ಭೀಕರ ಭೂಕಂಪಕ್ಕೆ ಟರ್ಕಿ ನಲುಗಿ ಹೋದಾಗ ಮೊದಲು ನೆರವಿನ ಹಸ್ತ ಚಾಚಿದ್ದುBharat .. ಭೂಕಂಪದಿಂದಾಗಿ ಅಲ್ಲಿನ ಜನರು ಊಟ, ನೀರು ಸಿಗದೇ ಇದ್ದಾಗ ಅವರಿಗೆ ಸಹಾಯ ಮಾಡಿದ್ದು ಭಾರತ.. ತಿನ್ನುವ ವಸ್ತುಗಳಿಂದ ಹಿಡಿದು, ಮೆಡಿಕಲ್ ಉಪಕರಣಗಳವರೆಗೂ ಇಂಡಿಯಾ ಸಹಾಯ ಮಾಡಿತ್ತು.. ಆದ್ರೀಗ ಇದೆಲ್ಲವನ್ನೂ ಮರೆತ ಟರ್ಕಿ, ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿದೆ..
Bharat ಸಹಾಯವನ್ನ ಬದಿಬಿಟ್ಟು ಉಗ್ರಪೋಷಿತ ಪಾಕ್ ಬೆನ್ನಿಗೆ ನಿಂತಿದೆ.. ಇದ್ರಿಂದ ಸಿಡಿದೆದ್ದ ಭಾರತ, ಟರ್ಕಿಗೆ ಒಂದಾದ ಮೇಲೊಂದು ಹೊಡೆತ ಕೊಡುತ್ತಿದೆ.. ಒಂದೊಂದಾಗಿ ಬ್ಯಾನ್ ಶಿಕ್ಷೆ ನೀಡುತ್ತಿದೆ. ಟರ್ಕಿ ಜೊತೆಗಿ ವ್ಯವಹಾರವನ್ನೇ ಕಡಿತಗೊಳಿಸಿದೆ.
ಹಾಗಾದ್ರೆ, ಭಾರತ ಹೇರಿರುವ ಬ್ಯಾನ್ನಿಂದಾಗಿ ಟರ್ಕಿಗೆ ಎಷ್ಟೆಲ್ಲಾ ನಷ್ಟ ಅನುಭವಿಸುತ್ತಿದೆ. ಯಾವೆಲ್ಲಾ ಉದ್ಯಮಗಳಿಗೆ ಹೊಡೆತ ಬಿದ್ದಿದೆ ಅನ್ನೋದಾದ್ರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಈಗ ಟರ್ಕಿ ಜೊತೆಗಿನ ವ್ಯವಹಾರಕ್ಕೆ ತಿಲಾಂಜಲಿ ಇಟ್ಟಿದ್ದು, ಇದ್ರಿಂದಾಗಿ ಇಸ್ಲಾಮಿಕ್ ದೇಶಕ್ಕೆ ದೊಡ್ಡ ನಷ್ಟ ಉಂಟಾಗ್ತಿದೆ. ಅದ್ರಲ್ಲಿ ಮೊದಲನೇದಾಗಿ, ಶೇಕಡಾ 70ರಷ್ಟು ಭಾರತದ ಮಾರ್ಬಲ್ಸ್ನ್ನು ಆಮದು ಮಾಡಿಕೊಳ್ತಿದ್ದುದು.. ಟರ್ಕಿ ದೇಶ ಭಾರತದಿಂದ ಶೇಕಡಾ 70ರಷ್ಟು ಮಾರ್ಬಲ್ಸ್ನ್ನು ಆಮದು ಮಾಡಿಕೊಂಡು ಬೇರೆ ಬೇರೆ ದೇಶಗಳಿಗೆ ಸಪ್ಲೈ ಮಾಡುತ್ತಿತ್ತು.. ಅದ್ರ ಅಂದಾಜು ವ್ಯವಹಾರ ವಾರ್ಷಿಕ 2500ದಿಂದ 3 ಸಾವಿರ ಕೋಟಿ ರೂಪಾಯಿ.. ಆದ್ರೀಗ ಭಾರತ ಸರ್ಕಾರ ಟರ್ಕಿ ವ್ಯಾಪಾರದ ಬಾಗಿಲು ಕ್ಲೋಸ್ ಮಾಡಿದ್ದು, ಭಾರಿ ನಷ್ಟ ಅನುಭವಿಸುವಂತಾಗಿದೆ.
