ಚಿಕ್ಕಬಳ್ಳಾಪುರ: ಪತ್ನಿ ಇದ್ದರೂ ಬೇರೆಯೊಬ್ಬಳ ಸಂಘ ಮಾಡಿ ಈಗ ವ್ಯಕ್ತಿ ನೇಣುಹಾಕಿಕೊಂಡು (Suicide) ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ. ಬಾಲಾಜಿ ಸಿಂಗ್ ಗೆ 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ. ಕಾರುಗಳನ್ನು ಬಾಡಿಗೆಗೆ ಬಿಟ್ಟು ಅದರಿಂದ ಬರುವ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ. ಆದರೆ, ಇತ್ತೀಚೆಗೆ ಪರಸ್ತ್ರಿ ಸಂಘ ಮಾಡಿದ್ದ.

ಬಾಲಾಜಿಗೆ ಈಗಾಗಲೇ ಮದುವೆಯಾಗಿ ಮಗು ಇದ್ದರೂ ಶಿಡ್ಲಘಟ್ಟ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ಬಾಲಾಜಿ ಸಿಂಗ್ ಪತ್ನಿಗೆ ಗೊತ್ತಾಗಿ ಗಲಾಟೆಗಳು ಆಗಿವೆ. ಇದರಿಂದ ಬಾಲಾಜಿ ಮಹಿಳೆಯಿಂದ ದೂರವಾಗಿ ಪತ್ನಿ ಮಕ್ಕಳ ಜತೆ ಇರಲು ನಿರ್ಧರಿಸಿದ್ದ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮಾತ್ರ ಆತನನ್ನು ಬಿಟ್ಟಿಲ್ಲ. ಹನಿಟ್ರ್ಯಾಪ್ ಮಾಡಿ ಆತನನ್ನು ಹೆದರಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಪದೇ ಪದೇ ಫೋನ್ ಮಾಡಿ ಕಿರುಕುಳ, ಬ್ಲ್ಯಾಕ್ ಮೇಲ್ ಮಾಡುವುದನ್ನು ಶುರುಮಾಡಿದ್ದಳು. ಇದರಿಂದ ಬೇಸತ್ತು ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply