Most wanted terrorist: ಉಗ್ರರ ವಿರುದ್ಧ ಸಮರ ಮುಗಿದಾಯ್ತು.. ಪಹಲ್ಗಾಮ್‌ನಲ್ಲಿ ಅಮಾಯಕರ ರಕ್ತ ಹರಿಸಿದ ರಕ್ತಪಿಪಾಸುಗಳನ್ನು ಹುಡುಕಿ ಹತ್ಯೆ ಮಾಡಿದ್ದಾಯ್ತು.. ಆದ್ರೆ, ಉಗ್ರರ ಸಂಹಾರ ಇಷ್ಟಕ್ಕೇ ಮುಗಿದಿಲ್ಲ.. ಅಡಗಿ ಕುಳಿತ ಉಗ್ರರ ಕಥೆ ಮುಗಿಸಲು ಭಾರತ ಹೊಸ ಆಪರೇಷನ್‌ ಕೈಗೆತ್ತಿಕೊಂಡಿದೆ.. ಯಾರಿಗೂ ಗೊತ್ತಾಗದಂತೆ ಹುಡುಕಿ ಹುಡುಕಿ ಕೊಲ್ಲುವ ಕಾರ್ಯಕ್ಕೆ ಕೈ ಹಾಕಿದೆ.. ಅದಕ್ಕೆ ಸಾಕ್ಷಿಯೇ ಭಾರತದಲ್ಲಿ ಮೂರು ಕಡೆ ದಾಳಿ ನಡೆಸಿ ಪಾಕ್‌ನಲ್ಲಿ ಅಡಗಿ ಕುಳಿತಿದ್ದ ಕ್ರಿಮಿಯ ನಿಗೂಢ ಹತ್ಯೆಯಾಗಿದೆ.

ಲಷ್ಕರ್‌ ಎ ತೊಯ್ಬಾ ಸಂಘಟನೆಯ ಮೋಸ್ಟ್‌ ವಾಂಟೆಡ್‌ ಉಗ್ರ ಸೈಫುಲ್ಲಾ ಖಾಲಿದ್‌ ನಿಗೂಢವಾಗಿ ಹತ್ಯೆಯಾಗಿ ದ್ದಾನೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ದಾಳಿಕೋರರು ದಾಳಿ ಮಾಡಿ ಸೈಫುಲ್ಲಾ ಖಾಲಿದ್‌ ಕಥೆ ಮುಗಿಸಿದ್ದಾರೆ. ಆದ್ರೆ, ಈ ದಾಳಿಯ ಹಿಂದೆ ಭಾರತ ನಿಗೂಢ ಶಕ್ತಿಯ ನೆರಳಿದೆ ಅಂತಾ ಹೇಳಲಾಗ್ತಿದೆ. ಆ ಶಕ್ತಿ ಬೇರೆ ಯಾವುದೂ ಅಲ್ಲ. ಭಾರತದ ಬಾಹ್ಯ ಗುಪ್ತಚರ ಸಂಸ್ಥೆ. ಅಂದರೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ.