ಭಾರತೀಯ ಪ್ರಮುಖ ಮಾರುಕಟ್ಟೆಗಳಲ್ಲಿ ಟರ್ಕಿಯಿಂದ ಬರುತ್ತಿದ್ದ ಸೇಬುಹಣ್ಣುಗಳ ಮಾರಾಟವನ್ನು ನಿಷೇಧ ಮಾಡಲಾಗಿದೆ. ಋತುವಿಗೆ ತಕ್ಕಂತೆ 1 ಸಾವಿರದಿಂದ 1200 ಕೋಟಿ ರೂಪಾಯಿಯಷ್ಟು ಸೇಬು ಹಣ್ಣು ಭಾರತಕ್ಕೆ ಆಮದು ಆಗ್ತಿತ್ತು. ಆದ್ರೀಗ ಭಾರತದ ಮಾರುಕಟ್ಟೆಗಳಲ್ಲಿ ಟರ್ಕಿ ಸೇಬುಹಣ್ಣಿಗೆ ಗುಡ್ಬೈ ಹೇಳಲಾಗಿದ್ದು, ಟರ್ಕಿ ಬದಲಿಗೆ ಇರಾನ್ ಹಾಗೂ ನ್ಯೂಜಿಲೆಂಡ್ ದೇಶದ ಆಪಲ್ಗಳನ್ನು ತರಿಸಿಕೊಳ್ಳಲಾಗ್ತಿದೆ..
ಟರ್ಕಿ ದೇಶಕ್ಕೆ ಮತ್ತೊಂದು ದೊಡ್ಡ ಹೊಡೆತ ಅಂದ್ರೆ ಅದು ಪ್ರವಾಸೋದ್ಯಮ.. 2024ರಲ್ಲಿ ಭಾರತದ 3 ಲಕ್ಷ ಪ್ರವಾಸಿಗರು ಟರ್ಕಿ ದೇಶಕ್ಕೆ ಭೇಟಿ ನೀಡಿದ್ದಾರೆ. ಇದ್ರಿಂದಾಗಿ 3ರಿಂದ 4 ಸಾವಿರ ಕೋಟಿ ರೂಪಾಯಿ ಟರ್ಕಿಗೆ ಲಾಭವಾಗಿತ್ತು.. ಆದ್ರೆ, ಈ ಬಾರಿ ಭಾರತ, ಅಜರ್ಬೈಜಾನ್ ಪ್ರವಾಸವನ್ನು ನಿಷೇಧ ಮಾಡಿರೋದ್ರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದ್ದು, ಅಲ್ಲಿಗೆ ಹೋಗಬೇಕಿದ್ದ ಪ್ರವಾಸಿಗರು ಇದೀಗ ಬೇರೆ ಬೇರೆ ದೇಶಗಳತ್ತ ಮುಖ ಮಾಡಿದ್ದಾರೆ. ಇದ್ರಿಂದಾಗಿ ಅಂದಾಜು 4 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ ಅಂತಾ ಹೇಳಲಾಗ್ತಿದೆ..
Also Read: ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ Bengaluru ಚುನಾವಣೆಗೆ ಸಿದ್ಧತೆ : ಡಿಸಿಎಂ ಡಿ.ಕೆ.ಶಿವಕುಮಾರ್
ಭಾರತ ಹಾಗೂ ಟರ್ಕಿ ಸಹಯೋಗದಲ್ಲಿ 2.3 ಬಿಲಿಯನ್ ಡಾಲರ್ ವೆಚ್ಚದಲ್ಲಿ ಹಡಗು ನಿರ್ಮಿಸುವ ಪ್ರಾಜೆಕ್ಟ್ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.. ಆದ್ರೀಗ ಆ ಒಪ್ಪಂದವನ್ನು ಮೊಳೆ ಹೊಡೆಯಲಾಗಿದ್ದು, ಟರ್ಕಿಗೆ ನಿರೀಕ್ಷೆ ಮಾಡಲಾರದಷ್ಟು ನಷ್ಟ ಉಂಟಾಗಿದೆ… ಅಲ್ಲದೇ, ಇದೇ ವಿಚಾರವಾಗಿ ಕೆಲವು ಗುತ್ತಿಗೆಗಳನ್ನು ರದ್ದುಗೊಳಿಸಲಾಗಿದೆ ಅಂತಾ ಹೇಳಲಾಗ್ತಿದೆ.
