ಕಿಚ್ಚ ಸುದೀಪ್ ಅವರಿಗೆ ಇಂದು 52ನೇ ಹುಟ್ಟುಹಬ್ಬದ ಸಂಭ್ರಮ. ಈ ದಿನ ಊರಿನಲ್ಲಿ ಇರದ ಕಾರಣ ಸುದೀಪ್ ರಾತ್ರಿಯೇ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಮಾರ್ಕ್ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಿದೆ. ಜೊತೆಗೆ ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ಥಿಯೇಟರ್‌ಗೆ ಬರೋದಾಗಿ ಅಭಿಮಾನಿಗಳಿಗೆ ಕಿಚ್ಚನಿಂದ ಗುಡ್‌ನ್ಯೂಸ್ ಸಿಕ್ಕಿದೆ. ಇದೀಗ ಬಿಲ್ಲ ರಂಗ ಬಾಷಾ ಸಿನಿಮಾದ ಬಿಗ್ ಅಪ್‌ಡೇಟ್‌ವೊಂದು ಸುದೀಪ್ ಭಕ್ತಗಣಕ್ಕೆ ಸಿಕ್ಕಿದೆ.

ವಿಕ್ರಾಂತ್ ರೋಣ ಚಿತ್ರದ ಸಕ್ಸಸ್‌ನ ನಂತರ ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಬಿಲ್ಲ ರಂಗ ಬಾಷಾ . ಈ ಸಿನಿಮಾದ ಖಡಕ್ ಪೋಸ್ಟರ್ ಬರ್ತ್ಡೇ ಸ್ಪೆಷಲ್ ರಿಲೀಸ್ ಮಾಡಿದೆ ಚಿತ್ರತಂಡ. ಕಿಚ್ಚನ ಬೆಂಕಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರುವ ಬಿಲ್ಲ ರಂಗ ಬಾಷಾ ಹಾಗೂ ಮಾರ್ಕ್ ಚಿತ್ರದ ಚಿತ್ರೀಕರಣ ನಡೆಯುತ್ತಿವೆ.

ತಮ್ಮ ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡದೇ ಸುದೀಪ್ ಅಭಿಮಾನಿಗಳೊಟ್ಟಿಗೆ ಬರ್ತ್ಡೇ ಅದ್ಧೂರಿಯಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಖುಷಿಯಿಂದ ಕುಣಿದಾಡುವಂತಹ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್ ಕೊಟ್ಟಿದ್ದಾರೆ. ಸದ್ಯ ಕಿಚ್ಚನ ಅಭಿಮಾನಗಳ ಚಿತ್ತ ಡಿಸೆಂಬರ್‌ನತ್ತ ನೆಟ್ಟಿದೆ. ಮಾರ್ಕ್ ಬೆಳ್ಳಿಪರದೆ ಮೇಲೆ ನೋಡಿ ಸಂಭ್ರಮಿಸೋಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಸುದೀಪ್ ಫ್ಯಾನ್ಸ್.

Share.
Leave A Reply