Advertisement

ಬೆಂಗಳೂರು, ಫೆ.01: ಸತತ ಒಂಬತ್ತು ಬಾರಿ ಬಜೆಟ್ ಮಂಡನೆ ಮಾಡಿದ ಮೊಟ್ಟಮೊದಲ ಭಾರತೀಯ ವ್ಯಕ್ತಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌. 9 ಬಜೆಟ್..‌ 9 ಬಣ್ಣದ ಸೀರೆಗಳು.. ಪ್ರತೀ ಬಾರಿಯ ಬಜೆಟ್‌ನಲ್ಲೂ ಒಂದೊಂದು ವಿಶೇಷ ಸೀರೆಯ ಮೂಲಕ ನಿರ್ಮಲಾ ಸೀತಾರಾಮನ್‌ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಸೀರೆಗಳ ವೈಶಿಷ್ಟ್ಯತೆ ಏನು ಅನ್ನೋದ್ರ ಡೀಟೇಲ್ಸ್‌ ಇಲ್ಲಿದೆ. ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಕಂದು ಬಣ್ಣದ ಅಂಚು, ಗೋಲ್ಡನ್‌ ಚೆಕ್ಸ್ ಹೊಂದಿರುವ ಕೆನ್ನೇರಳೆ ಬಣ್ಣದ ಕಟ್ಟಮ್‌ ಕಾಂಜೀವರಮ್‌ ಸೀರೆ ಉಟ್ಟಿದ್ದಾರೆ. ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಾರಿ ನಿರ್ಮಲಾ ಸೀತಾರಾಮನ್‌ ಧರಿಸಿರುವ ಕೆನ್ನೇರಳೆ ಬಣ್ಣವು ಶಕ್ತಿ ಮತ್ತು ಆತ್ಮವಿಶ್ವಾಸ ಪ್ರತಿನಿಧಿಸುತ್ತದೆ. ಇದು ಭಾರತದ ಆರ್ಥಿಕತೆಯ ಬಲವಾದ ಬೆಳವಣಿಗೆ ಬಿಂಬಿಸುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ.

2025-26ರ ಯೂನಿಯನ್‌ ಬಜೆಟ್‌ ಅಧಿವೇಶನದಲ್ಲಿ ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್ ಅವರು ಮಧುಬನಿ ಕಲೆಯನ್ನು ರೆಪ್ರೆಸೆಂಟ್‌ ಮಾಡುವಂತಹ ಗೋಲ್ಡನ್‌ ಬಾರ್ಡರ್‌ ಹೊಂದಿದ್ದ ಕೈಮಗ್ಗದ ಆಫ್‌ ವೈಟ್‌ ರೇಶ್ಮೆ ಸೀರೆ ಉಟ್ಟು ಗಮನ ಸೆಳೆದಿದ್ದರು. ಇನ್ನು, 2024-25ರ ಯೂನಿಯನ್‌ ಬಜೆಟ್‌ ಮಂಡನೆ ವೇಳೆ ನೇರಳೆ ಹಾಗೂ ಗೋಲ್ಡನ್‌ ಬಾರ್ಡರ್‌ ಹೊಂದಿದ್ದ ಬಿಳಿ ಬಣ್ಣದ ಮಂಗಳಗಿರಿ ಕಾಟನ್ ಸೀರೆ ಉಟ್ಟಿದ್ದರು. ಹಾಗೆ 2024-25ರ ಮಧ್ಯಂತರ ಬಜೆಟ್‌ನಲ್ಲಿ ಪಶ್ಚಿಮ ಬಂಗಾಳದ ಕಾಂತ ಹೊಲಿಗೆಯಿಂದ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆಯಲ್ಲಿ ಮಿಂಚಿದ್ದರು. 2023-24ರಲ್ಲಿ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಕಪ್ಪು ಬಣ್ಣದ ಟೆಂಪಲ್‌ ಬಾರ್ಡರ್‌ ಹಾಗೂ ಗೋಲ್ಡ್‌ ಜರಿ ಇರುವ ರೆಡ್‌ ಸಿಲ್ಕ್‌ ಸಾರೀ ಉಟ್ಟಿದ್ರು.

2022-23ರ ಬಜೆಟ್‌ನಲ್ಲಿ ಒಡಿಶಾದ ಕೈಮಗ್ಗದಲ್ಲಿ ನೇಯ್ದ ಆಫ್‌ ವೈಟ್‌ ಬಾರ್ಡರ್‌ ಹೊಂದಿದ್ದ ಕಂದು ಬಣ್ಣದ ಬೊಮ್ಕೈ ಸೀರೆಯಲ್ಲಿ ಗಮನ ಸೆಳೆದದ್ರು. 2021-22ರ ಬಜೆಟ್‌ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಪೋಚಂಪಳ್ಳಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದರು. ಕೆಂಪು ಮತ್ತು ಬಿಳಿ ಬಣ್ಣದ ಈ ಸೀರೆ ಇಕ್ಕತ್ ಶೈಲಿಯನ್ನು ಹೊಂದಿತ್ತು. 2020-21ರ ಬಜೆಟ್​ನಲ್ಲಿ ಹಳದಿ ಬಣ್ಣದ ಗೋಲ್ಡನ್‌ ಸ್ಟ್ರಿಪ್ಸ್‌ ಹೊಂದಿದ್ದ ರೇಷ್ಮೆ ಸೀರೆ ಧರಿಸಿ ಮಿಂಚಿದ್ರು. ಇನ್ನು ಅವರ ಮೊಟ್ಟಮೊದಲ ಬಜೆಟ್‌ ಮಂಡನೆ ಅಂದ್ರೆ 2019-20ರ ಬಜೆಟ್ ಮಂಡನೆ ವೇಳೆ ಸ್ಥಿರತೆ ಮತ್ತು ಗಂಭೀರತೆಯ ಸಂಕೇತವಾಗಿರುವ ಗುಲಾಬಿ ಬಣ್ಣದ ಸೀರೆ ಧರಿಸಿದ್ದರು. ಇದು ಗೋಲ್ಡನ್​ ಕಲರ್​ ಬಾರ್ಡರ್​​ ಹೊಂದಿದ್ದ ಆಂಧ್ರಪ್ರದೇಶದ ಮಂಗಳಗಿರಿ ಕಾಟನ್ ಮತ್ತು ರೇಷ್ಮೆ ಮಿಶ್ರಿತ ಸೀರೆಯಾಗಿತ್ತು. ಇದೀಗ ಕೆನ್ನೇರಳೆ ಬಣ್ಣದ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಿ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.

Share.
Leave A Reply