ಭಾರತ ಹಾಗೂ ಪಾಕಿಸ್ತಾನ ನಡುವಿನ ರಣಕಹಳೆ ಇಡೀ ವಿಶ್ವದಲ್ಲಿ ಮೊಳಗಿದೆ. ಕಳೆದ ಎರಡು ದಿನಗಳಿಂದ ಪಾಕಿಸ್ತಾನವನ್ನು ಮಣ್ಣುಮುಕ್ಕಿಸುತ್ತಿರುವ ಭಾರತದ ಪರಾಕ್ರಮವನ್ನ ಕಂಡು ದಿಗ್ಗಜ ರಾಷ್ಟ್ರಗಳೆಲ್ಲಾ ದಿಗ್ಭ್ರಮೆಗೊಂಡಿವೆ. ಭಾರತ ಇಷ್ಟು ಕಾಲ ತನ್ನ ಬತ್ತಳಿಕೆಯಲ್ಲಿಟ್ಟಿದ್ದ ಶಸ್ತ್ರಾಸ್ತ್ರಗಳನ್ನೆಲ್ಲಾ ಹೊರಗಿಟ್ಟು ಪಾಕಿಸ್ತಾನದ ವಿರುದ್ಧ ರೌದ್ರಾವತಾರ ತೋರಿಸುತ್ತಿದೆ. S-400, ಆಕಾಶ್‌ ಮಿಸೈಲ್‌ಗಳಂತ ಅಸ್ತ್ರಗಳಿಗೆ ಪಾಕಿಸ್ತಾನದ ಇಡೀ ರಕ್ಷಣಾ ವ್ಯವಸ್ಥೆಯೇ ಥಂಡಾ ಹೊಡೆದಿದೆ. ಆದ್ರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಕರ್ನಾಟಕದ ಕಾರವಾರದಿಂದ ಕರಾಚಿಗೆ ಹೋದ INS ವಿಕ್ರಾಂತ್‌. ಪಾಪಿ ನೆಲದಲ್ಲಿ ಈ ಯುದ್ಧನೌಕೆ ಮಾಡಿದ ಆರ್ಭಟಕ್ಕೆ ಪಾಕಿಸ್ತಾನದಿಂದ ಮುಕ್ತಿ ಪಡೆದು ಹೊಸದೊಂದು ದೇಶವೇ ಉಗಮವಾಗುವ ಸಾಧ್ಯತೆ ಇದೆ.

ಅದು 1971ರ ಸಮಯ. ಸುಳಿವು ಕೊಡದೇ ಭಾರತದ ಮೇಲೆ ದಾಳಿ ಮಾಡಿದ್ದ ಪಾಕಿಸ್ತಾನದ ಹೆಡೆಮುರಿ ಕಟ್ಟಲು ಭಾರತದ ಮೂರು ಸೇನೆಗಳು ಭಯಾನಕ ಯುದ್ಧ ಮಾಡಿದ್ವು.. ಅದ್ರಲ್ಲಿ INS ವಿಕ್ರಾಂತ್‌ನ ರುದ್ರ ತಾಂಡವಕ್ಕೆ ಇಡೀ ಶತ್ರು ಪಡೆ ನೆಲಕಚ್ಚಿತ್ತು. ಪಾಕಿಸ್ತಾನದ ನೌಕಾಪಡೆಗಳನ್ನ ಧ್ವಂಸ ಮಾಡಿತ್ತು. ಇದೀಗ ಮತ್ತೆ ವಿಕ್ರಾಂತ್‌ ಪಾಪಿ ನೆಲದಲ್ಲಿ ಅಬ್ಬರಿಸಿದ್ದಾನೆ. ಅಪರೇಷನ್‌ ಸಿಂದೂರ್‌ ಉಗ್ರರ ಸಲುವಾಗಿ ಮಾತ್ರ ನಡೆಸಿದ್ರು.. ಪಾಕಿಸ್ತಾನ ಕಾಲು ಕೆರೆದುಕೊಂಡು ಯುದ್ಧಕ್ಕೆ ನಿಂತ ಪರಿಣಾಮ ಈ ಯುದ್ಧನೌಕೆ ಕರಾಚಿಯ ಬಂದರನ್ನ ಧ್ವಂಸ ಮಾಡಿದೆ ಅಂತ ಹೇಳಲಾಗ್ತಿದೆ. INS ವಿಕ್ರಾಂತನ ಶೌರ್ಯ ಕಂಡು ಪಾಕಿಸ್ತಾನದ ನೌಕಾಪಡೆ ನೆಲಕಚ್ಚಿದೆ.

