ಇಂಗ್ಲೆಂಡ್‌ ವಿರುದ್ಧದ ರಣರೋಚಕ ಟೆಸ್ಟ್‌ ಸರಣಿಯನ್ನು ಡ್ರಾ ಮಾಡಿಕೊಂಡ ಬಳಿಕ ಟೀಂ ಇಂಡಿಯಾ ಮತ್ತೊಂದು ಸವಾಲು ಎದುರಿಸಲು ಸಜ್ಜಾಗ್ತಿದೆ.. ಸೆಪ್ಟೆಂಬರ್‌ 9ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೆ ಬಲಿಷ್ಠ ತಂಡ ಕಟ್ಟಲು ಆಯ್ಕೆದಾರರು ಪ್ಲ್ಯಾನ್‌ ಮಾಡ್ತಿದ್ದಾರೆ.. ಐಪಿಎಲ್‌ನಲ್ಲಿನ ಪ್ರದರ್ಶನ, ಕಳೆದ ಟಿ20 ಮ್ಯಾಚ್‌ಗಳಲ್ಲಿ ಅಬ್ಬರಿಸಿದವರು ಹಾಗೂ ಟೆಸ್ಟ್‌ ಸರಣಿಯನ್ನೂ ಗಮನದಲ್ಲಿಟ್ಟುಕೊಂಡು ಏಷ್ಯಾಕಪ್‌ಗೆ ಟೀಂ ಸೆಲೆಕ್ಟ್‌ ಮಾಡಲಾಗ್ತಿದೆ.. ಈ ಬಾರಿಯ ಏಷ್ಯಾಕಪ್‌ ಟಿ20 ಮಾದರಿಯಲ್ಲಿರುವುದರಿಂದ ತಂಡ ಪ್ರಕಟಿಸಲು ಸಾಕಷ್ಟು ಆಯ್ಕೆಗಳಿವೆ.. ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರಿದ್ದಾರೆ.. ಕೆಲವು ಆಟಗಾರರು ಕಮ್‌ಬ್ಯಾಕ್‌ ಮಾಡಿ ಅಚ್ಚರಿ ಮೂಡಿಸಿದ್ರೂ ಸಂದೇಹವಿಲ್ಲ..

ಸೂರ್ಯ, ಬುಮ್ರಾ ಇಲ್ಲದೇ ಆತಂಕ..!
ಮುಂಬರುವ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಈ ಬಾರಿ ಏಷ್ಯಾಕಪ್‌ ಮ್ಯಾಚ್‌ಗಳನ್ನು ಟಿ20 ಮಾದರಿಯಲ್ಲಿ ಆಡಿಸಲಾಗ್ತಿದೆ.. ಇದ್ರ ಜೊತೆಗೆ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಲು ಟೀಂ ಇಂಡಿಯಾಗೂ ಈ ಟೂರ್ನಿ ಮಹತ್ವದ್ದಾಗಲಿದೆ.. ಜೊತೆಗೆ ಕಳೆದ 2023ರ ಏಷ್ಯಾಕಪ್‌, 2024ರ ಟಿ20 ವಿಶ್ವಕಪ್‌ ಭಾರತವೇ ಗೆದ್ದಿರುವ ಕಾರಣ ಈ ಬಾರಿ ತನ್ನ ಪ್ರತಿಷ್ಠಯನ್ನು ಉಳಿಸಿಕೊಳ್ಳುವ ಒತ್ತಡವೂ ಇರಲಿದೆ.. ಹೀಗಾಗಿ ಆಯ್ಕೆದಾರರು ಅಳೆದುತೂಗಿ ಆಟಗಾರರನ್ನು ಆಯ್ಕೆ ಮಾಡುವ ಯೋಜನೆಯಲ್ಲಿದ್ದಾರೆ.. ಈಗಾಗಲೇ ಭಾರತದ ಟಿ20 ತಂಡವನ್ನು ನಾಯಕ ಸೂರ್ಯಕುಮಾರ್‌ ಮುನ್ನಡೆಸುತ್ತಿದ್ದಾರೆ.. ಆದ್ರೆ ಅವರಿಗೆ ಶಸ್ತ್ರಚಿಕಿತ್ಸೆಯಾಗಿ ವಿಶ್ರಾಂತಿಯಲ್ಲಿರುವ ಕಾರಣ ಏಷ್ಯಾಕಪ್‌ಗೆ ಅಲಭ್ಯರಾಗುವ ಮುನ್ಸೂಚನೆಗಳಿಗೆ.. ಜೊತೆಗೆ ರಿಷಭ್‌ ಪಂತ್‌ಗೆ ಇಂಜುರಿ, ಬುಮ್ರಾಗೆ ಒತ್ತಡದ ಕಾರಣ ವಿಶ್ರಾಂತಿ ಹೀಗೆ ಈ ಎಲ್ಲಾ ಬೆಳವಣಿಗೆಗಳು ಭಾರತಕ್ಕೆ ಅಗ್ನಿಪರೀಕ್ಷೆಯಾಗಿದೆ.

