Advertisement


ಬೆಂಗಳೂರು: ಇತ್ತೀಚೆಗೆ ಜನರು ಡಿಜಿಟಲೀಕರಣದ ಭಾಗವಾಗಿದ್ದಾರೆ. ಪ್ರತಿಯೊಬ್ಬರು ಕ್ಯಾಶ್ ಗಿಂತ ಪೋನ್ ಪೇನಂತಹ ಆಪ್ ಗಳನ್ನು ನಂಬಿಕೊಂಡಿದ್ದಾರೆ. ಆದರೆ, ಇವುಗಳನ್ನು ಬಳಸುವ ಮುನ್ನ ಸಾಕಷ್ಟು ಎಚ್ಚರಿಕೆಯ ಅವಶ್ಯಕತೆ ಇರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ 6 ರೂ. ಕೊಡಬೇಕಾಗಿತ್ತು. ಆದರೆ ಅದರ ಬದಲು 60 ಸಾವಿರ ರೂ. ಹಾಕಿ ಫಜೀತಿ ಅನುಭವಿಸಿದ್ದಾನೆ.

ಈ ಘಟನೆ ಬಿಎಂಟಿಸಿ ಬಸ್ ನಲ್ಲಿ ನಡೆದಿದ್ದು, ಜ. 14ರಂದು ರಾತ್ರಿ ವೇಳೆ ಬನಶಂಕರಿಯಲ್ಲಿ ನಡೆದಿದೆ. ಆ ವ್ಯಕ್ತಿ ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. 6 ರೂಪಾಯಿ ಬದಲು 60 ಸಾವಿರ ಪೋನ್ ಪೇ ಮಾಡಿದ್ದಾರೆ. ಪ್ರಯಾಣಿಕ 6 ರೂ. ಮಾಡುವ ಬದಲು ತಪ್ಪಿ 60 ಸಾವಿರ ರೂ ಮಾಡಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ. ಬಸ್ ನಿರ್ವಾಹಕ ಖಾತೆ ಪರಿಶೀಲಿಸಿದಾಗ 62,316 ರೂ ಹಾಕಿರುವುದು ಗೊತ್ತಾಗಿದೆ.

ಇದನ್ನು ಕಂಡು ನಿರ್ವಾಹಕರು ಶಾಕ್ ಆಗಿದ್ದಾರೆ. ಆಗ ನಿರ್ವಾಹಕರು, ಹಣವನ್ನು ತಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ. ಮೊದಲು ನಿರ್ವಾಹಕ ಈ ಬಗ್ಗೆ ತನ್ನ ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ ಅವರ ನಂಬರ್ ಪಡೆದುಕೊಂಡಿದ್ದಾರೆ. ಡಿಪೋ ಮ್ಯಾನೇಜರ್ ಫೋನ್ ನಂಬರ್ ಕೂಡ ನೀಡಲಾಗಿದೆ.

ಪರಿಶೀಲನೆ ನಡೆಸಿದ ನಂತರ ಹಣ ಪಡೆಯಬಹುದು. ಹಣ ಪಡೆಯಲು ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಇದುವರೆಗೂ ಪ್ರಯಾಣಿಕರ ಖಾತೆಗೆ ಹಣ ಪಾವತಿಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಡಿಜಿಟಲ್ ಬಳಕೆ ಮಾಡುವ ಜನರು ಎಚ್ಚರಿಕೆ ವಹಿಸಬೇಕೆಂದು ಪ್ರಜ್ಞಾವಂತರು ಮನವಿ ಮಾಡಿದ್ದಾರೆ.

Share.
Leave A Reply