ಬೆಂಗಳೂರು, ಡಿ.16 : ಅಬುಧಾಬಿಯಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ ಡ್ಯಾಡ್ಸ್ ಆರ್ಮಿ ಎಂದು ಟೀಕೆಗೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಜೊಡೆತ್ತುಗಳಿಗೆ ಗಾಳ ಹಾಕಿದೆ. ಹೌದು, ಸಿಎಸ್‌ಕೆ ಈ ಬಾರಿ ಯಂಗ್ ಪ್ಲೇಯರ್ಸ್ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಮೇಲೆ ಬರೋಬ್ಬರಿ 28.40 ಕೋಟಿ ರೂ. ಇನ್ವೇಸ್ಟ್ ಮಾಡಿ ಕ್ರಿಕೇಟ್ ಪ್ರೇಮಿಗಳನ್ನು ಬೆರಗುಗೊಳಿಸಿದೆ. 30 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಆಕ್ಷನ್‌ಗೆ ಬಂದಿದ್ದ ಪ್ರಶಾಂತ್ ವೀರ್ ಅವರನ್ನು ಖರೀದಿಸಲು ಲಕ್ನೋ, ಮುಂಬೈ, ಹೈದರಾಬಾದ್ ಫ್ರಾಂಚೈಸಿಗಳು ಬಾರಿ ಪೈಪೋಟಿ ನಡೆಸಿದವು. ಆದರೆ, 5 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಜೋಡೆತ್ತುಗಳನ್ನು ಖರೀದಿಸುವಲ್ಲಿ ಸಕ್ಸಸ್ ಆಗಿದೆ.
ಉತ್ತರ ಪ್ರದೇಶ ಪರ ಫಸ್ಟ್ ಗ್ರೇಡ್ ಕ್ರಿಕೆಟ್ ಆಡುವ 20 ವರ್ಷದ ತರುಣ ಪ್ರಶಾಂತ್ ವೀರ್ ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲೂ ಕಮಾಲ್ ಮಾಡುವ ಸಾಮರ್ಥ್ಯ ಹೊಂದಿರುವ ಅವರನ್ನು ಭರ್ಜರಿ 14.20 ಕೋಟಿ ರೂಪಾಯಿಗೆ ಖರೀದಿಸಿ ರವೀಂದ್ರ ಜಡೇಜ ಜಾಗದಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಪ್ರಶಾಂತ್ ವೀರ್ ಜೊತೆಗೆ 19 ವರ್ಷದ ಕಾರ್ತಿಕ್ ಶರ್ಮಾ ಅವರನ್ನು ಕೂಡ 14.20 ಕೋಟಿ ರೂಪಾಯಿ ನೀಡಿ ಸಿಎಸ್‌ಕೆ ಖರೀದಿಸಿದೆ. ರಾಜಸ್ಥಾನದ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿರುವ, ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ. ಕಾರ್ತಿಕ್ ಶರ್ಮಾ ಫಿನಿಶರ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇಬ್ಬರು ಯುವ ಆಟಗಾರರು ಕೂಡ 14.20 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತ ಪಡೆದ ಅನ್‌ಕ್ಯಾಪಡ್ ಆಟಗಾರರು ಎಂಬ ಸಾಧನೆ ಮಾಡಿದ್ದಾರೆ.
