ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಜೋಡೆತ್ತುಗಳು. ಜೊತೆಯಾಗಿ ಕ್ರಿಕೆಟ್ ಕರಿಯರ್ ಆರಂಭಿಸದಿದ್ರೂ, ಟಿ20, ಟೆಸ್ಟ್​ ಕ್ರಿಕೆಟ್​​​ ಕರಿಯರ್​​ಗೆ ಅಂತ್ಯ ಹಾಡಿದ್ದು ಜೊತೆಯಾಗಿಯೇ. ಇದೀಗ ಏಕದಿನ ಕ್ರಿಕೆಟ್​ನಿಂದಲೂ ಜೊತೆಯಾಗಿಯೇ ಸೈಡ್ ಲೈನ್ ಆಗ್ತಿದ್ದಾರಾ ಎಂಬ ಅನುಮಾನ ಮೂಡಿಸಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಸೆಲೆಕ್ಷನ್ ಕಮಿಟಿ ರೋಹಿತ್​ಗೆ ಕ್ಯಾಪ್ಟನ್ಸಿಯಿಂದ ಕೊಕ್​ ಕೊಟ್ಟಿದೆ. ಇದ್ರಿಂದ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಸೈಡ್​ ಲೈನ್ ಆಗ್ತಿದ್ದಾರಾ ಎಂಬ ಅನುಮಾನ ಹುಟ್ಟಿದೆ.

ರೋಹಿತ್, ವಿರಾಟ್​ 2027ರ ಏಕದಿನ ವಿಶ್ವಕಪ್ ಗೆಲ್ಲುವ​​ ಕನಸಿನಲ್ಲಿದ್ದಾರೆ. ಆದ್ರೆ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಆಸೆಗೆ ಬಿಸಿಸಿಐ ತಣ್ಣೀರು ಎರಚಲು ಮುಂದಾಗಿದೆ. ಆಸ್ಟ್ರೇಲಿಯಾ ಸರಣಿ ನಂತರ ಸೈಡ್​ಲೈನ್​ ಮಾಡುವ ಉದ್ದೇಶ ಹೊಂದಿರುವ ಬಿಸಿಸಿಐ, ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕೆಂದು ಸೂಚಿಸಿದೆ. ಪರೋಕ್ಷವಾಗಿ ರನ್​ ಗಳಿಸಿದರಷ್ಟೇ ಟೀಮ್ ಇಂಡಿಯಾದಲ್ಲಿ ಸ್ಥಾನ ಎಂಬ ಎಚ್ಚರಿಕೆ ಸಂದೇಶ ನೀಡಿದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್​ ಕೊಹ್ಲಿಯ ಏಕದಿನ ವಿಶ್ವಕಪ್ ಭವಿಷ್ಯವೂ ಸಂಕಷ್ಟಕ್ಕೆ ಸಿಲುಕಿದೆ. ಟಿ20, ಟೆಸ್ಟ್​ನಿಂದ ದೂರ ಉಳಿದಿರುವ ವಿರಾಟ್, ರೋಹಿತ್, ಏಕದಿನ ತಂಡದಿಂದ ದೂರ ಉಳಿಯುವ ಸಮಯ ದೂರವೇನಿಲ್ಲ. 2027ರ ಏಕದಿನ ವಿಶ್ವಕಪ್​ ವೇಳೆಗೆ 40 ವರ್ಷ ವಯಸ್ಸಾಗಿರುತ್ತೆ. ಈ ಕಾರಣಕ್ಕೆ ಬಿಸಿಸಿಐ ಹೊಸ ಟೀಮ್ ಕಟ್ಟುವ ಲೆಕ್ಕಾಚಾರದಲ್ಲಿದೆ. ಆಸೀಸ್‌ ಪ್ರವಾಸದ ಏಕದಿನ ಸರಣಿಯೇ ವಿರಾಟ್ ಹಾಗೂ ರೋಹಿತ್ ಶರ್ಮಾ ಪಾಲಿಗೆ ಕೊನೆಯಾದರು ಅಚ್ಚರಿ ಇಲ್ಲ.

Read Also : ಊಟಕ್ಕಿಂತ ಮುಂಚೆ ಇದನ್ನ ತಿಂದ್ರೆ 99% ಕಾಯಿಲೆಗಳು ದೂರ

Share.
Leave A Reply