶರ್ಮಾ ತಮ್ಮ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.. ಆಸ್ಟ್ರೇಲಿಯಾ ಸರಣಿಗೂ ಮುನ್ನ ಸೆಪ್ಟೆಂಬರ್‌ 30ರಿಂದ ಅಕ್ಟೋಬರ್‌ 5ರವರೆಗೆ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವೆ ಏಕದಿನ ಸರಣಿ ನಡೆಯಲಿದ್ದು… ರೋಹಿತ್‌ ಈ ಪಂದ್ಯಗಳನ್ನ ಆಡಲಿದ್ದಾರೆ.

ಐಪಿಎಲ್‌ ಬಳಿಕ ಯಾವುದೇ ಕ್ರಿಕೆಟ್‌ ಆಡದಿರುವ ಕಾರಣ ಆಸ್ಟ್ರೇಲಿಯಾ ವಿರುದ್ಧ ಭರ್ಜರಿಯಾಗಿ ಬ್ಯಾಟ್‌ ಬೀಸಲು ಪೂರ್ವ ತಯಾರಿಯಾಗಿ ರೋಹಿತ್‌ ಭಾರತ ಎ ತಂಡದ ಪರ ಆಡಲಿದ್ದಾರೆ.. ಈಗಾಗಲೇ ರೋಹಿತ್‌ ಜಿಮ್‌ನಲ್ಲಿ ಕಸರತ್ತು ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸತತ ಪ್ರಯತ್ನ ಮಾಡ್ತಿದ್ದಾರೆ. ಜೊತೆಗೆ ಮುಂದಿನ 2027ರ ಏಕದಿನ ವಿಶ್ವಕಪ್‌ ಆಡುವ ವಿಶ್ವಾಸದಲ್ಲಿದ್ದಾರಂತೆ.

Read Also : ಏಷ್ಯಾ ಕಪ್‌ಗೆ ಟೀಂ ಇಂಡಿಯಾ ರೆಡಿ.. ರಾಹುಲ್‌, ಶ್ರೇಯಸ್‌ಗೆ ಶಾಕ್‌!

Share.
Leave A Reply