ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ಪಂದ್ಯವನ್ನು ನೋಡಲು ಇಡೀ ವಿಶ್ವವೇ ಎದುರು ನೋಡ್ತಾ ಇದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ನಿಜಕ್ಕೂ ರೋಕಚತೆ ಹೆಚ್ಚಿಸಿದೆ. ಆದರೆ ಸದ್ಯದ ಭಾರತ ತಂಡ ನಿಜಕ್ಕೂ ಪಾಕ್‌ ಆಟಗಾರರಿಗೆ ಭಯ ಹುಟ್ಟಿಸಿದ್ದಂತೆ ಕಾಣುತ್ತಿದೆ.

ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಭಾರತದ ಸ್ಟಾರ್‌ ಆಟಗಾರರ ಈಗೀನ ಫಾರ್ಮ್‌ ನಿಜಕ್ಕೂ ಪಾಕ್‌ ಆಟಗಾರರಿಗೆ ಭಯ ಹುಟ್ಟಿಸಿದೆ. ಟೀಮ್ ಇಂಡಿಯಾದ ಯುವ ಆಟಗಾರನ ಬಗ್ಗೆ ಪಾಕ್‌ ಮಾಧ್ಯಮದಲ್ಲೂ ಸಾಕಷ್ಟು ಚರ್ಚೆಗಳು ನಡೆದಿವೆ. ಅಲ್ಲದೇ ಓರ್ವ ಮಾಜಿ ಪಾಕ್‌ ಕ್ರಿಕೆಟಿಗ ಕೂಡ ಅವರನ್ನ ಹಾಡಿ ಹೊಗಳಿದ್ದಾರೆ. ಆ ಪ್ಲೇಯರ್ ಬೇರೆ ಯಾರೂ ಅಲ್ಲ, ಐಸಿಸಿ ಟಿ20 ಬ್ಯಾಟಿಂಗ್‌ನಲ್ಲಿ ನಂಬರ್ 1 ಸ್ಥಾನ ಪಡೆದಿರುವ ಅಭಿಷೇಕ್‌ ಶರ್ಮಾ.

ಏಷ್ಯಾ ಕಪ್‌ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಅಭಿಷೇಕ್‌ ಶರ್ಮಾ ಅವರ ಬ್ಯಾಟಿಂಗ್ ಧಾಟಿ ಕಂಡು ಎದುರಾಳಿಗಳು ಬೆಚ್ಚಿ ಬಿದ್ದಿದ್ದಾರೆ. ಇವರು ಆಡಿದ 18 ಟಿ20 ಪಂದ್ಯದಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ 500ಕ್ಕೂ ಹೆಚ್ಚು ರನ್ ಬಾರಿಸಿದ್ದು, ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 193 ಆಗಿದೆ.

Read Also : RCB ನಾಯಕ ರಜತ್‌ ಪಾಟೀದಾರ್‌ ಭರ್ಜರಿ ಶತಕ!

Share.
Leave A Reply