ಮತ್ತೊಂದೆಡೆ, ಭಾರತದಿಂದ ಇಂಜಿನಿಯರಿಂಗ್ ಗೂಡ್ಸ್, ಕೆಮಿಕಲ್ಸ್, ಟೆಕ್ಸ್ಟೈಲ್ನ್ನು ಅಪಾರ ಪ್ರಮಾಣದಲ್ಲಿ ರಫ್ತು ಮಾಡಲಾಗ್ತಿತ್ತು.. ಇದರಿಂದಾಗಿ 6.65 ಮಿಲಿಯನ್ ಅಮೆರಿಕನ್ ಡಾಲರ್ನಷ್ಟು ವಸ್ತುಗಳು ಇಂಪೋರ್ಟ್ ಆಗ್ತಿದ್ವು.. ಆದ್ರೆ, ಅದಕ್ಕೆಲ್ಲಾ ಭಾರತ ಬ್ರೇಕ್ ಹಾಕಿದೆ.. ಅದೇ ವ್ಯವಹಾರವನ್ನು ಬೇರೆ ದೇಶಗಳತ್ತ ತಿರುಗಿಸಲು ಇಂಡಿಯಾ ಪ್ಲ್ಯಾನ್ ನಡೆಸಿದೆ..
ಭಾರತದ ಪ್ರಮುಖ 9 ವಿಮಾನ ನಿಲ್ದಾಣಗಳಲ್ಲಿ ಕಾರ್ಗೋ ನಿರ್ವಹಣೆ ಮಾಡಲು ಟರ್ಕಿ ಮೂಲದ ಕಂಪನಿ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಭಾರತ ಸರ್ಕಾರ ಟರ್ಕಿ ಮೂಲದ ಕಂಪನಿಗೆ ಕೊಕ್ ನೀಡಿದೆ. ಸೆಲೆಬಿ ಏವಿಯೇಷನ್ ಕಂಪನಿಗೆ ಹೈಸೆಕ್ಯೂರಿಟಿ ಕೆಲಸ ನಿರ್ವಹಣೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.. ಇದೀಗ ಭಾರತೀಯ ವಿಮಾನಯಾನ ಸಚಿವಾಲಯ ಈ ಕ್ಷಣದಿಂದಲೇ ವಿಮಾನ ನಿಲ್ದಾಣಗಳ ಬಿಟ್ಟು ಹೋಗುವಂತೆ ಆದೇಶ ನೀಡಿದೆ.. ಸೆಲೆಬಿ ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್ನ್ನು ರದ್ದು ಮಾಡಲಾಗಿದೆ..
Also Read: ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ Bengaluru ಚುನಾವಣೆಗೆ ಸಿದ್ಧತೆ : ಡಿಸಿಎಂ ಡಿ.ಕೆ.ಶಿವಕುಮಾರ್
ಇದಿಷ್ಟೇ ಅಲ್ಲ.. ಇನ್ನೂ ಹಲವು ಆಯಾಮಗಳಲ್ಲಿ ಭಾರತ, ಟರ್ಕಿ ದೇಶಕ್ಕೆ ದೊಡ್ಡ ಪೆಟ್ಟು ನೀಡಿದೆ.. ಭಾರತವನ್ನು ಎದುರು ಹಾಕಿಕೊಂಡ ಪರಿಣಾಮವಾಗಿ ಟರ್ಕಿ ಎಂಬ ಇಸ್ಲಾಮಿಕ್ ದೇಶ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.. ಇನ್ನಾದ್ರೂ ಟರ್ಕಿ ಮಿತ್ರ ದ್ರೋಹದ ಕೆಲಸ ಮಾಡೋದನ್ನು ನಿಲ್ಲಿಸುತ್ತಾ ಅನ್ನೋದನ್ನು ಕಾದು ನೋಡ್ಬೇಕು.
