ಬ್ರಹ್ಮಗಂಟು (Brahmagantu) ಸೀರಿಯಲ್‌ ನಟಿ ಶೋಭಿತಾ ಶಿವಣ್ಣ (Shobitha Shivanna) ತಮ್ಮ ಗಂಡನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ಶೋಭಿತಾ ಶಿವಣ್ಣ ಸಾವಿನ ನಂತರ ಒಂದೊಂದೇ ರಹಸ್ಯಗಳು ಹೊರಬರುತ್ತಿವೆ.. ಮತ್ತೆ ನಟನೆಗೆ ಮರಳಬೇಕು.. ನಟಿಸಿ ಸಾಧಿಸಬೇಕು ಅಂತಾ ಹಾತೊರೆಯುತ್ತಿದ್ರು.. ಆದ್ರೆ, ಇದ್ದಕ್ಕಿದ್ದಂತೆ ನಟಿಗೆ ಏನಾಯ್ತು..? ಬ್ರಹ್ಮಗಂಟು ಸೀರಿಯಲ್‌ನಲ್ಲಿ ವಿಲನ್‌ ಆಗಿದ್ದ ಶೋಭಿತಾಗೆ ವಿಲನ್‌ ಆಯ್ತಾ ಅದೊಂದು ಸಮಸ್ಯೆ… ಹಾಗಾದ್ರೆ, ಆ ಸಮಸ್ಯೆ ಏನು.?

Actress Shobitha Passed Away

2023ರ ಮೇ 22ರಂದು ಶೋಭಿತಾ ಶಿವಣ್ಣ ಹೈದರಾಬಾದ್‌ನ (Hyderabad) ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಸುಧೀರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು. ಶೋಭಿತಾ ಅರೇಂಜ್‌ ಮ್ಯಾರೇಜ್‌ ಆಗಿದ್ದು, ಅಕ್ಕನ ಗಂಡನ ಸಂಬಂಧಿಕರನ್ನೇ ಶೋಭಿತಾ ಶಿವಣ್ಣ ಮದುವೆಯಾಗಿದ್ದರು.. ಮದುವೆ ಆದ ಮೇಲೆ ಹೈದಾರಾಬಾದ್‌ನಲ್ಲೇ ಗಂಡನ ಜೊತೆಯಲ್ಲಿ ಸೆಟಲ್‌ ಆಗಿದ್ರು.. ಕಿರುತೆರೆ, ಬೆಳ್ಳಿತೆರೆಯಿಂದಲೂ ದೂರವಾಗಿದ್ದರು. ಆದರೆ, ಗಂಡ ಮನೆಯಲ್ಲಿದ್ದಾಗಲೇ ಶೋಭಿತಾ ನೇಣಿಗೆ ಕೊರಳೊಡಿದ್ದಾರೆ.. ಹೀಗಾಗಿ, ಸಾವಿನ ಹಿಂದೆ ಹತ್ತು ಹಲವು ಅನುಮಾನಗಳು ಸುಳಿದಾಡುತ್ತಿವೆ..

Also Read: Cow: ಹಸುಗಳ ಕೆಚ್ಚಲು ಕತ್ತರಿಸಿದಕಿರಾತಕ ಅಂದರ್

ಶೋಭಿತಾ ಶಿವಣ್ಣಗೆ ಕಾಡಿದ್ದ ಆ ಕಾಯಿಲೆ ಯಾವುದು..?