1971ರ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನ ಚಿಂದಿ ಉಡಾಯಿಸಿತ್ತು. ಆ ಯುದ್ಧದಲ್ಲಿ INS ವಿಕ್ರಾಂತನ ಪಾತ್ರ ಬಹಳ ಮಹತ್ವವಾಗಿತ್ತು. ಅದೇ ಯುದ್ಧದ ಬಳಿಕವೇ ಬಾಂಗ್ಲಾದೇಶ ಪಾಕಿಸ್ತಾನದಿಂದ ಮುಕ್ತಿ ಪಡೆದು ಸ್ವತಂತ್ರ್ಯ ದೇಶವಾಯ್ತು.. ಇದೀಗ ಮತ್ತೆ ಕರಾಚಿಯಲ್ಲಿ ವಿಕ್ರಾಂತನ ಶಕ್ತಿಪ್ರದರ್ಶನದಿಂದ ಬಲೂಚಿಸ್ತಾನ ಉಗಮವಾಗಲಿದೆ ಅನ್ನೋ ಚರ್ಚೆಗಳು ಎಲ್ಲೆಡೆ ಹರಿದಾಡ್ತಿವೆ. ಭಾರತ ಪಾಕಿಸ್ತಾನದ ದಶದಿಕ್ಕುಗಳಿಂದಲೂ ಆವರಿಸಿ ಅಟ್ಯಾಕ್‌ ಮಾಡಿರುವ ಕಾರಣ ಪಾಕಿಸ್ತಾನಕ್ಕೆ ನೆಲೆಯೇ ಇಲ್ಲದಂತಾಗಿದೆ. ಹೀಗಿರುವಾಗಲೇ ಪಾಕಿಸ್ತಾನದಿಂದ ಮುಕ್ತಿಯ ಆಸೆ ಬಯಸಿದ್ದ ಬಲೂಚಿಸ್ತಾನಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ.

Also Read: Operation Sindoor : INS ವಿಕ್ರಾಂತ ಶಕ್ತಿ ಕಂಡು ಬೆದರಿದ ಪಾಕಿಸ್ತಾನ!

ಬಲೂಚಿಸ್ತಾನ ಅನ್ನೋದು ಪಾಕಿಸ್ತಾನದ ಒಂದು ಪ್ರಮುಖ ಪ್ರಾಂತ್ಯ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಪಾಕಿಸ್ತಾನದಿಂದ ಮುಕ್ತಿ ಪಡೆದು ಸ್ವತಂತ್ರ್ಯವಾಗುವ ಕನಸು ಬಲೂಚಿಸ್ತಾನಕ್ಕೆ ಬಹುಕಾಲದಿಂದ ಇದೆ ಎನ್ನಲಾಗಿದೆ. ಜೊತೆಗೆ ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಪಾಕಿಸ್ತಾನ ಅವಲಂಭಿಸಿರೋದು ಹೌದು.. ಬಲೂಚಿಸ್ತಾನದದಲ್ಲಿ ಜನಸಂಖ್ಯೆ ಕಡಿಮೆ ಇದ್ರೂ ಸಹಾ ಪಾಕಿಸ್ತಾನಕ್ಕೆ ಇದ್ರಿಂದ ಸಾಕಷ್ಟು ಲಾಭಗಳಿವೆ.. ಆದ್ರೆ ಬಲೂಚಿಸ್ತಾನ ಮಾತ್ರ ಪಾಕಿಸ್ತಾನ ರಾಜಕೀಯವಾಗಿ, ಪ್ರದೇಶಿಕವಾಗಿ ಹಾಗೂ ಅಭಿವೃದ್ಧಿ ವಿಚಾರದಲ್ಲಿ ತನ್ನನ್ನು ಕಡೆಗಣಿಸುತ್ತಿದೆ ಹಾಗಾಗಿ ಅದ್ರಿಂದ ಮುಕ್ತಿ ಬೇಕು ಅಂತ ಹಾತೊರೆಯುತ್ತಿದೆ. ಹೀಗಾಗಿ ಆಪರೇಷನ್‌ ಸಿಂದೂರ್‌ ಹೊತ್ತಲ್ಲೇ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಪಾಕಿಸ್ತಾನದ ಸೇನೆ ಮೇಲೆ ಅಟ್ಯಾಕ್‌ ಮಾಡಿದೆ. ಸಾಕಷ್ಟು ಸೈನಿಕರನ್ನ ಕೊಂದಿದೆ ಎನ್ನಲಾಗಿದೆ.

ಇತ್ತ ಭಾರತ.. ಅತ್ತ ಬಲೂಚಿಸ್ತಾನ ಲಿಬರೇಶನ್ ಆರ್ಮಿ ದಾಳಿ ನಡೆಸಿರುವ ಪರಿಣಾಮ ಪಾಕಿಸ್ತಾನಕ್ಕೆ ಉಸಿರುಗಟ್ಟಿದೆ. ಆರ್ಥಿಕವಾಗಿಯೂ ಕುಗ್ಗಿಹೋಗಿರುವ ಪಾಕಿಸ್ತಾನ ಬಲೂಚಿಸ್ತಾನವನ್ನ ಈ ಸಮಯದಲ್ಲಿ ಎದುರಿಸೋದು ಕಷ್ಟ. ಹೀಗಾಗಿ ಇಡೀ ಬಲೂಚಿಸ್ತಾನವೇ ಮುಕ್ತಿಗಾಗಿ ತಿರುಗಿಬಿದ್ರೆ ಪಾಕ್‌ಗೆ ಅದನ್ನ ಸ್ವತಂತ್ರ್ಯಗೊಳಿಸೋ ನಿರ್ಧಾರ ಬಿಟ್ಟು ಬೇರೆ ಯಾವುದೇ ಅವಕಾಶ ಇರೋದಿಲ್ಲ ಅಂತ ವಿಶ್ಲೇಷಿಸಲಾಗ್ತಿದೆ. ಸದ್ಯ ಎಲ್ಲರ ಚಿತ್ತ INS ವಿಕ್ರಾಂತನ ಮೇಲಿದೆ..

Share.
Leave A Reply