ಚಿತ್ರದುರ್ಗ: ಅಕ್ರಮ ಸಂಬಂಧಕ್ಕೆ ಇಲ್ಲೊಬ್ಬಳು ಪಾಪಿ ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪಾಪಿ ತಾಯಿ ಅಕ್ರಮ ಸಂಬಂಧಕ್ಕೆ (Illicit Relationship) ಅಡ್ಡಿಯಾಯಿತೆಂದು ತನ್ನ ಎರಡು ವರ್ಷದ ಮಗುವನ್ನೇ (Child) ಮಾರಾಟ ಮಾಡಿದ್ದಾಳೆ. ಈ ಘಟನೆ ಜಿಲ್ಲೆಯ (Chitradurga) ಹಿರಿಯೂರು (Hiriyur) ದಲ್ಲಿ ನಡೆದಿದೆ. ಹುಳಿಯಾರು ರಸ್ತೆ ನಿವಾಸಿ ಐಶ್ವರ್ಯ ಈ ಕೃತ್ಯ ಎಸಗಿರುವ ಪಾಪಿ.
ಐಶ್ವರ್ಯಾಳ ಕೃತ್ಯ ಕಂಡು ಸ್ಥಳೀಯರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು. ಹೀಗಾಗಿ ಚಿತ್ರದುರ್ಗ ಜಿಲ್ಲಾ ಬಾಲಭವನ ಅಧಿಕಾರಿ ಮಂಜುನಾಥ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬಯಲಾಗಿದೆ. ಈ ಕುರಿತು ಪಾಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಹೂವಿನಹೊಳೆ ಗ್ರಾಮದ ಚಂದ್ರಪ್ಪ ಜೊತೆ ಐಶ್ವರ್ಯ ಅಕ್ರಮ ಸಂಬಂಧ ಹೊಂದಿದ್ದಳು. ತಮ್ಮ ಆಟಕ್ಕಾಗಿ ಪಾಪಿಗಳು ಸೇರಿಕೊಂಡು ಕೊಪ್ಪಳ ಮೂಲದವರಿಗೆ ಮಗು ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಐಶ್ವರ್ಯಾಳನ್ನು ಬಂಧಿಸಿದ್ದಾರೆ. ಪ್ರಿಯಕರ ಚಂದ್ರಪ್ಪ ತಲೆ ಮರೆಸಿಕೊಂಡಿದ್ದು, ಬಲೆ ಬೀಸಿದ್ದಾರೆ. ಇನ್ನೂ ಮಗು ಖರೀದಿಸಿದ್ದವರಿಗೂ ಪೊಲೀಸರು ಬಲೆ ಬೀಸಿದ್ದಾರೆ.
