ವಿಜಯಪುರ: ದೂರು ನೀಡಲು ಬಂದವಳನ್ನೇ ಪೊಲೀಸ್ ಪಟಾಯಿಸಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾಹಿತ ಮಹಿಳೆಯ ಸಂಸಾರ ಹಾಳು ಮಾಡಿರುವ ಆರೋಪ ಕೇಳಿ ಬಂದಿದೆ.

ಭೀಮಾಶಂಕರ ಹೋಳ್ಕರ ಎಂಬಾತನ ಪತ್ನಿಯನ್ನು ಪಟಾಯಿಸಿ ಅವರ ಸಂಸಾರದಲ್ಲಿ ದೊಡ್ಡ ಬಿರುಗಾಳಿ ಬೀಸುವಂತೆ ಮಾಡಿದ್ದಾನೆ. 10 ವರ್ಷಗಳ ಹಿಂದೆ ಭೀಮಾಶಂಕರ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಅನುರಾಧ ಎಂಬುವವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ತಂದೆಯನ್ನು ಕಳೆದುಕೊಂಡಿರುವ ಭೀಮಾಶಂಕರ, ತಾಯಿ, ಪತ್ನಿ ಮತ್ತು ಮಕ್ಕಳ ಜೊತೆಗೆ ವಾಸವಿದ್ದರು. ಐದು ವರ್ಷಗಳ ನಂತರ ಗಂಡ-ಹೆಂಡತಿ ಮಧ್ಯೆ ಜಗಳ ಹಿನ್ನೆಲೆ ಅನುರಾಧಾ ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ವೇಳೆ ವಿಚಾರಣೆ ನೆಪದಲ್ಲಿ ಆಲಮೇಲ ಠಾಣೆಯ ಎಎಸ್ಐ ಆಗಿದ್ದ ಮನೋಹರ ಕಂಚಗಾರ ಅನುರಾಧ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ದೂರಿನ ವಿಷಯವನ್ನೇ ಮುಂದಿಟ್ಟುಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆ ಸ್ನೇಹ ಅನೈತಿಕ ಸಂಬಂಧವಾಗಿ ಬದಲಾಗಿದೆ. 2023ರಲ್ಲಿ ಭೀಮಾಶಂಕರ ಪತ್ನಿ ಮಕ್ಕಳ ಸಮೇತ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದರಂತೆ. ಜೊತೆಗೆ ಪಿತ್ರಾರ್ಜಿ ಆಸ್ತಿ ಮಾರಾಟ ಮಾಡಿದ ಹಣವದಲ್ಲಿ ಬೆಂಗಳೂರಿನಲ್ಲಿ ಒಂದು ಮನೆಯನ್ನು ತನ್ನ ಹಾಗೂ ಪತ್ನಿ ಅನುರಾಧ ಹೆಸರಿನಲ್ಲಿ ಖರೀದಿಸಿದ್ದ. ಇತ್ತೀಚೆಗೆ ಪತ್ನಿಯ ಆಟ ಗೊತ್ತಾಗಿದೆ.

ಯಾವಾಗ ಪತ್ನಿ ಅನುರಾಧ ಹಾಗೂ ಪೊಲೀಸ್ ಅಧಿಕಾರಿಯ ಅನೈತಿಕ ಸಂಬಂಧ ಭೀಮಾಶಂಕರಗೆ ಗೊತ್ತಾಯಿತೋ ಆಗ ಇಬ್ಬರು ಮಕ್ಕಳನ್ನು ಆಕೆಯ ಬಳಿಯೇ ಬಿಟ್ಟು ತನ್ನ ಊರಿಗೆ ಹೋಗಿದ್ದಾನೆ. ಅಲದೇ, ಪತಿ ಬಿಟ್ಟ ನಂತರ ತನ್ನ ಮಕ್ಕಳಿಗೆ ಪೊಲೀಸ್ ನನ್ನೇ ಅಪ್ಪಾ ಅಂತಾ ಕರೆಯುವಂತೆ ಹೇಳಿದ್ದಾಳೆ. ಅವರು ಒಪ್ಪದಿದ್ದಾಗ ಹಿಂಸೆ ನೀಡಿದ್ದಾಳೆಂದು ತಿಳಿದು ಬಂದಿದೆ. ಆಲಮೇಲದಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗೆ ಪ್ರಮೋಷನ್ ಆಗಿದ್ದು ಪಿಎಸ್ಐ ಆಗಿ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡುತ್ತಿದ್ದಾರೆ.

Share.
Leave A Reply