ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಇನ್ನೇನು ಎರಡೇ ದಿನಗಳಲ್ಲಿ ರಿಲೀಸ್ ಆಗಲಿದೆ. ಇಂತಹ ಮಹತ್ವದ ಸಂದರ್ಭದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ನಿರ್ಧಾರದಿಂದ ಭಾರತೀಯ ಸಿನಿಮಾ ಸೇರಿದಂತೆ ವಿದೇಶಿ ಚಲನಚಿತ್ರಗಳಿಗೆ ಭಾರೀ ಹೊಡೆತ ಬಿದ್ದಿದೆ.. ಅಮೆರಿಕದ ಚಲನಚಿತ್ರೋದ್ಯಮವನ್ನು ವಿದೇಶಿ ರಾಷ್ಟ್ರಗಳು ಕದಿಯುತ್ತಿವೆ ಎಂದು ಆರೋಪಿಸಿರುವ ಟ್ರಂಪ್, ಯುನೈಟೆಡ್ ಸ್ಟೇಟ್ಸ್ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಕಾಂತಾರದ ಮೊದಲ ಭಾಗ ಬಿಡುಗಡೆಯಾದಾಗ, ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶದಲ್ಲಿರುವ ಕನ್ನಡಿಗರಿಂದಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದ್ರಲ್ಲಿ ಅಮೆರಿಕದಲ್ಲಿ ಸಿನಿಮಾಗೆ ಉತ್ತಮ ಬೆಂಬಲ ಸಿಕ್ಕಿತ್ತು. ಹೀಗಾಗಿ ಕಾಂತಾರ ಚಾಪ್ಟರ್ 1 ಮೇಲೂ ಕೂಡ ಇದೇ ನಿರೀಕ್ಷೆಯನ್ನ ಇರಿಸಲಾಗಿತ್ತು.

ಆದರೆ ಟ್ರಂಪ್ ಅವರ ಈ ನಿರ್ಧಾರ ಕಾಂತಾರ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಮೆರಿಕವು ಭಾರತೀಯ ಸಿನಿಮಾಗಳಿಗೆ ಪ್ರಮುಖ ವಿದೇಶಿ ಮಾರುಕಟ್ಟೆಯಾಗಿದೆ. ಉದ್ಯಮದ ಮೂಲಗಳ ಪ್ರಕಾರ, ಭಾರತೀಯ ಸಿನಿಮಾಗಳ ಒಟ್ಟು ವಿದೇಶಿ ಕಲೆಕ್ಷನ್‌ನಲ್ಲಿ ಶೇಕಡಾ 30ರಿಂದ 40ರಷ್ಟು ಪಾಲು ಅಮೆರಿಕದಿಂದಲೇ ಬರುತ್ತದೆ. ಹೀಗಾಗಿ ಗ್ಲೋಬಲ್ ಕಲೆಕ್ಷನ್ ಲೆಕ್ಕಾಚಾರ ಹಾಕಿದ್ರೆ ಅಮೆರಿಕದ ಕಲೆಕ್ಷನ್ ಗಣನೀಯ ಪಾತ್ರ ವಹಿಸುತ್ತೆ. ಹೊಸ ಸುಂಕ ನೀತಿಯಿಂದ ಕೇವಲ ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಮೇಲೆ ಭಾರೀ ದೊಡ್ಡ ಹೊಡೆತ ಬಿದ್ದಂತಾಗಿದೆ. ಇನ್ನೊಂದ್ಕಡೆ ಕರ್ನಾಟಕದಲ್ಲಿ ಕಾಂತಾರ ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಸೆಪ್ಟೆಂಬರ್ 26ರಿಂದ ಕಾಂತಾರ ಸಿನಿಮಾದ ಆನ್‌ಲೈನ್ ಟಿಕೆಂಟ್ ಬುಕಿಂಗ್ ಶುರುವಾಗಿದ್ದು, ಈಗಾಗಲೇ ಒಂದೂವರೆ ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ದೇಶದಾದ್ಯಂತ ಸೋಲ್ಡ್‌ಔಟ್ ಆಗಿವೆ. ಪ್ರಿಬುಕಿಂಗ್‌ನಿಂದಲೇ ಚಿತ್ರತಂಡ 9 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗ್ತಿದೆ.
Read Also : ಸಾವಿರ ಗಡಿ ದಾಟಿದ ಕಾಂತಾರ ಟಿಕೆಟ್ ದರ..! : ಸಾವಿರ ಕೋಟಿ ಕಲೆಕ್ಷನ್ ಮಾಡೋದು ಫಿಕ್ಸ್..?