DK Shivakumar


ಬೆಂಗಳೂರು: ಮಹಿಳೆಯರ (Women’s) ಒಳ ಉಡುಪು ಕದ್ದು ವಿಕೃತ ಮೆರೆಯುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಬ್ಬಗೋಡೆಯ ವಿದ್ಯಾನಗರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ (Kerala) ಮೂಲದ ಅಮಲ್ (23) ಬಂಧಿತ ಆರೋಪಿ ಎನ್ನಲಾಗಿದೆ. ಬಂಧಿತ ಆರೋಪಿಯು ಮಹಿಳೆಯರ ಒಳ ಉಡುಪುಗಳನ್ನು ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ.

ಮಹಡಿ, ಮನೆಯಾಚೆ ಒಣಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದ್ದು ಅವುಗಳನ್ನು ತಾನೂ ಧರಿಸುತ್ತಿದ್ದ. ಆನಂತರ ಅವುಗಳನ್ನು ಹಾಕಿಕೊಂಡು ಫೋಟೋ ತೆಗೆದುಕೊಂಡು ಆರೋಪಿ ವಿಕೃತಿ ಮೆರೆಯುತ್ತಿದ್ದ ಎನ್ನಲಾಗಿದೆ.ಆರೋಪಿಯು ಮನೆಯ ಹೊರಗೆ ಹಾಗೂ ಮಹಡಿಯ ಮೇಲೆ ಒಳ ಉಡುಪುಗಳನ್ನು ಹಾಕಿದ್ದನ್ನು ದೂರದಿಂದಲೇ ಪರಿಶೀಲನೆ ಮಾಡಿ ಆನಂತರ ಯಾರೂ ಇಲ್ಲದ ಸಂದರ್ಭದಲ್ಲಿ ನುಗ್ಗಿ ಕದಿಯುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.

ಕದ್ದ ಒಳ ಉಡುಪುಗಳನ್ನು ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಮೊಬೈಲ್ನಲ್ಲಿ ಪತ್ತೆಯಾಗಿವೆ. ಅಲ್ಲದೇ, ಆರೋಪಿ ತಾನಿದ್ದ ಮನೆಯಲ್ಲೂ ಮಹಿಳೆಯರ ಒಳ ಉಡುಪು ಸಂಗ್ರಹಿಸಿಟ್ಟುಕೊಂಡಿರುವುದು ಕಂಡು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share.
Leave A Reply

DK Shivakumar