ಮದ್ದೂರು ಗಣೇಶ ವಿಸರ್ಜನಾ ವೇಳೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್​ ಪ್ರತಿಭಟನೆ ನಡೆಯುತ್ತಿದೆ. ನಿಷೇಧಾಜ್ಞೆ ಜಾರಿ ನಡುವೆಯೂ ನೂರಾರು ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಸದ್ಯ ಪೊಲೀಸರು ಫುಲ್ ಅಲರ್ಟ್​ ಆಗಿದ್ದು, ಸ್ಥಳದಲ್ಲಿ ನಿಗಾವಹಿಸಿದ್ದಾರೆ. ಸದ್ಯ ಈ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಈಗಾಗಲೇ ಆಗಿದೆ. ಕೆಲವು ಕಡೆ ಸಣ್ಣಪುಟ್ಟ ಘಟನೆ ಆಗಿವೆ. ಒಂದು ಕಡೆ ಚಿಕ್ಕಮಕ್ಕಳು ಮೆರವಣಿಗೆ ವೇಳೆ ಮೇಲಿಂದ ಉಗಿದಿದ್ದಾರೆ. ಸದ್ಯ ಎಲ್ಲವೂ ನಿಯಂತ್ರಣದಲ್ಲಿದೆ. ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಪದೇ ಪದೇ ಈ ಥರ ಘಟನೆಗಳು ಸಂಭವಿಸುತ್ತಿವೆ. ಅಂದರೆ ಜನರು ಕೂಡ ಸ್ಪಂದಿಸಬೇಕು ಎಂದು ಹೇಳಿದ್ದಾರೆ.

ಈ ಸಂಬಂಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಆದರೂ, ಒಂದೆರಡು ಕಡೆ ಸಣ್ಣಪುಟ್ಟ ಘಟನೆಗಳು ಆಗಿದ್ದು ಕ್ರಮ ತಗೊಂಡಿದ್ದೇವೆ. ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿರುತ್ತಾರೆ. ಆರೋಪ ಮಾಡುವುದೇ ಅವರ ಕೆಲಸವಾಗಿದೆ ಎಂದು ಡಾ.ಜಿ ಪರಮೇಶ್ವರ್ ಅವರು ಕಿಡಿಕಾರಿದ್ದಾರೆ.

Read Also : ಗಣಪತಿ ಹಬ್ಬ ಮಾಡೋಕೆ, ನೂರಾರು ಕಂಡಿಷನ್ಸ್‌ ಯಾಕೆ? ಹಿಂದೂಗಳೇ ಟಾರ್ಗೆಟ್‌ : ಆರ್‌ ಅಶೋಕ್‌ ಕಿಡಿ

Share.
Leave A Reply