ರಾಮ ಶಾಮ ಭಾಮ ಸಿನಿಮಾ ಯಾರಿಗೊತ್ತಿಲ್ಲ ಹೇಳಿ. ಸ್ಯಾಂಡಲ್‌ವುಡ್‌ನ ಬೆಸ್ಟ್ ಹಾಸ್ಯ ಚಲನಚಿತ್ರಗಳಲ್ಲಿ ಇದೂ ಕೂಡ ಒಂದು. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಸಂಭಾಷಣೆ ಬರೆದಿದ್ದ ಖ್ಯಾತ ನಾಟಕಕಾರ ಹಾಗೂ ಸಾಮಾಜಿಕ ಚಿಂತಕ ಶ್ರೀ ಯಶವಂತ ಸರದೇಶಪಾಂಡೆ ಅವರು ವಿಧಿವಶರಾಗಿದ್ದಾರೆ. ಇವತ್ತು ಬೆಳಿಗ್ಗೆ ಧಾರವಾಡದಿಂದ ಬೆಂಗಳೂರಿಗೆ ಸರದೇಶಪಾಂಡೆ ಬಂದಿದ್ದರು. ಎದೆ ನೋವು ಕಾಣಿಸಿಕೊಂಡ ಕಾರಣ ಬನ್ನೇರುಘಟ್ಟದ fortis ಆಸ್ಪತ್ರೆ ಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬಾಲ್ಯದಿಂದಲೇ ರಂಗಭೂಮಿಯತ್ತ ಅಪಾರ ಒಲವು ಬೆಳೆಸಿಕೊಂಡಿದ್ದ ಯಶವಂತ ಸರದೇಶಪಾಂಡೆ ಅವರಿಗೆ 60 ವರ್ಷ ವಯಸ್ಸಾಗಿತ್ತು. ಕಲೆ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಯಶವಂತ ಸರದೇಶಪಾಂಡೆ ಅವರು ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ ಅನೇಕ ನಾಟಕಗಳನ್ನು ರಚಿಸಿ, ಅಭಿನಯಿಸಿದ್ದರು. ಅಲ್ಲದೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಮಿಟಿ ನಟರಾಗಿ ನಟಿಸಿದ್ದರು. ಮುಂಬರುವ ಅಕ್ಟೋಬರ್ 18ರಂದು ಡಾ ಪ್ರವೀಣ್ ಗೊಡಖಿ೦ಡಿ ರಚನೆಯ ‘ಕೊಳಲು.com(edy)’ ಎಂಬ ಹೊಸ ನಾಟಕದಲ್ಲಿ ಯಶವಂತ ಸರದೇಶಪಾಂಡೆ ಅಭಿನಯಿಸಲು ಮುಂದಾಗಿದ್ದರು. ಈ ಬಗ್ಗೆ ನಿನ್ನೆಯಷ್ಟೇ ಸೋಶೀಯಲ್ ಮೀಡಿಯಾ ಮೂಲಕ ಯಶವಂತ ಸರದೇಶಪಾಂಡೆ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದರು. ಇದೀಗ ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ ಉಂಟುಮಾಡಿದೆ.
Read also : ಟೀಂ ಇಂಡಿಯಾ ಪರಾಕ್ರಮಕ್ಕೆ ತಲೆಬಾಗಿದ ಜಗತ್ತು : ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಸೂರ್ಯನ ಬೆಳಕು