ಸ್ವಿಸ್‌ ಬ್ಯಾಂಕ್‌ಗಳು (Swiss Bank) ಜಗತ್‌ಪ್ರಸಿದ್ಧ ಬ್ಯಾಂಕ್‌ಗಳು.. ಸ್ವಿಟ್ಜರ್‌ಲೆಂಡ್‌ನಲ್ಲಿರೋ (Switzerland) ಈ ಬ್ಯಾಂಕ್‌ಗಳಲ್ಲಿ ಇಡೀ ಜಗತ್ತಿನಾದ್ಯಂತ ವಿಐಪಿಗಳು ತಮ್ಮ ದುಡ್ಡು ಠೇವಣಿ ಇಡ್ತಾರೆ. ಅದೇ ರೀತಿ ಭಾರತೀಯರ ಲಕ್ಷಾಂತರ ಕೋಟಿ ರೂಪಾಯಿ ಈ ಬ್ಯಾಂಕ್‌ನ ಲಾಕರ್‌ ಸೇರಿಕೊಂಡಿದೆ.. ಆದ್ರೀಗ ಸ್ವಿಟ್ಜರ್‌ಲೆಂಡ್‌ನ ಸೆಂಟ್ರಲ್‌ ಬ್ಯಾಂಕ್ ಮಹತ್ವದ ಮಾಹಿತಿ ನೀಡಿದ್ದು, ಭಾರತೀಯ ಹಣ 2024ರಲ್ಲಿ ಮೂರು ಪಟ್ಟು ಹೆಚ್ಚಾಗಿರೋದು ಸಂಚಲನ ಸೃಷ್ಟಿಸಿದೆ.

ಹೌದು.. 2024ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಠೇವಣಿ ಹಣ ಬರೋಬ್ಬರಿ 3‌ ಪಟ್ಟು ಹೆಚ್ಚಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಸ್ವಿಟ್ಜರ್ಲೆಂಡ್ (bank of Switzerland) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಕಿ-ಅಂಶ ಬೆಳಕಿಗೆ ಬಂದಿದೆ. ಸ್ವಿಸ್ ಬ್ಯಾಂಕ್ ನೀಡಿದ ಮಾಹಿತಿ ಪ್ರಕಾರ, 3.5 ಬಿಲಿಯನ್​ ಅಷ್ಟು ಅಂದರೆ ಸುಮಾರು 37,600 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದಾರೆ. ಮುಖ್ಯವಾಗಿ ಭಾರತೀಯ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ದೊಡ್ಡ ಮೊತ್ತದ ಠೇವಣಿ ಇಡಲಾಗಿದೆ. ಅಲ್ಲದೇ ಗ್ರಾಹಕರ ಖಾತೆಗೆ ನೇರವಾಗಿ ಠೇವಣಿ ಇಡುವ ಮೊತ್ತದಲ್ಲೂ ಅಲ್ಪ ಏರಿಕೆ ಆಗಿದೆ.

ಇನ್ನು, ಭಾರತೀಯ ಗ್ರಾಹಕರ ವೈಯಕ್ತಿಕ ಖಾತೆಗಳಲ್ಲಿ ಠೇವಣಿ ಇಟ್ಟ ಮೊತ್ತ ಶೇಕಡಾ 11ರಷ್ಟು ಹೆಚ್ಚಾಗಿದೆ. ಈ ಠೇವಣಿಯ ಒಟ್ಟು ಮೌಲ್ಯ ಸುಮಾರು 3,675 ಕೋಟಿ ರೂಪಾಯಿ ಆಗಿದೆ. 2023ರಲ್ಲಿ ಸ್ವಿಸ್​ ಬ್ಯಾಂಕ್​​ನಲ್ಲಿ ಠೇವಣಿ ಇಡುವ ಸಂಖ್ಯೆ ಶೇಕಡಾ 70 ರಷ್ಟು ಕುಸಿತವಾಗಿತ್ತು

ಇನ್ನು, 2019 ರಿಂದ ಪ್ರತಿ ವರ್ಷ ಭಾರತೀಯ ಖಾತೆದಾರರ ಮಾಹಿತಿಯನ್ನು ಭಾರತ ಸರ್ಕಾರ ಪಡೆಯುತ್ತಿದೆ. ಸ್ವಿಸ್ ಸೆಂಟ್ರಲ್ ಬ್ಯಾಂಕ್‌ (swiss central bank) ನೀಡಿರುವ ವರದಿಯಲ್ಲಿ ಕಪ್ಪು ಹಣದ (black money) ಅಂಕಿ-ಅಂಶ ಅಲ್ಲ. ಕಪ್ಪು ಹಣದ ಬಗ್ಗೆ ತನ್ನ ವರದಿಯಲ್ಲಿ ಸೇರಿಸಿಲ್ಲ. ವ್ಯಕ್ತಿಯ ಹೆಸರಿನಲ್ಲಿ ತೆರೆಯಲಾದ ಖಾತೆಗಳು ಮತ್ತು ಭಾರತೀಯ ಹಣವನ್ನು ಒಳಗೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಅದೇನೆ ಇರಲಿ 2023ಕ್ಕಿಂತ 2024ರಲ್ಲೇ 3 ಪಟ್ಟು ಹಣ ಠೇವಣಿ ಇಟ್ಟಿರೋದು ಗಮನಾರ್ಹ ಸಂಗತಿಯೇ ಸರಿ.

Share.
Leave A Reply