ಗದಗ: ಜಿಲ್ಲೆಯ (Gadag) ಲಕ್ಕುಂಡಿಯಲ್ಲಿ (Lakkundi)ಯಲ್ಲಿ ನಿಧಿ ಸಿಕ್ಕಿದ್ದೇ ಸಿಕ್ಕಿದ್ದು ಅಲ್ಲಿಯ ಜಮೀನುಗಳಿಗೂ ಬಂಗಾರದ ಮೌಲ್ಯ ಬಂದಂತಾಗಿದೆ. ಹೀಗಾಗಿ ಅಲ್ಲಿನ ಭೂಮಿಯೆಲ್ಲ ಈಗ ನಿಧಿಮಯವಾಗುತ್ತಿದೆ. ಅಲ್ಲಿನ ಜನರಿಗೆ ಜಾಕ್ ಪಾಟ್ ಹೊಡೆಯುತ್ತಿದೆ.
ಲಕ್ಕುಂಡಿಯಲ್ಲಿ ಮನೆಗೆ ಪಾಯ ಆಗೆಯುತ್ತಿದ್ದ ವೇಳೆ ನಿಧಿ ಸಿಕ್ಕಿದ್ದು, ದೊಡ್ಡ ಸುದ್ದಿಯಾಗಿತ್ತು. ಆನಂತರ ಅಲ್ಲಿ ಉತ್ಖನನ ಕಾರ್ಯ ಆರಂಭವಾಗಿ, ಹಲವಾರು ಪ್ರಾಚ್ಯ ವಸ್ತುಗಳು ಸಿಕ್ಕಿವೆ. ಈಗ ಉತ್ಖನನ ಕಾರ್ಯ ಅಲ್ಲಿ ಮುಂದುವರೆದಿದೆ. ಇದರ ಮಧ್ಯೆ ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಎಂದು ವರದಿಯಾಗುತ್ತಿದೆ. ಅದು ಗರಿಷ್ಠ ಮಟ್ಟ ಮುಟ್ಟಿದೆ ಎನ್ನಲಾಗುತ್ತಿದೆ.
ಕಳೆದ ಎರಡ್ಮೂರು ವರ್ಷಗಳ ಹಿಂದೆ ಲಕ್ಕುಂಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿರುವ ಭೂಮಿಯ ಬೆಲೆ ಎಕೆರೆಗೆ 50 ಲಕ್ಷ ರೂ. ಗಳಾಗಿತ್ತು. ಈಗ ಅದರ ಬೆಲೆ ದುಪ್ಪಟ್ಟಾಗಿದೆ ಎಂದು ವರದಿ ಹೇಳುತ್ತಿವೆ. ಇದು ಸಾರ್ವಕಾಲಿಕ ಗರಿಷ್ಠ ದರ ಎನ್ನಲಾಗುತ್ತಿದೆ.
ಈ ಭೂಮಿಯ ಮೇಲೆ ಈಗ ರಿಯಲ್ ಎಸ್ಟೇಟ್ ನವರ ಕಣ್ಣು ಬಿದ್ದಿದೆ. ಲಕ್ಕುಂಡಿ ಆಸುಪಾಸು ಉತ್ಖನನ ಪ್ರಾರಂಭಿಸುವ ಪ್ರವಾಸೋದ್ಯಮ ಇಲಾಖೆಯ ನಿರ್ಧಾರ ಕೂಡ ಆ ಗ್ರಾಮದ ಭವಿಷ್ಯವನ್ನು ಗರಿಷ್ಠತೆಗೆ ಒಯ್ದಿದೆ ಎಂದು ಜನ ನಂಬಿದ್ದಾರೆ.