ಟಿ20 ನಾಯಕನಾಗ್ತಾರಾ ಶುಭ್‌ಮನ್‌ ಗಿಲ್‌..?
ಸೂರ್ಯ ಕುಮಾರ್‌ ಅನುಪಸ್ಥಿತಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವ ವಹಿಸಿಕೊಂಡ್ರೂ ಅಚ್ಚರಿ ಪಡಬೇಕಾಗಿಲ್ಲ.. ಜೊತೆಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್‌ ಬೀಡುವ ಸಾಧ್ಯತೆ ಹೆಚ್ಚಿದೆ.. ಇನ್ನೂ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಅಭಿಶೇಕ್‌ ಶರ್ಮಾ, ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್‌ ಏಷ್ಯಾಕಪ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬಹುದು.. ನಾಲ್ಕನೇ ಕ್ರಮಾಂಕದಲ್ಲಿ ಮುಂಬೈನ ನಂಬಿಕಸ್ಥ ಆಟಗಾರ ತಿಲಕ್‌ ವರ್ಮಾ ಬ್ಯಾಟಿಂಗ್‌ ಮಾಡಬಹುದು.. ಇನ್ನೂ ವಿಕೆಟ್‌ ಕೀಪರ್‌ ಬ್ಯಾಟ್ಸಮನ್‌ ಆಗಿ ಸಂಜು ಸ್ಯಾಮ್ಸನ್‌ ಅಥವಾ ಜಿತೇಶ್‌ ಶರ್ಮಾ ಎಂಟ್ರಿ ಕೊಡಬಹುದು.. ಯುಎಇನಲ್ಲಿ ನಿಧಾನಗತಿಯ ಪಿಚ್‌ಗಳು ಇರುವುದರಿಂದ ವೇಗದ ಇನ್ನಿಂಗ್ಸ್‌ ಹಾಗೂ ಸ್ಟ್ರೈಕ್‌ ರೊಟೇಟ್‌ ಮಾಡುವ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಆಯ್ಕೆದಾರರು ನಿಗಾವಹಿಸಿದ್ದಾರೆ.. ಹೀಗಾಗಿ ಸ್ಪಿನ್ನರ್ಸ್‌ ಮೇಲೆ ಶಿವಂ ದುಬೆ ಉತ್ತಮ ಹಿಡಿತ ಹೊಂದಿರುವುದರಿಂದ ಅವರೇ ಆಯ್ಕೆಯಾಗ್ತಾರೆ ಅಂತ ಹೇಳಲಾಗ್ತಿದೆ.. ಜೊತೆಗೆ ರಿಂಕು ಸಿಂಗ್‌, ರಿಯಾನ್‌ ಪರಾಗ್‌ ಪರಿಗಣಿಸುವ ಸಾಧ್ಯತೆ ಇದೆ.

ಭಾರತಕ್ಕೆ ಅಗ್ನಿ ಪರೀಕ್ಷೆ
ಇನ್ನೂ ಅಕ್ಷರ್‌ ಪಟೇಲ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಅಬ್ಬರಿಸುವ ಕೌಶಲ್ಯ ಹೊಂದಿರುವ ಕಾರಣ ದುಬೈ ಪಿಚ್‌ಗಳಿಗೆ ಹೇಳಿ ಮಾಡಿಸಿದಂತ ಆಟಗಾರ.. ಹೀಗಾಗಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.. ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ನ ಮ್ಯಾಜಿಕ್‌, ಮೊಹಮ್ಮದ್‌ ಸಿರಾಜ್‌ನ ಅಗ್ರೆಸ್ಸಿವ್‌ ದಾಳಿಯನ್ನು ಪರಿಗಣಿಸಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತೆ ಅಂತ ಹೇಳಲಾಗ್ತಿದೆ.. ಇನ್ನೂ ಪಿಚ್‌ ರಿಪೋರ್ಟ್‌ ಆಧರಿಸಿ ಕುಲ್‌ದೀಪ್‌ ಜೊತೆ ಮತ್ತೋರ್ವ ಸ್ಪಿನ್ನರ್‌ ರವಿ ಬಿಷ್ಣೋಯ್‌ರನ್ನ ಆಯ್ಕೆ ಮಾಡಲಾಗುತ್ತೆ ಅಂತ ಹೇಳಲಾಗ್ತಿದೆ.. ಸಿರಾಜ್‌ ಜೊತೆಗೆ ಅರ್ಷದೀಪ್ ಸಿಂಗ್ ಅಥವಾ ಹರ್ಷಿತ್ ರಾಣಾರನ್ನು ಸೆಲೆಕ್ಟ್‌ ಮಾಡಬಹುದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ..

ಒಟ್ನಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇನ್ನೆರಡು ವಾರದಲ್ಲಿ ಸಂಪೂರ್ಣ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.. ನಿರೀಕ್ಷೆಯಂತೆ ಇದೇ ತಂಡವನ್ನು ಪ್ರಕಟಿಸುತ್ತಾರೋ.. ಅಥವಾ ಕೆ.ಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯರಂತಹ ಆಟಗಾರರು ಅಚ್ಚರಿ ಆಯ್ಕೆಯಾಗಿ ಎಲ್ಲರ ಗಮನ ಸೆಳೆಯುತ್ತಾರೋ ಕಾದು ನೋಡಬೇಕಿದೆ..

Share.
Leave A Reply