ಹೈದರಾಬಾದ್‌ನಲ್ಲಿ ನೆಲೆಸಿದ್ದ ಶೋಭಿತಾ ಶಿವಣ್ಣ ಕುಟುಂಬ, ಬೆಂಗಳೂರಿಗೆ ಬರಲು ಪ್ಲ್ಯಾನ್‌ ಮಾಡಿದ್ದರಂತೆ. ಇಲ್ಲಿಗೆ ಬಂದ್ಮೇಲೆ ಶೋಭಿತಾ ಮತ್ತೆ ನಟಿಸಲು ಮನಸು ಮಾಡಿದ್ರಂತೆ. ಆದ್ರೆ, ಇದು ಗಂಡ ಸುಧೀರ್‌ಗೆ ಇಷ್ಟ ಇರಲಿಲ್ವಂತೆ.. ಇದೇ ವಿಚಾರವಾಗಿ ಶೋಭಿತಾಗೆ ಅದೊಂದು ಸಮಸ್ಯೆ ಇನ್ನಿಲ್ಲದಂತೆ ಕಾಡಿತ್ತು ಎನ್ನಲಾಗುತ್ತಿದೆ. ಶೋಭಿತಾ ಶಿವಣ್ಣ ಮೂರು ಕನಸು ಕಂಡಿದ್ರಂತೆ.. ತಾಯಿಯನ್ನು ಚೆನ್ನಾಗಿ ನೋಡ್ಕೊಳ್ಳಬೇಕು.. ಬೆಂಗಳೂರಿಗೆ ಬಂದು ನೆಲೆಸಬೇಕು.. ಮತ್ತೆ ನಟಿಸಬೇಕು ಎಂಬ ಕನಸುಗಳನ್ನು ಈಡೇರಿಸಿಕೊಳ್ಳಲು ಹಾತೊರೆಯುತ್ತಿದ್ರಂತೆ. ಆದ್ರೆ, ನಟನೆ ಮಾಡೋದು ಗಂಡ ಸುಧೀರ್‌ಗೆ ಇಷ್ಟ ಇರಲಿಲ್ಲ ಅಂತಾ ಹೇಳಲಾಗ್ತಿದೆ… ಇದೇ ಕಾರಣದಿಂದಾಗಿ ಶೋಭಿತಾ ಮಾನಸಿಕವಾಗಿ ನೊಂದಿದ್ದರು ಅಂತಲೂ ಚರ್ಚೆಯಾಗುತ್ತಿದೆ. ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಕೊರಗಿ ಕೊರಗಿ ಕೊನೆಗೆ ನೇಣಿಗೆ ಶರಣಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ..

ಶೋಭಿತಾ ಡೆತ್‌ನೋಟ್‌ನಲ್ಲಿದೆ ಶಾಕಿಂಗ್‌ ರಹಸ್ಯ..!

Actress Shobitha Passed Away

ಇನ್ನು ಶೋಭಿತಾ ಶಿವಣ್ಣ ರೂಂನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅದ್ರಲ್ಲಿ ʼಇಫ್‌ ಯು ವಾಂಟ್‌ ಟು ಕಮಿಟ್‌ ಸೂಸೈಡ್‌, ಯು ಕ್ಯಾನ್‌ ಡು ಇಟ್‌” ಅಂತಾ ಉಲ್ಲೇಖಿಸಲಾಗಿದೆ.. ಇದರರ್ಥ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು ಅಂತಾ.. ಅಸಲಿಗೆ ಇದನ್ನೆಲ್ಲಾ ಬರೆದು ಶೋಭಿತಾ ಆತ್ಮಹತ್ಯೆಗೆ ಶರಣಾದ್ರಾ? ಅನ್ನೋ ಪ್ರಶ್ನೆಯೂ ಎದ್ದಿದೆ. ಗಂಡ ಹೆಂಡ್ತಿ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ ಅಂತಾ ಹೇಳಲಾಗುತ್ತಿದೆ.. ಆದ್ರೂ ಶೋಭಿತಾ, ತಮ್ಮ ಗಂಡ ಮನೆಯಲ್ಲಿದ್ದಾಗಲೇ ಸೂಸೈಡ್‌ ಮಾಡ್ಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಖಿನ್ನತೆ ಅಂತಲೇ ಹೇಳಲಾಗ್ತಿದೆ..

Share.
Leave A Reply