ಪಾಕಿಸ್ತಾನದಲ್ಲಿ ಹತನಾಗಿರುವ ಖಾಲಿದ್ ಭಾರತದಲ್ಲಿ ನಡೆದ 3 ದಾಳಿಗಳಲ್ಲಿ ಪ್ರಮುಖ ಸಂಚುಕೋರನಾಗಿದ್ದ. 2005 ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಮೇಲೆ ದಾಳಿ ನಡೆದಿತ್ತು. 2006 ರಲ್ಲಿ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಮೇಲೆ ಬಾಂಬ್‌ ಅಟ್ಯಾಕ್‌ ನಡೆದಿತ್ತು. 2008 ರಲ್ಲಿ ರಾಂಪುರದಲ್ಲಿ ಸಿಆರ್‌ಪಿಎಫ್ ಶಿಬಿರದ ದಾಳಿ ನಡೆದಿತ್ತು. ಈ ಮೂರು ದಾಳಿಗಳಲ್ಲಿ ಸೈಫುಲ್ಲಾ ಖಾಲಿದ್ ಪ್ರಮುಖ ಪಾತ್ರ ವಹಿಸಿದ್ದ.. ಭಾರತದಲ್ಲಿ ಎಲ್‌ಇಟಿಯ ಕಾರ್ಯಾಚರಣೆಗಳು ಹೆಚ್ಚಾಗಿದ್ವು. ವಿನೋದ್ ಕುಮಾರ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಲಿದ್ ಹಲವಾರು ವರ್ಷಗಳ ಕಾಲ ನೇಪಾಳದಲ್ಲಿ ನೆಲೆಸಿದ್ದ. ಅಲ್ಲಿ ನಕಲಿ ಗುರುತಿನಡಿಯಲ್ಲಿ ವಾಸಿಸುತ್ತಿದ್ದ. ಅಲ್ಲದೇ, ಸ್ಥಳೀಯ ಮಹಿಳೆ ನಗ್ಮಾ ಬಾನು ಎಂಬಾಕೆಯನ್ನು ವಿವಾಹವಾಗಿದ್ದ. ನೇಪಾಳದಿಂದ ಬಂದಿದ್ದ ಆತ ಎಲ್‌ಇಟಿಗಾಗಿ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ. ಉಗ್ರ ಸಂಘಟನೆಗೆ ಸದಸ್ಯರ ನೇಮಕಾತಿ ಮತ್ತು ಸರಕು ಸಾಗಾಣಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಅಂತಾ ಹೇಳಲಾಗುತ್ತಿದೆ..

Also Read: ವೇಗದಲ್ಲಿ ಕೊಹ್ಲಿ ಹಿಂದಿಕ್ಕಿದ ಕನ್ನಡಿಗ.. T20 ಟೀಂಗೂ ಕೆ.ಎಲ್‌. Rahul ಎಂಟ್ರಿ..!

ಇಷ್ಟೆಲ್ಲಾ ಉಗ್ರ ಚಟುವಟಿಕೆ ಮಾಡ್ತಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಖಾಲಿದ್‌ ಹತ್ಯೆ ಮಾಡಲು ಭಾರತ ನಿಗೂಢ ಕಾರ್ಯಾಚರಣೆ ನಡೆಸಿದೆ.. ಪಹಲ್ಗಾಮ್‌ ದಾಳಿಕೋರರನ್ನು ಆಪರೇಷನ್‌ ಸಿಂಧೂರ ಹೆಸರಿನಲ್ಲಿ ಹುಡುಕಿ ಕೊಂದರೆ, ಯಾರ ಕೈಗೂ ಸಿಗದ ಈ ಪಾತಕಿಯನ್ನು ನಿಗೂಢವಾಗಿ ಕೊಲ್ಲಲಾಗಿದೆ.. ಇದರ ಹಿಂದೆ ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ಕೆಲಸ ಮಾಡಿದೆ ಅಂತಾ ಹೇಳಲಾಗ್ತಿದೆ.. ಆತನ ಎಲ್ಲಾ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆತನನ್ನು ಗನ್‌ಮ್ಯಾನ್‌ ಕಡೆಯಿಂದಲೇ ಹತ್ಯೆ ಮಾಡಿಸಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ..

ಒಟ್ನಲ್ಲಿ, ಪಹಲ್ಗಾಮ್‌ ದಾಳಿಕೋರರ ಸಂಹಾರಕ್ಕೆ ಆಪರೇಷನ್‌ ಸಿಂಧೂರ ನಡೆಸಲಾಗಿದೆ.. ಆದ್ರೆ, ತಲೆಮರೆಸಿಕೊಂಡ ಮೋಸ್ಟ್‌ ವಾಂಟೆಡ್‌ ಉಗ್ರರಿಗೆ ಭಾರತೀಯ ರಾ ಸಂಸ್ಥೆ ಆಪರೇಷನ್‌ ಸೀಕ್ರೆಟ್‌ ಕೈಗೆತ್ತಿಕೊಂಡಿದೆ.. ಹೀಗಾಗಿ, ಉಗ್ರರು ಎಲ್ಲೇ ಅಡಗಿದ್ದರೂ ಬದುಕುಳಿಯೋಕೆ ಸಾಧ್ಯವೇ ಇಲ್ಲ..

Share.
Leave A Reply