ಆನೇಕಲ್: ಆನೇಕಲ್ (Anekal) ಬಳಿ ಕಂಟೇನರ್ ನಿಂದಾಗಿ ಸರಣಿ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.

ಭೀಕರ ಸರಣಿ ಅಪಘಾತ (Serial Accident)ದಿಂದಾಗಿ 10ಕ್ಕೂ ಅಧಿಕ ವಾಹನಗಳು ಹಾನಿಯಾಗಿ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಇಬ್ಬರು ಸಾವನ್ನಪ್ಪಿರುವ ಶಂಕೆ ಇದೆ. ಪೊಲೀಸರಿಂದ (Surya City Police) 14 ಕಿಮೀ ತಪ್ಪಿಸಿಕೊಂಡು ಹೋಗಿದ್ದ ಲಾರಿ ಚಾಲಕನನ್ನ ಸಾರ್ವನಿಕರೇ ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೆಸ್ತಮಾನಹಳ್ಳಿಯಿಂದ ಚಂದಾಪುರದ ಕಡೆಗೆ ಹೊರಟಿದ್ದ ಚಾಲಕ ರಸ್ತೆ ಅಕ್ಕಪಕ್ಕ ಸಿಕ್ಕಸಿಕ್ಕ ವಾಹನಗಳನ್ನೆಲ್ಲ ಗುದ್ದಿಕೊಂಡು ಹೋಗಿದ್ದಾನೆ.

ಪೊಲೀಸರು ವಾಹನ ಚೇಸ್ ಮಾಡಿದರೂ ಸಿಕ್ಕಿಲ್ಲ. ಕೊನೆಗೆ ಹೊಸೂರು ಹೆದ್ದಾರಿಯ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಿ ಲಾರಿ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸುತ್ತಿದ್ದಂತೆ ಚಾಲಕನನ್ನ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂರ್ಯ ಸಿಟಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Share.
Leave A Reply