Advertisement

ರಾಯಚೂರು: ಸಾರಿಗೆ ಬಸ್ ಹರಿದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಮದರಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಕೆಆರ್ಟಿಸಿ ಬಸ್ (KKRTC Bus) ಹರಿದಿದ್ದರಿಂದಾಗಿ ನಾಲ್ಕು ವರ್ಷದ (Child) ವಿದ್ಯಾಶ್ರೀ (4) ಸಾವನ್ನಪ್ಪಿದ್ದಾಳೆ. ವಿದ್ಯಾಶ್ರೀ ಗಬ್ಬೂರು ಗ್ರಾಮದವಳು ಎನ್ನಲಾಗಿದೆ. ಸಾರಿಗೆ ಬಸ್ ಗೂಗಲ್‌ನಿಂದ ದೇವದುರ್ಗಕ್ಕೆ ತೆರಳುತ್ತಿತ್ತು.

ಮಗು ಅಚಾನಕ್ಕಾಗಿ ಅಡ್ಡ ಬಂದ ಪರಿಣಾಮ ಮಗುವಿನ ಮೇಲೆ ಬಸ್ ಹರಿದಿದೆ. ಬಸ್ಸಿನ ಚಕ್ರದಡಿಗೆ ಸಿಲುಕಿ ಮಗು ಮೃತಪಟ್ಟಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply