ಅದು 18 ವರ್ಷದ ಕನಸು ನನಸಾದ ಕ್ಷಣ. ಇಡೀ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಸಂತಸದ ಕ್ಷಣ, 18 ನಿಮಿಷವೂ ಇರಲಿಲ್ಲ. ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು ಆದ್ರೆ ಈ ಖುಷಿಯನ್ನ ಆ ಒಂದು ದುರ್ಘಟನೆ ಸರ್ವನಾಶ ಮಾಡಿತ್ತು. ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ರು. ಈ ದುರ್ಘಟನೆ ಇತಿಹಾಸದಲ್ಲಿ ಅಳಿಸಲಾಗದ ಘಟನೆಯಾಗಿದ್ದು, ಆರ್‌ಸಿಬಿಗೆ ದೊಡ್ಡ ಕಪ್ಪು ಚುಕ್ಕೆ ಆಗಿದೆ.

ಈ ಕರಾಳ ಘಟನೆ ಸಂಭವಿಸಿ ಇತ್ತೀಚೆಗಷ್ಟೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ಕೇರ್ಸ್‌ ಎಂಬ ಯೋಜನೆಯನ್ನು ಆರಂಭಿಸಿದ್ದು, ಇದರಡಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವಿಶೇಷ ಸಂದೇಶದ ಜೊತೆಗೆ ತಲಾ 25 ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ 3 ತಿಂಗಳ ಬಳಿಕ ಅಭಿಮಾನಿಗಳಿಗೆ ಭಾವುಕ ಸಂದೇಶದವನ್ನು ರವಾನೆ ಮಾಡಿದ್ದಾರೆ. ಈ ದುರಂತ ಸಂಬಂಧ ವಿರಾಟ್ ಕೊಹ್ಲಿ ತಮ್ಸ್‌ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಭಾವುಕ ಸಂದೇಶವನ್ನು ರವಾನಿಸಿದ್ದಾರೆ.

RCB ಅಭಿಮಾನಿಗಳಿಗೆ ವಿರಾಟ್‌ ಸಂದೇಶ!
ಆರ್‌ಸಿಬಿ ಅಧಿಕೃತ ಎಕ್ಸ್ ಖಾತೆಯ ಮೂಲಕ ಸಂದೇಶ ನೀಡಿರುವ ಕೊಹ್ಲಿ, ಜೂ.4ರಂದು ನಡೆದ ಘಟನೆಯನ್ನು ಎದುರಿಸಲು ಜೀವನದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಯಾವ ದಿನ ಆರ್‌ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತವಾಗಿ ಬದಲಾಯ್ತು. ಆ ಸಮಯದಲ್ಲಿ ಜೀವ ಕಳೆದುಕೊಂಡವರು ಮತ್ತು ಗಾಯಾಳುಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸಿದ್ದೇನೆ. ನೀವೆಲ್ಲರೂ ಇದೀಗ ನಮ್ಮ ಕಥೆಯ ಭಾಗವಾಗಿದ್ದೀರಿ. ಇನ್ಮುಂದೆ ನಾವು ಒಟ್ಟಾಗಿ ಕಾಳಜಿ, ಜವಾಬ್ದಾರಿ ಹಾಗೂ ಗೌರವದೊಂದಿಗೆ ಮುಂದುವರಿಯೋಣ ಅಂತಾ ಭಾವುಕ ಸಂದೇಶ ರವಾನಿಸಿದ್ದು, ಇದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

Read Also : ಕೊನೆಗೂ ಆರ್‌ಸಿಬಿ ಪೋಸ್ಟ್.. ಫ್ಯಾನ್ಸ್‌ಗೆ ಗುಡ್‌ನ್ಯೂಸ್!

Share.
Leave A Reply